ಶನಿವಾರ, ಆಗಸ್ಟ್ 13, 2022
26 °C

ಸುಶಾಂತ್ ಸಿಂಗ್ ರಜಪೂತ್ ಪುಣ್ಯಸ್ಮರಣೆ: ಕಣ್ಣೀರು ತರಿಸುತ್ತದೆ ಪ್ರೀತಿಯ ನಾಯಿಯ ನಮನ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Viral Bhayani Instagram

ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಒಂದು ವರ್ಷವಾಗಿದೆ. ಸುಶಾಂತ್ ಸಾವಿನ ಪ್ರಕರಣ ಹಲವು ಮಜಲುಗಳನ್ನು ಪಡೆದುಕೊಂಡು ನಂತರದಲ್ಲಿ ತನಿಖೆ ಪ್ರಗತಿಯಲ್ಲಿದೆ.

ಸುಶಾಂತ್ ವಾರ್ಷಿಕ ತಿಥಿಯ ಸಂದರ್ಭದಲ್ಲಿ ಮನೆಯಲ್ಲಿ ಅವರ ಸಹೋದರಿಯರು ಮತ್ತು ಕುಟುಂಬಸ್ಥರು ಪೂಜೆ ಹಮ್ಮಿಕೊಂಡಿದ್ದರು.

ಈ ಪೂಜೆ ನಡೆಯುವ ಸಂದರ್ಭದಲ್ಲಿ ಸುಶಾಂತ್ ಅವರ ಪ್ರೀತಿಯ ನಾಯಿ ಫ್ಯೂಜ್ ಕೂಡ ಮೌನವಾಗಿ ಸುಶಾಂತ್ ಭಾವಚಿತ್ರದ ಎದುರು ಕುಳಿತುಕೊಂಡ ಚಿತ್ರ ವೈರಲ್ ಆಗಿದೆ.

ಸುಶಾಂತ್ ಸ್ಮರಣೆಯ ದಿನದಂದು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸುಶಾಂತ್ ಕುರಿತ ನೆನಪನ್ನು ಹಂಚಿಕೊಂಡಿದ್ದರು.

ಸುಶಾಂತ್ ಸಹೋದರಿ ಕೂಡ ಅವರ ಪ್ರೀತಿಯ ನಾಯಿ ಮೌನವಾಗಿ ರೋಧಿಸುತ್ತಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಹಲವರು ಸುಶಾಂತ್ ಸ್ಮರಣೆಯ ಜತೆಗೆ ನಾಯಿಯ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು