ಭಾನುವಾರ, ಜುಲೈ 3, 2022
24 °C

ಪತ್ನಿ ಜತೆಗೆ ಲಾಕ್‌ಡೌನ್ ವರ್ಕೌಟ್ ವಿಡಿಯೊ ಪೋಸ್ಟ್ ಮಾಡಿದ ಚಹಲ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಲಾಕ್‌ಡೌನ್ ಸಮಯದಲ್ಲಿ ಕ್ರಿಕೆಟಿಗ ಯಜುವೇಂದ್ರ ಚಹಲ್ ಪತ್ನಿ ಧನಶ್ರೀ ಜತೆಗೆ ಕಾಲ ಕಳೆಯುತ್ತಿದ್ದಾರೆ. ಆದರೆ ಈ ಅವಧಿಯಲ್ಲಿ ಚಹಲ್ ವಿವಿಧ ರೀತಿಯ ವರ್ಕೌಟ್ ಮೂಲಕ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.

ಪತ್ನಿ ಧನಶ್ರೀ ಜತೆಗೆ ವರ್ಕೌಟ್ ಮಾಡುತ್ತಿರುವ ವಿಡಿಯೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಚಹಲ್, ಪ್ರತಿದಿನವೂ ವರ್ಕೌಟ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಫಿಟ್ನೆಸ್ ಕಾಪಾಡಿಕೊಳ್ಳುತ್ತಿರುವ ಬಗ್ಗೆ ತಿಳಿಸಿದ್ದಾರೆ.

ಚಹಲ್ ಪೋಸ್ಟ್ ಮಾಡಿರುವ ಇನ್‌ಸ್ಟಾಗ್ರಾಂ ರೀಲ್ಸ್ ವಿಡಿಯೊಗೆ ಅಭಿಮಾನಿಗಳು ಲೈಕ್ ಮತ್ತು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಅದರಲ್ಲೂ ಕೆಲವರು ನೀವು ಗ್ರೇಟ್ ಖಲಿ ಜತೆಗೆ ವರ್ಕೌಟ್ ಮಾಡಬೇಕಿತ್ತು ಎಂದರೆ, ಇನ್ನು ಕೆಲವರೂ ಈ ಬಾರಿಯಾದರೂ ಸ್ವಲ್ಪ ದೇಹತೂಕ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಮತ್ತೆ ಕೆಲವರು ಪತ್ನಿ ಧನಶ್ರೀ ಜತೆಗೆ ಡ್ಯಾನ್ಸ್ ಮಾಡುವ ವಿಡಿಯೊ ಪೋಸ್ಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು