ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಮೀನಿಗೂ ಮಾನವನಂತೆ ಹಲ್ಲುಗಳಿವೆ !

Published 25 ಜುಲೈ 2023, 5:12 IST
Last Updated 25 ಜುಲೈ 2023, 5:12 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮಾನವನಂತೆ  ಹಲ್ಲುಗಳಿರುವ ಮೀನು ಪತ್ತೆಯಾಗಿದೆ ಒಕ್ಲಾಹೊಮ  ರಾಜ್ಯದಲ್ಲಿ 11 ವರ್ಷದ ಬಾಲಕನೊಬ್ಬ ಮೀನು ಹಿಡಯಲು ಹೋದಾಗ ಈ ಮೀನು ಸಿಕ್ಕಿದೆ ಎಂದು ಲೈವ್ ಸೈನ್ಸ್‌ ವರದಿ ತಿಳಿಸಿದೆ.

ಮಾನವನ ಹಲ್ಲಿನ ರೀತಿಯಿರುವ ಮೀನಿನ ಫೋಟೊವನ್ನು ವನ್ಯಜೀವಿ ಸಂರಕ್ಷಣಾ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಪಾಕು ಕುಟುಂಬಕ್ಕೆ ಸೇರಿದ ಈ ಮೀನಿನ ಮೂಲ ದಕ್ಷಿಣ ಆಫ್ರಿಕಾ. ಇದು ಸಸ್ಯಾಹಾರಿ ಮೀನಾಗಿದೆ. ಇವು ಮನುಷ್ಯರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಇದು 3.5 ಅಡಿ ಇದ್ದು 88 ಪೌಂಡ್ಸ್‌ ತೂಕ ಇರಲಿದೆ.

ಬಹುಮುಖ್ಯವಾಗಿ ಅವು ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಹಾನಿ ಉಂಟುಮಾಡುವ ವಿಲಕ್ಷಣ, ಆಕ್ರಮಣಕಾರಿ ಪ್ರಭೇದಗಳಾಗಿವೆ ಎಂದು ಇಲಾಖೆಯು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT