ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಹಾರುವ ವೇಳೆ ವಿಮಾನದ ಎಂಜಿನ್‌ಗೆ ಬೆಂಕಿ– ಸುರಕ್ಷಿತ ಲ್ಯಾಂಡಿಂಗ್!

Published 19 ಆಗಸ್ಟ್ 2023, 11:24 IST
Last Updated 19 ಆಗಸ್ಟ್ 2023, 11:24 IST
ಅಕ್ಷರ ಗಾತ್ರ

ಟೆಕ್ಸಾಸ್‌: ಹೂಸ್ಟನ್‌ನಿಂದ ಕ್ಯಾನ್‌ಕನ್‌ಗೆ ಹೋಗುತ್ತಿದ್ದ ‘ಸೌತ್‌ವೆಸ್ಟ್‌ ಏರ್‌ಲೈನ್ಸ್‌’ ವಿಮಾನ ಟೆಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಎಂಜಿನ್‌ಗೆ ಬೆಂಕಿ ತಗುಲಿದ್ದು, ಪ್ರಯಾಣಿಕರೊಬ್ಬರು ಅದನ್ನು ವಿಡಿಯೊ ಮಾಡಿದ್ದಾರೆ.

ಮಂಗಳವಾರ ಈ ಘಟನೆ ನಡೆದಿದ್ದು, ವಿಮಾನ ಹಾರುವ ವೇಳೆ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಹೂಸ್ಟನ್‌ನ ಪಿ.ಹಾಬಿ ನಿಲ್ದಾಣದಿಂದ 307 ವಿಮಾನ ಟೇಕ್‌ ಆಫ್‌ ಆಗಿತ್ತು. ಈ ವೇಳೆ ತಾಂತ್ರಿಕ ಸಮಸ್ಯೆಗಳಿಂದ ಎಂಜಿನ್‌ಗೆ ಬೆಂಕಿ ತಗುಲಿದೆ. ತಕ್ಷಣ ಪಿ.ಹಾಬಿ ನಿಲ್ದಾಣಕ್ಕೆ ವಾಪಸ್‌ ತಂದು ಸುರಕ್ಷಿತವಾಗಿ ಲ್ಯಾಂಡ್‌ ಮಾಡಲಾಗಿದೆ. ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಕ್ಯಾನ್‌ಕನ್‌ಗೆ ಕಳುಹಿಸಲಾಗಿದೆ ಎಂದು ಸೌತ್‌ವೆಸ್ಟ್‌ ಏರ್‌ಲೈನ್ಸ್‌ ವಕ್ತಾರ ಅಲಿಸ್ಸಾ ಫೋಸ್ಟರ್‌ ಮಾಹಿತಿ ನೀಡಿದ್ದಾರೆ.

ಅಪಾಯದ ಸಮಯದಲ್ಲಿ ಸಂಯಮ ವಹಿಸಿದ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಯ ವೃತ್ತಿಪರತೆಗೆ ಶ್ಲಾಘಿಸಬೇಕಿದೆ ಎಂದು ಫೋಸ್ಟರ್‌ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT