ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಟಿಕೆ ವಸ್ತುವೆಂದು ಹಾವನ್ನು ಕಚ್ಚಿ ಸಾಯಿಸಿದ ಮಗು: ಅಪಾಯದಿಂದ ಪಾರು

Published 22 ಆಗಸ್ಟ್ 2024, 6:55 IST
Last Updated 22 ಆಗಸ್ಟ್ 2024, 6:55 IST
ಅಕ್ಷರ ಗಾತ್ರ

ಬಿಹಾರ: ಒಂದು ವರ್ಷದ ಮಗುವೊಂದು ಆಟಿಕೆ ವಸ್ತುವೆಂದು ತಿಳಿದು ಸಣ್ಣ ಹಾವನ್ನು ಕಚ್ಚಿ ಸಾಯಿಸಿದ ಘಟನೆ ಬಿಹಾರದ ಗಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿರುವುದಾಗಿ ವರದಿಯಾಗಿದೆ. 

ಮನೆಯ ಟೆರೆಸ್‌ ಮೇಲೆ ಆಟವಾಡುತ್ತಿದ್ದಾಗ ಆಟದ ವಸ್ತುವೆಂದು ತಿಳಿದು ಮಗು ಹಾವನ್ನು ಕಚ್ಚಿದೆ. ಇದನ್ನು ಕಂಡ ತಾಯಿ ತಕ್ಷಣವೇ ಮಗುವಿನ ಬಳಿ ಬಂದು ಬಾಯಲಿದ್ದ ಹಾವನ್ನು ಎಸೆದಿದ್ದಾರೆ. ಘಟನೆಯಲ್ಲಿ ಹಾವು ಮೃತಪಟ್ಟಿದೆ. ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಗುವಿಗೆ ಯಾವುದೇ ಪ್ರಾಣಾಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಹಾವು ವಿಷಕಾರಿಯಲ್ಲ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸರಿಸೃಪವಾಗಿದೆ ಎಂದು ವೈದ್ಯರು ವಿವರಿಸಿರುವುದಾಗಿ ವರದಿಯಾಗಿದೆ. 

ಸದ್ಯ ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT