ಬೆಂಗಳೂರು: ರೀಲ್ಸ್ ಅಂತಹ ಶಾರ್ಟ್ ವಿಡಿಯೊ ಗೀಳಿಗೆ ಅನೇಕ ಯುವ ಜನತೆ ಇತ್ತೀಚೆಗೆ ವಿಪರೀತವಾಗಿ ನಡೆದುಕೊಂಡು ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳುವುದನ್ನು ನೋಡುತ್ತಿರುತ್ತೇವೆ.

ಅದರಲ್ಲೂ ಕೆಲವರು ರೀಲ್ಸ್ಗಾಗಿ ಭಯಂಕರ ಸಾಹಸ ಮಾಡಲು ಹೋಗಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುವ ಘಟನೆಗಳು ಮರುಕಳಿಸುತ್ತಲೇ ಇವೆ.

ಇಂತಹದ್ದೇ ಒಂದು ಘಟನೆ ತೆಲಂಗಾಣದಲ್ಲಿ ಇತ್ತೀಚೆಗೆ ನಡೆದಿದ್ದು ಆ ವಿಡಿಯೊ ನೋಡಿ ಸ್ವತಃ ಹೈದರಾಬಾದ್ ಪೊಲೀಸ್ ಕಮಿಷನರ್, ಹಿರಿಯ ಐಪಿಎಸ್ ಅಧಿಕಾರಿ ಕನ್ನಡಿಗ ವಿ.ಸಿ ಸಜ್ಜನವರ ಅವರು ದಂಗಾಗಿದ್ದಾರೆ.

ಯುವಕನೊಬ್ಬ ರೀಲ್ಸ್ ವಿಡಿಯೊಗಾಗಿ ರೈಲು ವೇಗವಾಗಿ ಹೋಗುವಾಗ ಅದೇ ರೈಲು ಹಳಿಯಲ್ಲಿ ಮಲಗಿ ಹುಚ್ಚಾಟ ಮೆರೆದಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಆದರೆ, ಎಲ್ಲಿ ನಡೆದಿರುವುದು ಎಂಬುದನ್ನು ಪೊಲೀಸ್ ಕಮಿಷನರ್ ಮಾಹಿತಿ ನೀಡಿಲ್ಲ.

ವೈರಲ್ ಆಗಲು ಇಂತಹ ಸಾಹಸಗಳನ್ನು ಮಾಡುವುದು ನಿಮ್ಮ ಧೈರ್ಯ ತೋರಿಸುವುದಿಲ್ಲ. ಅಂತವರನ್ನು ಹುಚ್ಚರು ಎನ್ನುತ್ತಾರೆ. ಒಂದು ಕ್ಷಣದ ತಪ್ಪು ಸಹ ಅವರ ಜೀವನವನ್ನೇ ಮುಗಿಸಿಬಿಡುತ್ತದೆ ಎಂದು ಈ ರೀತಿಯ ವಿಡಿಯೊ ಮಾಡುವವರನ್ನು ಎಚ್ಚರಿಸಿದ್ದಾರೆ.

ಇನ್ನು, ಸಜ್ಜನವರ ಅವರ ವಿಡಿಯೊಗೆ ಹಲವರು ಕಾಮೆಂಟ್ಗಳನ್ನು ಹಾಕಿದ್ದು, ಇಂತವರನ್ನು ಬಂಧಿಸಿ ಜೈಲಿಗೆ ಅಟ್ಟುವುದು ಮುಖ್ಯ. ರೈಲ್ವೆ ಇಲಾಖೆ ಇಂತಹವರ ಮೇಲೆ ನಿಗಾ ಇಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.