ಬೆಂಗಳೂರು: ನಕಲಿ ರೈಲು ಟಿಕೆಟ್ ಪರೀಕ್ಷಕಿಯನ್ನು (ಟಿಟಿಇ) ರೈಲ್ವೆ ರಕ್ಷಣಾ ದಳ ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ಈಚೆಗೆ ನಡೆದಿದೆ.
ಟಿಟಿಇ ವೇಷದಲ್ಲಿ ಮಧ್ಯಪ್ರದೇಶದ ಪಾತಾಳಕೋಟ್ ಎಕ್ಸ್‌ಪ್ರೆಸ್ ರೈಲು (Train number 14624) ಪ್ರವೇಶಿಸಿದ್ದ ಮಹಿಳೆ ಪ್ರಯಾಣಿಕರಿಗೆ ಟಿಕೆಟ್ ತೋರಿಸಿ ಎಂದು ಕೇಳಿದ್ದಾರೆ. ಈ ವೇಳೆ ಅನುಮಾನಗೊಂಡ ಕೆಲವರು ನಿಮ್ಮ ಗುರುತಿನ ಚೀಟಿಯನ್ನು ತೋರಿಸಿ ಎಂದು ಮರು ಪ್ರಶ್ನಿಸಿದ್ದಾರೆ.
ಆಗ ಗುರುತಿನ ಚೀಟಿ ತೋರಿಸಲು ನಿರಾಕರಿಸಿದ ಮಹಿಳೆ ಬಗ್ಗೆ ಅನುಮಾನಗೊಂಡ ಕೆಲ ಪ್ರಯಾಣಿಕರು ಆರ್‌ಪಿಎಫ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಝಾನ್ಸಿ ಆರ್‌ಪಿಎಫ್ ಪೊಲೀಸರು ಮಹಿಳೆಯನ್ನು ಬಂಧಿಸಿ ರೈಲ್ವೆ ಪೊಲೀಸ್ ವಶಕ್ಕೆ ನೀಡಿದ್ದಾರೆ.
ಈ ಕುರಿತು ರಿಪಬ್ಲಿಕ್ ವೆಬ್‌ಸೈಟ್ ವರದಿ ಮಾಡಿದ್ದು, ವಿಡಿಯೊ ಹಂಚಿಕೊಂಡಿದೆ.