ಶುಕ್ರವಾರ, ಆಗಸ್ಟ್ 12, 2022
20 °C

ವೈರಲ್ ಆಯ್ತು ಸಿಧು ಮೂಸೆವಾಲಾ ಇನ್‌ಸ್ಟಾಗ್ರಾಮ್ ಕೊನೆಯ ಪೋಸ್ಟ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಶೂಟೌಟ್‌ನಿಂದ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಾಡಿದ್ದ ಕೊನೆಯ ಪೋಸ್ಟ್ ಒಂದು ವೈರಲ್ ಆಗಿದೆ.

ಸಿಧು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕಿರು ವಿಡಿಯೊ ಒಂದನ್ನು ಪೋಸ್ಟ್ ಮಾಡಿ ಅದಕ್ಕೆ ‘ಮರೆತುಬಿಡು, ದೆವ್ವವನ್ನು ಮಿಸ್ ಮಾಡಬೇಡ‘ ಎಂದು ಅಡಿಬರಹ ನೀಡಿದ್ದರು.

ಅದಾದ ಬಳಿಕ ಅವರನ್ನು ಹತ್ಯೆ ಮಾಡಲಾಗಿದ್ದು, ಅಭಿಮಾನಿಗಳು ಈ ಪೋಸ್ಟ್‌ಗೂ ಸಿಧು ಹತ್ಯೆಗೂ ಸಂಬಂಧವಿದ್ದಿರಬಹುದು ಅಥವಾ ಅದು ಕಾಕತಾಳೀಯ ಆಗಿರಬಹುದು ಎಂದು ಚರ್ಚಿಸಲಾರಂಭಿಸಿದ್ದಾರೆ.

ಸಿಧು ಹತ್ಯೆಗೆ ಎರಡು ಗ್ಯಾಂಗ್‌ಗಳ ನಡುವಿನ ದ್ವೇಷವೇ ಕಾರಣ ಎಂದು ಪಂಜಾಬ್ ಪೊಲೀಸರು ಹೇಳಿದ್ದರು.

ಅದರ ಬೆನ್ನಲ್ಲೇ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡದವರು ಸಿಧು ಹತ್ಯೆಯ ಹೊಣೆ ಹೊತ್ತುಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು