ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೂಟರ್‌ ಸೀಟ್‌ ಮೇಲೆ ನಿಂತು ಶ್ವಾನದ ಸವಾರಿ; ಇದು ಭಾರತದಲ್ಲಿ ಮಾತ್ರ!

Last Updated 10 ಡಿಸೆಂಬರ್ 2019, 5:13 IST
ಅಕ್ಷರ ಗಾತ್ರ

'ಭಾರತದಲ್ಲಿ ಏನು ಬೇಕಾದರೂ ನಡೆಯಬಹುದು, ಇದು ಭಾರತದಲ್ಲಿ ಮಾತ್ರ ನಡೆಯುವುದು,...' ಇಂಥ ಹಲವು ಟ್ಯಾಗ್‌ಗಳ ಮೂಲಕ ಹತ್ತು ಹಲವು ಅಪರೂಪದ ವಿಡಿಯೊ ಮತ್ತು ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಆದರೆ, ಬಿಬಿಸಿ ನಿರೂಪಕ ಆಟೊರಿಕ್ಷಾದಲ್ಲಿ ಸಾಗುತ್ತ ನಡೆಸುತ್ತಿದ್ದ ರೆಕಾರ್ಡಿಂಗ್‌ ವೇಳೆ ಹಿಂಬದಿಯಲ್ಲಿ ಸೆರೆಯಾಗಿರುವ ದೃಶ್ಯ ವೈರಲ್‌ ಆಗುವ ಜತೆಗೆ ನಗುವಿನ ಅಲೆಯನ್ನೇ ಸಾಮಾಜಿಕ ಮಾಧ್ಯಮಗಳಲ್ಲಿ ಎಬ್ಬಿಸಿದೆ.

ಸ್ಕೂಟರ್‌ನ ಹಿಂದಿನ ಸೀಟಿನ ಮೇಲೆ ನಿಂತು ಗಂಭೀರ ನೋಟ ಬೀರುತ್ತ, ತನ್ನ ಮಾಲೀಕನ ಹೆಗಲ ಮೇಲೆ ಮುಂಗಾಲಿಟ್ಟು ಸವಾರಿ ನಡೆಸಿದ್ದ ಶ್ವಾನ ಬಹಳಷ್ಟು ಜನರ ಗಮನ ಸೆಳೆದಿದೆ. ಮುಂಬೈನಲ್ಲಿ ಚಲಿಸುವ ಆಟೊರಿಕ್ಷಾದಲ್ಲಿ ಬಿಬಿಸಿಯ ಟಾಮ್‌ ಬ್ರೂಕ್‌ ವಿಡಿಯೊ ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದರು. 'ಟಾಕಿಂಗ್‌ ಮೂವೀಸ್‌' ವಿಶೇಷ ಸಂಚಿಕೆಯ ಚಿತ್ರೀಕರಣಕ್ಕಾಗಿ ಭಾರತದಲ್ಲಿದ್ದ ಬ್ರೂಕ್‌, ವಿಡಿಯೊದಲ್ಲಿ ತನ್ನ ಪರಿಚಯ ಮಾಡಿಕೊಳ್ಳುತ್ತಿದ್ದಂತೆ ಹಿಂಬದಿಯಲ್ಲಿ ಬಿಳಿಯ ಬಣ್ಣದ ಶ್ವಾನದ ಸ್ಕೂಟರ್‌ ಸವಾರಿಯ ಪ್ರವೇಶ ಆಗಿರುವುದನ್ನು ಗಮನಿಸಬಹುದು.

ವ್ಯಕ್ತಿಯೊಬ್ಬ ಸ್ಕೂಟರ್‌ ಚಾಲನೆ ಮಾಡುತ್ತಿದ್ದರೆ, ಹಿಂದಿನ ಸೀಟಿನ ಮೇಲೆ ಬ್ಯಾಲೆನ್ಸ್ ಮಾಡುತ್ತ ಹೆದರದೆ ಸಹಜ ಸವಾರಿಯಂತೆ ನಿಂತಿರುವ ಶ್ವಾನ ಮುಂಗಾಲನ್ನು ಆತನ ಹೆಗಲ ಮೇಲೆ ಇಟ್ಟಿದೆ.'ಇಂಡಿಯನ್‌ ಫೋಟೊ ಬಾಂಬ್‌' ಒಕ್ಕಣೆಯೊಂದಿಗೆಟಿಮ್‌ ಕಿಂಬರ್‌ ಎಂಬ ಟ್ವೀಟಿಗ ಡಿಸೆಂಬರ್‌ 1ರಂದು ವಿಡಿಯೊ ಹಂಚಿಕೊಂಡಿದ್ದಾರೆ. 25 ಸೆಕೆಂಟ್‌ಗಳ ವಿಡಿಯೊ ಈಗಾಗಲೇ 99,900ಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, 1,207ಕ್ಕೂ ಅಧಿಕ ಬಾರಿ ಮರು ಹಂಚಿಕೆಯಾಗಿದೆ.

ವಿಡಿಯೊ ನೋಡಿ ಪ್ರತಿಕ್ರಿಯಿಸಿರುವ ಸಾವಿರಾರು ಟ್ವೀಟಿಗರು, 'ಭಾರತದಲ್ಲಿ ಮಾತ್ರ ನಡೆಯುವ ಘಟನೆಗಳಿಗೆ ಇದೊಂದು ಉತ್ತಮ ಉದಾಹರಣೆ', 'ಇಂಥದ್ದರಿಂದಲೇ ನಾನು ಭಾರತಕ್ಕೆ ಹೋಗಲು ಬಹಳ ಇಷ್ಟ ಪಡುತ್ತೇನ. ಇಂಥ ಘಟನೆ ಅಲ್ಲಿ ಸಹಜವಾದುದು,..' ಎಂದೆಲ್ಲ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಟ್ವೀಟಿಗ ಅದೇ ಶ್ವಾನದ ಮತ್ತೊಂದು ವಿಡಿಯೊ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT