ಹೈದರಾಬಾದ್: ತಮ್ಮ ಬೆಳೆಗಳ ಮೇಲೆ ‘ಕೆಟ್ಟ ದೃಷ್ಟಿ’ ಬೀಳದಿರುವಂತೆ ನೋಡಿಕೊಳ್ಳಲು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ರೈತರು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದು, ಬಾಲಿವುಡ್ ನಟಿ ಸನ್ನಿ ನಿಯೋನ್ ಪೋಸ್ಟರ್ ಅನ್ನು ಹೊಲಗಳಲ್ಲಿ ಅಂಟಿಸಿದ್ದಾರೆ.

ಕರ್ನಾಟಕದ ಯಾದಗಿರಿ ಜಿಲ್ಲೆಯ ಹುಣಸಗಿ ಮತ್ತು ಆಂಧ್ರಪ್ರದೇಶದ ಬಂದ ಕಿಂಡಿ ಪಲ್ಲೆ ಗ್ರಾಮದ ಹೊಲಗಳಲ್ಲಿ ಈ ರೀತಿಯ ಪೋಸ್ಟರ್ಗಳನ್ನು ಕಾಣಬಹುದಾಗಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ಸುದ್ದಿಸಂಸ್ಥೆ ‘ಟೈಮ್ಸ್ ಇಂಡಿಯಾ’ಕ್ಕೆ ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶದ ರೈತ ಚೆಂಚು ರೆಡ್ಡಿ, ಈ ಬಾರಿ ಉತ್ತಮ ಫಸಲು ಸಿಕ್ಕಿದೆ. ಫಸಲಿನ ಮೇಲೆ ಗ್ರಾಮಸ್ಥರು ಮತ್ತು ದಾರಿಹೋಕರ ದೃಷ್ಟಿ ಬೀಳದಂತೆ ತಡೆಯಲು ಪೋಸ್ಟರ್ ಅಂಟಿಸಲಾಗಿದೆ ’ ಎಂದಿದ್ದಾರೆ.

ಚೆಂಚು ರೆಡ್ಡಿ ಅವರು ತಮ್ಮ 10 ಎಕರೆ ಹೊಲದಲ್ಲಿ ಎಲೆಕೋಸು ಮತ್ತು ಹೂಕೋಸು ಬೆಳೆದಿದ್ದಾರೆ.

ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದ ರೈತ ಮಾತನಾಡಿ, ‘ಸನ್ನಿ ಲಿಯೋನ್ ಫೋಟೊ ಹಾಕಿದ್ದರಿಂದ ದಾರಿಹೋಕರ ಗಮನ ಫಸಲಿನ ಬದಲು ಪೋಸ್ಟರ್ ಕಡೆಗೆ ಹೆಚ್ಚು ಹೋಗುತ್ತದೆ’ ಎಂದು ಹೇಳಿದ್ದಾರೆ. ಅವರ ಹತ್ತಿ ಹೊಲದಲ್ಲಿ ಸನ್ನಿ ಲಿಯೋನ್ ಅವರ ದೊಡ್ಡ ಪೋಸ್ಟರ್ ರಾರಾಜಿಸುತ್ತಿದೆ.

ತಲೆಮಾರುಗಳಿಂದ ಕೆಟ್ಟ ದೃಷ್ಟಿಯ ಬಗ್ಗೆ ಜನರು ನಂಬಿಕೆಯಿಟ್ಟುಕೊಂಡು ಬಂದಿದ್ದು, ತಮ್ಮ ಆಸ್ತಿ ಮತ್ತು ಹೊಲಗಳನ್ನು ರಕ್ಷಿಸಲು ಕಪ್ಪು ಬಟ್ಟೆ, ಬೆದರು ಗೊಂಬೆ, ದೇವರ ಚಿತ್ರಗಳನ್ನು ತೂಗು ಹಾಕುತ್ತಿದ್ದಾರೆ. ಇತ್ತೀಚೆಗೆ ದೊಡ್ಡ ಕಣ್ಣಿನ ಮಹಿಳೆಯ ಫೋಟೊಗಳು ಎಲ್ಲೆಡೆ ಕಾಣಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.