ಲಾಸ್ ಏಂಜಲೀಸ್: 1963 ರಲ್ಲಿ ಚಂದ್ರನ ಅಂಗಳದಲ್ಲಿ ಕಾಲಿಟ್ಟು ಬಂದು ಮಹತ್ವದ ಸಾಧನೆ ಮಾಡಿದ್ದ ಅಮೆರಿಕದ ಗಗನಯಾನಿ ಬುಜ್ ಅಲ್‌ಡ್ರಿನ್ ಅವರು ಇದೀಗ ತಮ್ಮ 93ನೇ ವಯಸ್ಸಿನಲ್ಲಿ ನಾಲ್ಕನೇ ಮದುವೆಯಾಗಿ ಸುದ್ದಿಯಾಗಿದ್ದಾರೆ.
ಹೌದು, ನಾಸಾದ ಮಾಜಿ ಗಗನಯಾನಿ, ಫೈಟರ್ ಪೈಲಟ್, ಸಕ್ರಿಯ ವಿಜ್ಞಾನಿಯಾಗಿರುವ ಬುಜ್ ಅವರು ಈ ಇಳಿವಯಸ್ಸಿನಲ್ಲಿ ತಮ್ಮ ಬಹುಕಾಲದ ಗೆಳತಿ ಡಾ. ಅಂಕಾ ಫೌರ್ ಅವರನ್ನು ವಿವಾಹವಾಗಿದ್ದಾರೆ. ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಖಾಸಗಿಯಾಗಿ ತಮ್ಮ ಅತ್ಯಾಪ್ತರ ಸಮ್ಮುಖದಲ್ಲಿ ಬುಜ್ 64 ವರ್ಷದ ಅಂಕಾ ಅವರನ್ನು ವರಿಸಿದ್ದಾರೆ.
ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ಬುಜ್ ಅವರು, ‘ನನ್ನ 93 ನೇ ಜನ್ಮದಿನದ ಈ ಸಂದರ್ಭದಲ್ಲಿ ನಾನು ಬಹುವಾಗಿ ಗೌರವಿಸುವ ಅಂಕಾ ಅವರರೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ. ಹದಿಹರೆಯದ ಜೋಡಿ ಮನೆಯಿಂದ ಓಡಿಹೋಗುವಂತೆ ನನ್ನ ಮನ ಇಂದು ಕುಣಿಯುತ್ತಿದೆ’ ಎಂದು ಹೇಳಿದ್ದಾರೆ.
ಜುಜ್ ಅವರು ನಾಲ್ಕನೇ ಮದುವೆಯಾಗಿರುವ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದು, ಅನೇಕರು, ‘ಮತ್ತೊಮ್ಮೆ ಚಂದ್ರನ ಮೇಲೆ ಕಾಲಿಡಲು ನೀವು ತಯಾರಾಗಿದ್ದಿರಾ?’ ಎಂದು ಕಮೆಂಟ್ ಮಾಡಿದ್ದಾರೆ.
ಈ ಮೊದಲು 1954 ರಲ್ಲಿ ಜೋಆನ್, 1975ರಲ್ಲಿ ಬೇವರ್ಲಿ, 1988ರಲ್ಲಿ ಲೂಯೀಸ್ ಡ್ರಿಗ್ಸ್ ಅವರನ್ನು ಬುಜ್ ವಿವಾಹವಾಗಿದ್ದರು.
ನಾಸಾದ ಗಗನಯಾನಿಗಳಾಗಿದ್ದ ನೀಲ್ ಅರ್ಮ್‌ಸ್ಟ್ರಾಂಗ್, ಮಿಚೆಲ್ ಕೋಲಿನ್ಸ್ ಜೊತೆ 1969ರಲ್ಲಿ ಬುಜ್ ಅವರು ಅಪೋಲೊ 11 ನೌಕೆಯ ಮೂಲಕ ಚಂದ್ರನ ಅಂಗಳದಲ್ಲಿ ಕಾಲಿಟ್ಟು ಬಂದಿದ್ದರು. 1971ರಲ್ಲಿ ನಾಸಾದಿಂದ ನಿವೃತ್ತಿಯಾಗಿದ್ದರು. ಬಳಿಕ 1978ರಲ್ಲಿ ಸ್ಪೇಸ್‌ಶೇರ್ ಎಂಬ ಎನ್‌ಜಿಎ ತೆರೆದು ಅದರ ಮೂಲಕ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ವಿಶೇಷವೆಂದರೆ ಬುಜ್ ಅವರು ಜೀವಂತ ದಂತಕಥೆ ಎನಿಸಿಕೊಂಡಿದ್ದಾರೆ. ಏಕೆಂದರೆ ಚಂದ್ರನ ಅಂಗಳದಲ್ಲಿ ಕಾಲಿಟ್ಟು ಬಂದಿದ್ದ ಗಗನಯಾನಿಗಳಲ್ಲಿ ಸದ್ಯ ಬದುಕಿರುವವರು ಬುಜ್ ಒಬ್ಬರೇ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.