ಸೋಮವಾರ, ಸೆಪ್ಟೆಂಬರ್ 27, 2021
22 °C

ಮದ್ಯ ಖರೀದಿಸುವವರಿಗೆ ಪಡಿತರ ನಿಲ್ಲಿಸಬೇಕೆಂದು ನಾನು ಹೇಳಿಲ್ಲ: ಟಾಟಾ ಸ್ಪಷ್ಟನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ದೇಶದಲ್ಲಿ ಮದ್ಯ ಮಾರಾಟಕ್ಕೆ ಆಧಾರ್ ಕಾರ್ಡ್ ಬಳಕೆ ಮಾಡಬೇಕು ಮತ್ತು ಮದ್ಯ ಕೊಳ್ಳುವವರಿಗೆ ಸರ್ಕಾರದ ಆಹಾರ, ಸಬ್ಸಿಡಿ ರದ್ದುಪಡಿಸಬೇಕು ಎಂಬ ಹೇಳಿಕೆಯನ್ನು ನಾನು ಯಾವತ್ತೂ ನೀಡಿಲ್ಲ ಎಂದು ಉದ್ಯಮಿ ರತನ್ ಟಾಟಾ ಸ್ಪಷ್ಟಪಡಿಸಿದ್ದಾರೆ.

ರತನ್ ಟಾಟಾ ಅವರ ಹೆಸರಿನಲ್ಲಿ ಸಾಮಾಜಿಕ ತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿದ್ದು, ಅದರಲ್ಲಿ, ಮದ್ಯ ಖರೀದಿಸುವವರಿಗೆ ಸರ್ಕಾರದ ಆಹಾರ ಸಬ್ಸಿಡಿ ಸ್ಥಗಿತಗೊಳಿಸಬೇಕು ಎಂಬ ಹೇಳಿಕೆಯಿದೆ. ಅಲ್ಲದೆ, ಯಾರಿಗೆ ಮದ್ಯ ಕೊಳ್ಳುವ ಸಾಮರ್ಥ್ಯವಿದೆಯೋ, ಅವರು ಖಂಡಿತವಾಗಿಯೂ ಆಹಾರ ಖರೀದಿಸಲು ಸಮರ್ಥರಿರುತ್ತಾರೆ ಎಂದು ರತನ್ ಟಾಟಾ ಅವರು ಹೇಳಿದ್ದಾರೆ ಎಂದು ಬಿಂಬಿಸಲಾಗಿದೆ.

ಆದರೆ, ಈ ಸಂದೇಶ ಮತ್ತು ಫೋಟೊ ನಕಲಿಯಾಗಿದ್ದು, ಅಂತಹ ಯಾವುದೇ ಹೇಳಿಕೆ ನಾನು ನೀಡಿಲ್ಲ ಎಂದು ಸ್ವತಃ ರತನ್ ಟಾಟಾ ಅವರೇ ಸ್ಪಷ್ಟಪಡಿಸಿದ್ದಾರೆ.


ರತನ್ ಟಾಟಾ ಹೇಳಿಕೆ ನಕಲಿ ಎಂಬ ಸ್ಪಷ್ಟನೆ

ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರೀಸ್‌ನಲ್ಲಿ ಟಾಟಾ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ಜತೆಗೆ ಇದೊಂದು ಸುಳ್ಳು ಸುದ್ದಿ ಎಂದು ಕೂಡ ಟಾಟಾ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು