ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ನೋಡಿ: ಆಲಿಯಾ ಅನುಕರಣೆ; ಗಂಗೂಬಾಯಿಯಾದ ಪುಟ್ಟ ಹುಡುಗಿ!

Last Updated 9 ಫೆಬ್ರುವರಿ 2022, 12:02 IST
ಅಕ್ಷರ ಗಾತ್ರ

ಬೆಂಗಳೂರು: 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ನಟಿ ಆಲಿಯಾ ಭಟ್‌ ಪಾತ್ರದ ಸಂಭಾಷಣೆಗೆ ಭಾವಾಭಿನಯ ತೋರಿರುವ ಪುಟ್ಟ ಬಾಲಕಿಯ ವಿಡಿಯೊ ಈಗ ವೈರಲ್‌ ಆಗಿದೆ. ಸಿನಿಮಾದಲ್ಲಿರುವಂತೆಯೇ ದಿರಿಸು ಧರಿಸಿರುವುದು ಮತ್ತಷ್ಟು ಗಮನ ಸೆಳೆಯುವಂತಿದೆ.

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಫೆಬ್ರುವರಿ 25ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಅದರಲ್ಲಿ ಗಂಗೂಬಾಯಿ ಪಾತ್ರದ ಡೈಲಾಗ್‌ಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಶುರುವಾಗಿದೆ.

ಮುಂಬೈನ ಕಮಾಠಿಪುರದ ಗಂಗೂಬಾಯಿ ಕೋಠೆವಾಲಿ ಎಂಬ ಮಹಿಳೆಯ ಜೀವನದ ಕಥೆಯನ್ನು ಒಳಗೊಂಡಿರುವ ಹುಸೈನ್‌ ಜೈದಿ ಅವರ ಪುಸ್ತಕ 'ಮಾಫಿಯಾ ಕ್ವೀನ್ಸ್‌ ಆಫ್‌ ಮುಂಬೈ' ಆಧರಿಸಿ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ನಿರ್ಮಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಲಾಗಿರುವ ವಿಡಿಯೊದಲ್ಲಿ ಹುಡುಗಿಯು ಆಲಿಯಾ ಹೇಳಿರುವ ಡೈಲಾಗ್‌ಗಳಿಗೆ ತನ್ನದೇ ರೀತಿಯಲ್ಲಿ ಭಾವಾಭಿನಯ ಮಾಡಿದ್ದಾಳೆ. ಆಲಿಯಾ ಸಿನಿಮಾದಲ್ಲಿ ಧರಿಸಿರುವಂತೆಯೇ ಪುಟಾಣಿಯು ಬಿಳಿಯ ಸೀರೆಯುಟ್ಟು, ಹಣೆಗೆ ದೊಡ್ಡ ಬಿಂದಿ, ಕಾಡಿಗೆ, ಕೆನ್ನೆಯ ಮೇಲೊಂದು ಮಚ್ಚೆ ಇಟ್ಟುಕೊಂಡಿರುವುದು...ಎಲ್ಲವೂ ಥೇಟ್‌ ಸಿನಿಮಾದ ದೃಶ್ಯಗಳಲ್ಲಿರುವಂತೆಯೇ ಕಾಣಿಸುತ್ತದೆ. ಕಣ್ಣು ಅರಳಿಸಿ, ಸಂಭಾಷಣೆಗೆ ತಕ್ಕಂತೆ ಮಾಡಿರುವ ಅಭಿನಯನವು ಒಂದೇ ಬಾರಿಗೆ ಗಮನ ಸೆಳೆದುಕೊಳ್ಳುತ್ತದೆ.

ವಿಡಿಯೊದ ಕ್ಯಾಪ್ಷನ್‌ನಲ್ಲಿ ಆಲಿಯಾ ಭಟ್‌ ಅವರನ್ನು ಟ್ಯಾಗ್‌ ಮಾಡಲಾಗಿದ್ದು, 'ಮುದ್ದಾದ ಆಲಿಯಾಗೆ' ಈ ಅನುಕರಣೆಯ ವಿಡಿಯೊ ಅರ್ಪಿಸಲಾಗಿದೆ. 15 ಗಂಟೆಗಳ ಹಿಂದೆ ಪ್ರಕಟಿಸಲಾಗಿರುವ ಈ ವಿಡಿಯೊಗೆ 18,900ಕ್ಕೂ ಹೆಚ್ಚು ಲೈಕ್‌ಗಳು ಸಿಕ್ಕಿವೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್‌ ಮಾಡಿದ್ದಾರೆ.

ಸಿನಿಮಾದಲ್ಲಿ ವೇಶ್ಯಾವಾಟಿಕೆ, ಅಲ್ಲಿನ ಪರಿಸರ ಮತ್ತು ಇಡೀ ಕಮಾಠಿಪುರವನ್ನು ತನ್ನ ಹಿಡಿತದಲ್ಲಿ ಇಟ್ಟು ಕೊಂಡಿರುವ ಗಂಗೂಬಾಯಿಯಾಗಿ ಆಲಿಯಾ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT