ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಆಳೆತ್ತರಕ್ಕೆ ಎದ್ದು ನಿಂತ ಕಾಳಿಂಗ ಸರ್ಪ: ಅಬ್ಬಾ! ಎಂದ ನೆಟ್ಟಿಗರು

Last Updated 28 ಫೆಬ್ರುವರಿ 2023, 15:43 IST
ಅಕ್ಷರ ಗಾತ್ರ

ಬೆಂಗಳೂರು: ನೋಡುಗರ ಎದೆಯಲ್ಲಿ ಭಯ ಹುಟ್ಟಿಸುವ ಕಾಳಿಂಗ ಸರ್ಪ ಮಳೆಕಾಡುಗಳಲ್ಲಿ ಆಗಾಗ ಅಪರೂಪಕ್ಕೆ ಎಂಬಂತೆ ಕಾಣಸಿಗುತ್ತದೆ.

ಕಾಳಿಂಗ ಸರ್ಪ ಬುಸುಗುಟ್ಟುತ್ತಾ ಕೇವಲ ತೆವಳುತ್ತಾ ಹೋಗುವುದಿಲ್ಲ. ಕೆಲ ಸಂದರ್ಭಗಳಲ್ಲಿ ಆಳೆತ್ತರಕ್ಕೆ ಎದ್ದು ನಿಂತು ನೋಡುಗರು ಬೆಚ್ಚಿ ಬೀಳುವಂತೆ ಮಾಡುತ್ತದೆ. ಇದೀಗ ಇಂತಹದೇ ಸನ್ನಿವೇಶವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವಿಡಿಯೊವನ್ನು ಸುಶಾಂತ್ ನಂದಾ ಎಂಬ ಐಎಫ್‌ಎಸ್ ಅಧಿಕಾರಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ನೋಡುಗರು ಅಬ್ಬಾ ಎಂದು ಕಣ್ಣರಳಿಸಿದ್ದಾರೆ.

ಇದು ಎಲ್ಲಿ ಪತ್ತೆಯಾಗಿರುವುದು ಎಂಬ ಸ್ಪಷ್ಟತೆ ಇಲ್ಲವಾದರೂ ಕಾಳಿಂಗ ಸರ್ಪ ಸಹಜವಾಗಿ ತನ್ನ ದೇಹದ 3ನೇ ಎರಡರಷ್ಟು ಭಾರವನ್ನು ಬಾಲದ ಮೇಲೆ ಹೊತ್ತು ನಿಲ್ಲಬಹುದು. ಉದಾಹರಣೆಗೆ 15 ಅಡಿ ಇರುವ ಕಾಳಿಂಗ ಆರೇಳು ಅಡಿ ಎದ್ದು ನಿಲ್ಲಬಹುದು ಎಂದು ವಿಶ್ಲೇಷಕರು ಮಾಹಿತಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT