ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಭಾರತದಲ್ಲಿ ಮಾತ್ರವಲ್ಲ ಜಪಾನ್ ಸೇರಿದಂತೆ ವಿದೇಶಗಳಲ್ಲಿಯೂ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಬಹುತೇಕ ಚಿತ್ರಗಳ ಹಾಡುಗಳು, ಸಂಭಾಷಣೆಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತೆ ಮಾಡುತ್ತವೆ.

ಈಗ, ‘ಜೈಲರ್’ ಚಿತ್ರದ ‘ಕಾವಾಲಯ್ಯ’ ಎಂಬ ಹಾಡಿಗೆ ಭಾರತದಲ್ಲಿನ ಜಪಾನ್ ರಾಯಭಾರಿ ಹಿರೋಷಿ ಸುಜುಕಿ ಅವರು ಹೆಜ್ಜೆ ಹಾಕಿದ್ದಾರೆ. ವಿಡಿಯೊವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ಗಮನ ಸೆಳೆಯುತ್ತಿದೆ.

17 ಸೆಕೆಂಡ್ಗಳ ವಿಡಿಯೊದಲ್ಲಿ ಸುಜುಕಿ ಅವರು ಖ್ಯಾತ ಯೂಟ್ಯೂಬರ್ ಮೆಯೊ ಸ್ಯಾನ್ ಅವರೊಂದಿಗೆ ಕುಣಿದಿದ್ದು, ಜಪಾನಿಯರ ಗುಂಪೊಂದು ಹಿಮ್ಮೇಳದಲ್ಲಿದೆ. ನೀಲಿ ಬಣ್ಣದ ಟ್ರೌಸರ್ ಹಾಗೂ ಬ್ಲೇಜರ್, ಬಿಳಿ ಅಂಗಿ ಧರಿಸಿರುವ ಅವರು, ಚಿತ್ರದಲ್ಲಿ ರಜನೀಕಾಂತ್ ನೃತ್ಯದ ದೃಶ್ಯಗಳ ಮರುಸೃಷ್ಟಿಗೆ ಯತ್ನಿಸಿದ್ದಾರೆ.

‘ನಾನು ರಜನೀಕಾಂತ್ ಅವರ ಕಟ್ಟಾ ಅಭಿಮಾನಿ’ ಎಂದು ಹೇಳಿಕೊಳ್ಳುವ ಸುಜುಕಿ, ಕನ್ನಡಕ ಹಾಕಿಕೊಳ್ಳುವಾಗಿನ ರಜನೀಕಾಂತ್ ಅವರ ವಿಶಿಷ್ಟ ಶೈಲಿಯನ್ನು ಅನುಕರಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.