ಬೆಂಗಳೂರು: ಪ್ರವಾಸಿ ಸ್ಥಳಗಳಲ್ಲಿ ಸೆಲ್ಫಿ ಅಥವಾ ಫೋಟೊ ಹುಚ್ಚಿಗೆ ಕೆಲವರು ಅತಿರೇಕದಿಂದ ವರ್ತಿಸಿ ಪಜೀತಿ ತಂದುಕೊಳ್ಳುವುದನ್ನು ಆಗಾಗ ನೋಡುತ್ತಿರುತ್ತೇವೆ.

ಇದೀಗ ಇಂತಹದ್ದೇ ಒಂದು ಘಟನೆ ನಡೆದಿದೆ. ಥಾಯ್ಲೆಂಡ್ ದೇಶದ ಪುಕೇಟ್ನಲ್ಲಿರುವ ಪ್ರಸಿದ್ಧ ‘ಟೈಗರ್ ಕಿಂಗ್ಡಮ್’ಗೆ ಭೇಟಿ ಕೊಟ್ಟಿದ್ದ ಭಾರತದ ಯುವಕನೊಬ್ಬ ಅಲ್ಲಿನ ಹುಲಿಯ ಬಾಯಿಗೆ ಸಿಕ್ಕು ಸಾಯುವುದರಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದಾನೆ.

ಈ ವಿಡಿಯೊವನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಬೆಚ್ಚಿ ಬೀಳಿಸಿದೆ. ಘಟನೆ ಇತ್ತೀಚೆಗೆ ನಡೆದಿದೆ ಎನ್ನಲಾಗಿದೆ.

ಪುಕೇಟ್ನಲ್ಲಿನ ಹುಲಿಧಾಮಕ್ಕೆ ಭೇಟಿ ನೀಡಿದ್ದ ಪ್ರವಾಸಿಗ ಧಾಮದ ನಿಯಮಾವಳಿಯಂತೆ ಹುಲಿಯ ಜೊತೆ ನಡೆದುಕೊಂಡು ಹೋಗುತ್ತಿದ್ದ. ಆಗ ಫೋಟೊ ಹುಚ್ಚಿಗೆ ಬಿದ್ದ ಆತ ಹುಲಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ. ತಕ್ಷಣವೇ ಕೋಪಗೊಂಡ ಹುಲಿ ಆತನ ಮೇಲೆ ದಾಳಿ ಮಾಡಿದೆ. ಅದೃಷ್ಟವಶಾತ್ ತರಬೇತುದಾರರನ ಸಮಯ ಪ್ರಜ್ಞೆಯಿಂದ ಪ್ರವಾಸಿಗ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.

ಅನೇಕ ನೆಟ್ಟಿಗರು ವಿಡಿಯೊ ಹಂಚಿಕೊಂಡು ಇಂತಹ ವರ್ತನೆಗಳಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ. ಈ ಕುರಿತು ಇಂಡಿಯಾ ಟುಡೇ ವೆಬ್ಸೈಟ್ ವರದಿ ಮಾಡಿದೆ.

ಥಾಯ್ಲೆಂಡ್ ದೇಶದ ಪುಕೇಟ್ ಪ್ರಾಂತ್ಯದ ಪುಕೇಟ್ ದ್ವೀಪದಲ್ಲಿರುವ ಟೈಗರ್ ಕಿಂಗ್ಡಮ್ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ಕೇಂದ್ರವಾಗಿದೆ. ಇಲ್ಲಿ ಅನೇಕ ಹುಲಿಗಳಿದ್ದು ಪ್ರವಾಸಿಗರು ಅವುಗಳ ಜೊತೆ ಸಾಕುಪ್ರಾಣಿಗಳಂತೆ ವಿಹಾರ ಹೋಗಬಹುದು. ಹತ್ತಿರದಲ್ಲಿ ಕುಳಿತು ಮೈ ಸವರಬಹುದು. ಈ ಕೇಂದ್ರ ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾದರೂ ನಿರಾಂತಕವಾಗಿ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.