ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಡೋನಾಲ್ಡ್‌ ಟ್ರಂಪ್‌ ಜೊತೆ ಗಾಲ್ಫ್‌ ಆಡಿದ ಧೋನಿ

Published 8 ಸೆಪ್ಟೆಂಬರ್ 2023, 7:11 IST
Last Updated 8 ಸೆಪ್ಟೆಂಬರ್ 2023, 7:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಇಬ್ಬರೂ ಗಾಲ್ಫ್‌ ಆಟವನ್ನು ಆಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಧೋನಿ ಹಾಗೂ ಟ್ರಂಪ್‌ ಗಾಲ್ಫ್‌ ಆಟದ ಉಡುಪಿನಲ್ಲಿರುವ ಪೋಟೊವನ್ನು ಎಕ್ಸ್‌ನಲ್ಲಿ ಹಲವರು ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ಮುಫದ್ದಲ್ ವೋಹ್ರಾ ಕೂಡ ಧೋನಿ ಹಾಗೂ ಟ್ರಂಪ್‌ ಗಾಲ್ಫ್‌ ಆಡುತ್ತಿರುವ ವಿಡಿಯೊ ಹಂಚಿಕೊಂಡು ‘ಎಂಎಸ್‌ಡಿ ಒಬ್ಬ ಐಕಾನ್‌ ಮತ್ತು ಲೆಜೆಂಡ್‌’ ಎಂದು ಬರೆದುಕೊಂಡಿದ್ದಾರೆ.

ಯುಎಸ್ ಓಪನ್ 2023 ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲ್ ಪಂದ್ಯ ವೀಕ್ಷಿಸಲು ಧೋನಿ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದರು. 

ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿರುವ ಧೋನಿ ಹಾಗೂ ಸದಾ ಅಮೆರಿಕ ರಾಜಕೀಯದಲ್ಲಿ ತೊಡಗಿರುವ ಟ್ರಂಪ್‌ ಅವರು ಒಟ್ಟಿಗೆ ಕಾಣಿಸಿಕೊಂಡಿರುವುದು ನೆಟ್ಟಿಗರಲ್ಲಿ ಅಚ್ಚರಿ  ಮೂಡಿಸಿದೆ.

ಧೋನಿ ಹಾಗೂ ಟ್ರಂಪ್‌ ಜೊತೆಗಿರುವ ಫೋಟೊವನ್ನು ದುಬೈ ಮೂಲದ ಉದ್ಯಮಿ ಹಿತೇಶ್‌ ಸಂಗ್ವಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT