ನವದೆಹಲಿ: ಆಪಲ್ ಕಂಪನಿಯ ಹೊಸ ಮೊಬೈಲ್ ಫೋನ್ ಮಾದರಿ ಬಿಡುಗಡೆಯಾದಾಗಲೆಲ್ಲ ಬಳಕೆದಾರರು ಹೊಸ ಫೋನ್ ಕೊಳ್ಳಲು ಉತ್ಸುಕರಾಗಿರುತ್ತಾರೆ. ಇದೀಗ ಇದೇ ಆಪಲ್ ಕಂಪನಿಯು ಐಫೋನ್–15 ಸರಣಿಯನ್ನು ಎರಡು ದಿನಗಳ ಹಿಂದೆ (ಸೆ.22) ಬಿಡುಗಡೆ ಮಾಡಿದೆ. ಹೊಸ ಫೋನ್ ಅನಾವರಣಗೊಂಡ ಕೆಲವೇ ಗಂಟೆಗಳಲ್ಲಿ ಅದರ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಈ ನಡುವೆ, ಅಂಗಡಿಗೆ ಬಂದಾಗ ಸಿಬ್ಬಂದಿಯು ಐಫೋನ್ 15 ಮಾದರಿಯನ್ನು ನೀಡಲು ತಡಮಾಡಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಅಂಗಡಿಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹರಿದಾಡುತ್ತಿದೆ.
ವಿಡಿಯೊದಲ್ಲಿ ಇಬ್ಬರು ಗ್ರಾಹಕರು ಅಂಗಡಿಯಲ್ಲಿದ್ದ ಸಿಬ್ಬಂದಿಯ ಶರ್ಟ್ ಎಳೆದಾಡಿ ಹೊಡೆದ ದೃಶ್ಯವಿದೆ.
ದೆಹಲಿಯ ಕಮಲಾ ನಗರದಲ್ಲಿನ ಮೊಬೈಲ್ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನೆಯ ಬಗ್ಗೆ ಸ್ವತಃ ದೆಹಲಿ ಪೊಲೀಸರೇ ಕಾನೂನು ಕ್ರಮ ಕೈಗೊಂಡಿದ್ದು, ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದ ಗ್ರಾಹಕನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.