ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜರಾಜನ ದಾರಿಯಲ್ಲಿ ಅಡ್ಡವಾಗಿ ಮಲಗಿದ್ದ ಕಾಡಿನ ರಾಜ; ಮುಂದೇನಾಯ್ತು ನೋಡಿ..!

ಅಕ್ಷರ ಗಾತ್ರ

ಆನೆ ಹಾಗೂ ಹುಲಿ ನಡುವಣ ಆಸಕ್ತಿದಾಯಕ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಜರಾಜನದಾರಿ ಮಧ್ಯೆ ಕಾಡಿನ ರಾಜ ಅಡ್ಡವಾಗಿ ಮಲಗಿರುವ ದೃಶ್ಯವು ಬೆರಗುಗೊಳಿಸುತ್ತದೆ.

ಇಲ್ಲಿ ಮುಂದೇನಾಯ್ತು ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ. ಪ್ರಸ್ತುತ ವಿಡಿಯೋವನ್ನು ಬಾಲಿವುಡ್ ನಟಿ ದಿಯಾ ಮಿರ್ಜಾ ಹಂಚಿಕೊಂಡಿದ್ದಾರೆ.

ದಾರಿ ಮಧ್ಯೆ ಹುಲಿ ವಿಶ್ರಾಂತಿ ಪಡೆಯುತ್ತಿರುತ್ತದೆ. ಹಿಂದಿನಿಂದ ದಿಟ್ಟ ಹೆಜ್ಜೆಯನ್ನಿಡುತ್ತಾ ಗಜರಾಜನ ಪ್ರವೇಶವಾಗುತ್ತದೆ. ಇದನ್ನು ಗಮನಿಸಿದ ಹುಲಿ ಏಕಾಏಕಿ ಅಲ್ಲಿಂದ ಕಾಲ್ಕಿತ್ತು ಕಾಡಿನೊಳಗೆ ಸೇರುತ್ತದೆ.

ಮೇ 28ರಂದು ಪೋಸ್ಟ್ ಮಾಡಿರುವ ಈ ವಿಡಿಯೊ ಈಗಾಗಲೇ 94,000ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. 4,300 ಮಂದಿ ಲೈಕ್ ಒತ್ತಿದ್ದು, 476 ರೀಟ್ವೀಟ್‌ ಮತ್ತು 135 ಕಮೆಂಟ್‌ಗಳನ್ನು ಗಿಟ್ಟಿಸಿಕೊಂಡಿದೆ.

ಆದರೆ ಈ ವಿಡಿಯೊವನ್ನು ಎಲ್ಲಿಂದ ಹಾಗೂ ಯಾರು ಸೆರೆ ಹಿಡಿದಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಈ ಕುರಿತು ಸ್ಯಾಂಕ್ಚುರಿ ಏಷ್ಯಾ ವಿಡಿಯೊ ಸೆರೆ ಹಿಡಿದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನದಲ್ಲಿದೆ ಎಂದು ದಿಯಾ ಮಿರ್ಜಾ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT