ಮಂಗಳವಾರ, ಜನವರಿ 18, 2022
23 °C

ಮದುವೆಗೂ ಮುನ್ನ ಸಿಂಗರಿಸಿಕೊಂಡ ವಧು ಜಿಮ್‌ನಲ್ಲಿ ವರ್ಕೌಟ್‌, ವಿಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣ ಮತ್ತು ಲಾಕ್‌ಡೌನ್‌ನಿಂದಾಗಿ ಸಾಕಷ್ಟು ವಿವಾಹ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದ್ದವು. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಎಲ್ಲಾ ರೀತಿಯ ಕಠಿಣ ಕ್ರಮಗಳನ್ನು ತೆರವುಗೊಳಿಸಿದ ಬೆನ್ನಲ್ಲೇ ವಿವಾಹ ಕಾರ್ಯಕ್ರಮಗಳ ಸಂಖ್ಯೆ ಏರಿದೆ. ಪ್ರಮುಖವಾಗಿ ದಿಲ್ಲಿಯಲ್ಲಿ ಇತರ ತಿಂಗಳುಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ಮದುವೆ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಿದೆ.

ಸಾಮಾಜಿಕ ತಾಣಗಳಲ್ಲಿ ವಿವಾಹದ ಪೋಸ್ಟ್‌ಗಳೇ ತುಂಬಿ ಹೋಗಿವೆ. ಈ ನಡುವೆ ವಧುವೊಬ್ಬರು ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿರುವ ವಿಡಿಯೊ ವೈರಲ್‌ ಆಗಿದೆ. 

ಕಿತ್ತಳೆ ಮತ್ತು ಕೆಂಪು ಬಣ್ಣದ ಸುಂದರ ಸೀರೆಯನ್ನುಟ್ಟುಕೊಂಡ ಮದುಮಗಳು ಡಂಬಲ್ಸ್‌ ಹಿಡಿದು ವರ್ಕ್‌ಔಟ್‌ ಮಾಡುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ.  ಸಂಪ್ರದಾಯಬದ್ಧವಾಗಿ ಸಿದ್ಧಗೊಂಡ, ಸಿಂಗರಿಸಿಕೊಂಡ ವಧು ಡಂಬಲ್ಸ್‌ ಎತ್ತುವುದನ್ನು ಛಾಯಾಗ್ರಾಹಕ ಸೆರೆ ಹಿಡಿಯುತ್ತಿರುವುದು ವಿಡಿಯೊದಲ್ಲಿದೆ. ಐಬಿಬಿದಿಲ್ಲಿಎನ್‌ಸಿಆರ್‌ (lbbdelhincr) ಹೆಸರಿನ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ, ಅನು ಸೆಹಗಲ್‌ ಹೆಸರಿನ ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಕ್ರೆಡಿಟ್‌ ಕೊಟ್ಟು ಈ ವಿಡಿಯೊ ಶೇರ್‌ ಮಾಡಿದ್ದಾರೆ.

ನಾರಿ ಶಕ್ತಿ ಮತ್ತು ಸೌಂದರ್ಯದ ಪ್ರತೀಕ ಎಂದು ಶ್ಲಾಘಿಸುತ್ತಿರುವ ಮಂದಿ ಈ ವಿಡಿಯೊವನ್ನು ಸ್ಟೇಟಸ್‌ಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು