ಟೆಕ್ಕಿಗಳ ಅನಾರೋಗ್ಯಕರ ಜೀವನಶೈಲಿ ಅವರ ಉತ್ಪಾದನಾ ಸಾಮರ್ಥ್ಯವನ್ನೇ ಕಸಿಯುತ್ತಿದೆ. ದೈಹಿಕ ನಿಷ್ಕ್ರಿಯತೆ–ಮಾನಸಿಕ ಒತ್ತಡದಿಂದ ಜಡವಾಗುತ್ತಿರುವ ಮನಸ್ಸು, ವೈಯಕ್ತಿಕ ನಷ್ಟಕ್ಕೂ, ಐಟಿ ಕ್ಷೇತ್ರದ ಸಂಕಷ್ಟಕ್ಕೂ ಕಾರಣವಾಗುತ್ತಿದೆ ಎನ್ನುತ್ತಿದೆ ವರದಿಯೊಂದು. ಈ ಬಗ್ಗೆ ಟೆಕ್ಕಿಗಳ ಮನದ ಮಾತೇನು, ಐಟಿ ಕಂಪನಿಗಳ ನಿಲುವೇನು, ತಜ್ಞರ ಸಲಹೆ–ಸೂಚನೆಗಳ ಸಹಿತ ವಿಶ್ಲೇಷಣೆ ಇಲ್ಲಿದೆ–

ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ಬದುಕೇ ಒಂದು ರೀತಿಯ ವೈರುಧ್ಯ. ಎಲ್ಲರೂ ಎದ್ದಿರುವಾಗ ಇವರು ನಿದ್ದೆಯಲ್ಲಿರುತ್ತಾರೆ. ಜನರು ದಿನದ ಆಯಾಸವನ್ನೆಲ್ಲ ಮಡಚಿಟ್ಟು, ಕಣ್ರೆಪ್ಪಡ ವಿಶ್ರಾಂತಿ ಕೊಟ್ಟಾಗ ಇವರು ಮೈಮುರಿದು ಮೇಲೇಳುತ್ತಾರೆ. ಈ ಜೀವನ ಶೈಲಿ ತಂದಿಡುವ ಅವಾಂತರಗಳು ಹಲವು– ಹದತಪ್ಪುವಆರೋಗ್ಯ, ಮಂಕಾಗುವ ಮನಸ್ಸು, ಬೌದ್ಧಿಕ ಸಾಮರ್ಥ್ಯದ ಕುಸಿತ... ದುಡಿತದಲ್ಲೂ ದಾಂಗುಡಿ ಇಡುತ್ತವೆ. ಮನಸ್ಸಿದ್ದೊ–ಇಲ್ಲದೆಯೊ ಮಳೆಸುರಿಸುವುದನ್ನೇ ಮರೆತು ಓಡುವ ಮೋಡಗಳಂತೆ ಸಾಗುವ ಯಾಂತ್ರಿಕ ಜೀವನ; ಯುವ ಸಮುದಾಯದ ಬದುಕನ್ನೂ, ಆ ಮೂಲಕ ಐಟಿ ಉದ್ಯಮದ ಭವಿಷ್ಯವನ್ನೂ ಅತಂತ್ರಗೊಳಿಸುತ್ತಿದೆ. ಇದಕ್ಕೆಲ್ಲ ಒಂದು ಪರಿಹಾರ ಬೇಕೇ ಅಲ್ಲವೆ? ದುಡಿಯುವ ಟೆಕ್ಕಿಗಳು, ದುಡಿಸಿಕೊಳ್ಳುವಐಟಿ ಕಂಪನಿಗಳು ಈ ಸವಾಲಿಗೊಂದು ಮಾರ್ಗಸೂಚಿ ಕಂಡುಕೊಳ್ಳುವ ಅನಿವಾರ್ಯತೆ ಈಗ ಎದುರಾಗಿದೆ.

ಮೊದಲಿನಿಂದಲೂ ಶಿಸ್ತಿಗಿಂತ ಉತ್ಪಾದಕತೆಗೆ ಹೆಚ್ಚಿನ ಒತ್ತು ಕೊಟ್ಟಿದ್ದು ಐಟಿ ವಲಯ. ಈ ಕ್ಷೇತ್ರದ ಕೆಲಸದ ವೈಖರಿಯೇ ಬೇರೆ. ‘ಪಂಚಿಂಗ್’ ಕಿರಿಕಿರಿ, ಸಮಯದ ರಿಪಿರಿಪಿ ಇಲ್ಲಿಲ್ಲ. ಆದರೆ ಕೊಟ್ಟ ಕೆಲಸ, ನೀಡಿದ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಸ್ವಾತಂತ್ರ್ಯಕ್ಕೆ ಸಮನಾದ ಒತ್ತಡವೂ ಇದೆ. ಇದರಿಂದುಂಟಾಗುವ ವೈಯಕ್ತಿಕ ನಷ್ಟ ಕಂಪನಿಯ ನಷ್ಟವೂ ಹೌದಾದ್ದರಿಂದ ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ಕಂಪನಿಗಳೂ ತಲೆ ಕೆಡಿಸಿಕೊಳ್ಳುತ್ತಿವೆ.

ದೈಹಿಕ ಚಟುವಟಿಕೆಗೆ ಸಮಯಾವಕಾಶ ಇಲ್ಲದಿರುವುದು, ತೀವ್ರವಾದ ಮಾನಸಿಕ ಮತ್ತುಭಾವನಾತ್ಮಕ ಒತ್ತಡದಿಂದಟೆಕ್ಕಿಗಳ ಉತ್ಪಾದನಾ ಸಾಮರ್ಥ್ಯ ಕುಂದುತ್ತಿದೆ. ಪರಿಣಾಮ ಬೆಂಗಳೂರಿನಲ್ಲಿ ಐಟಿ ಉದ್ಯಮಕ್ಕೆ ಪ್ರತಿವರ್ಷ ₹24 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಅಧ್ಯಯನವೊಂದು ವರದಿ ಮಾಡಿದೆ.

‘ರೆಡ್ಸೀರ್ ಕನ್ಸಲ್ಟಿಂಗ್’ ಎನ್ನುವಸಂಶೋಧನಾ ಮತ್ತು ಸಲಹಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಅಂಶವಿದೆ. ಆರೋಗ್ಯ ಮತ್ತು ಜೀವನಶೈಲಿಯ ಅಭ್ಯಾಸಗಳು ಒಟ್ಟಾರೆ ಐಟಿ ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಮತ್ತು ಉತ್ಪಾದಕತೆಯ ನಷ್ಟಕ್ಕೆ ಹೇಗೆ ಕಾರಣವಾಗುತ್ತಿವೆ ಎನ್ನುವುದನ್ನು ಈ ಅಧ್ಯಯನ ವಿವರಿಸುತ್ತದೆ. ವ್ಯಾಯಾಮಕ್ಕೆ ಸಮಯವಿಲ್ಲ, ಅವಕಾಶವೂ ಇಲ್ಲ, ಭಾವನಾತ್ಮಕ ಮತ್ತು ಮಾನಸಿಕ ಒತ್ತಡ, ಕಳಪೆ ಆಹಾರ, ದುಶ್ಚಟಗಳ ಸಹವಾಸ... ಇವೇ ಕಾರಣವನ್ನು ವರದಿ ಮುಂದಿಟ್ಟಿದೆ. ಅದಕ್ಕಾಗಿ ಉದ್ಯೋಗಿಗಳು ತಂತಮ್ಮ ವ್ಯಾಪ್ತಿಯಲ್ಲಿ ಪರಿಹಾರಕ್ಕೆ ಕೈಚಾಚಬೇಕು, ಕಂಪನಿಗಳೂ ಅವರೊಂದಿಗೆ ಕೈಜೋಡಿಸಬೇಕು ಎನ್ನುವ ಸಲಹೆಯೂ ಇಲ್ಲಿ ವ್ಯಕ್ತವಾಗಿದೆ.

‘ವರ್ಕೌಟ್ ಮಾಡಕ್ಕೆ ಸಮಯಾನೇ ಇಲ್ಲ. ಒಮ್ಮೊಮ್ಮೆ 24 ಗಂಟೆಗಳ ನಿರಂತರ ಕೆಲಸವಿರತ್ತೆ. ಊಟ–ತಿಂಡಿ–ಕಾಫಿಯೂ ಕಂಪ್ಯೂಟರ್ ಮುಂದೇ ಮುಗಿದುಹೋಗುವುದೂ ಉಂಟು. ಮನೆಗೆ ಹೋಗಿ ಮಲಗಿದರೆ ಸಾಕಪ್ಪ ಅನ್ನುವಂತಿರುವಾಗ ಬೆಳಿಗ್ಗೆದ್ದು ಜಿಮ್ಗೆ ಹೋಗು, ವಾಕ್ ಮಾಡು ಎಂದರೆ ಮನಸ್ಸೂ ಒಪ್ಪಲ್ಲ, ದೇಹಾನೂ ಸಹಕರಿಸಲ್ಲ. ಆದರೆ ಕೆಲಸದ ಆವರಣದಲ್ಲೇ ಅದಕ್ಕೊಂದಿಷ್ಟು ಅವಕಾಶ, ಚೂರು ಜಾಗ ಮಾಡಿಕೊಟ್ಟರೆ ಅನುಕೂಲ’ ಎನ್ನುತ್ತಾರೆ ಟೆಕ್ಕಿನಿತಿನ್ ಕುಮಾರ್.

‘ನಮ್ಮ ಆಫೀಸಲ್ಲಿ ನಾವೇ ಸೇರಿಕೊಂಡು ಗುಂಪು ಮಾಡಿ, ದಿನಕ್ಕರ್ಧ ಗಂಟೆ ಟೇಬಲ್ ಟೆನ್ನಿಸ್ ಆಡುತ್ತಿದ್ದೇವೆ. ಇದರಿಂದ ನಮ್ಮ ಬಾಂಧವ್ಯವೂ ವೃದ್ಧಿಸುತ್ತಿದೆ. ತೂಕವೂ ನಿಯಂತ್ರಣದಲ್ಲಿದೆ. ಹಾಗೆಯೇ ಕ್ಯಾಂಟೀನ್ನ ಆಹಾರ ಪಟ್ಟಿಯಲ್ಲಿ ಆರೋಗ್ಯಕರ ತಿಂಡಿಯನ್ನು ಸೇರಿಸುವಂತೆ ಎಚ್.ಆರ್.ಗೆ ಮನವಿ ಮಾಡಿದ್ದೇವೆ’ ಎಂದು ಸಂಭ್ರಮಿಸುತ್ತಾರೆ ಟೆಕ್ಕಿ ಕಿಶನ್ ಶೆಟ್ಟಿ.

ಕೆಲ ಕಂಪನಿಗಳು ಕೆಲಸದ ಆರಂಭದಲ್ಲಿ, ನಡುವೆ ಅಥವಾ ಕೆಲಸ ಮುಗಿದ ಮೇಲೆ ಉದ್ಯೋಗಿಗಳು ಕಂಪನಿಯ ತಾಣದಲ್ಲೇ ವ್ಯಾಯಾಮ–ಯೋಗ ಮಾಡಲು ಅನುವು ಮಾಡಿಕೊಟ್ಟಿವೆ. ವರ್ಷದಲ್ಲಿ ಎರಡು ಬಾರಿಯಾದರೂ ಕಂಪೆನಿಯಲ್ಲೇ ನೌಕರರ ಆರೋಗ್ಯ ತಪಾಸಣೆಯ ವ್ಯವಸ್ಥೆ ಇದೆ. ಬಿಟ್ಟೂ ಬಿಡದಂತೆ ದುಡಿಸಿಕೊಳ್ಳುವ ಕಂಪನಿಗಳ ಅಂಗಳದಲ್ಲೇ ದೇಹ ದಂಡಿಸಿ, ಕಾಯ ಕರಗಿಸುವ ಕಸರತ್ತು ಮಾಡಿ, ಧ್ಯಾನಕ್ಕೆ ಕೂರಿ. ‘ಟೈಂ ಇಲ್ಲ’ ಎನ್ನುವ ಗೋಳಾಟ ನಿಲ್ಲಿಸಿ, ಇರೋ ಸಮಯದಲ್ಲೇ ಒಂದಷ್ಟು ದೇಹ ದುಡಿಸಿ, ಸಿಗೋದರಲ್ಲೇ ಒಳ್ಳೇದನ್ನು ತಿಂದುಂಡು ಆರೋಗ್ಯವಾಗಿರಿಎನ್ನುತ್ತಾರೆ ತಜ್ಞರು.

ಡಯಟ್ ಹೇಗೆ?

ಡಯಟ್ ಎಂದರೆ ಅದೇನೊ ಬಹುಕಠಿಣ ವ್ರತ ಎನ್ನುವ ನಂಬಿಕೆಯಿಂದ ಹೊರಬನ್ನಿ.ನಿಮ್ಮ ವ್ಯಾಪ್ತಿಯಲ್ಲಿ ದೊರೆಯಬಹುದಾದ ಆರೋಗ್ಯಕರ ತಿಂಡಿಗಳ ಆಯ್ಕೆಯೇ ಡಯಟ್. ಅದಕ್ಕಾಗಿ ಹೆಚ್ಚು ಶ್ರಮಪಡುವ ಅಗತ್ಯವೂ ಇಲ್ಲ. ಸುತ್ತಮುತ್ತ ಬರೀ ಜಂಕ್ಫುಡ್ ಸಿಗುವುದಾದರೆ ಬಾಕ್ಸ್ನಲ್ಲಿ ಮೊಳಕೆ ಕಾಳುಗಳನ್ನೊ, ಡ್ರೈಫ್ರೂಟ್ಗಳನ್ನೊ, ತಾಜಾ ತರಕಾರಿ–ಹಣ್ಣುಗಳ ಸಲಾಡ್ಗಳನ್ನೊ ಜೊತೆಗಿಟ್ಟುಕೊಂಡು ಬಂದರೂ ಸಾಕು. ಗೋಧಿ ಹಿಟ್ಟು, ರಾಗಿ, ಜೋಳ, ನವಣಿಯ ಖಾದ್ಯಗಳನ್ನು ಸೇವಿಸಿ.ಇನ್ನು ಕಂಪನಿಗಳೂ ಇದಕ್ಕಾಗಿ ಒಂದು ಸಣ್ಣ ಬದಲಾವಣೆಯನ್ನು ತರಬೇಕು. ಕಂಪನಿಯ ಆಹಾರ ಮಳಿಗೆಗಳಲ್ಲಿ, ಕ್ಯಾಂಟಿನ್ಗಳಲ್ಲಿ ಆರೋಗ್ಯಕರ ಆಹಾರ ನೀಡಲಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಡಾ. ಸಿಲ್ಪಾ ಮೈಟಿ, ನ್ಯೂಟ್ರಿಷಿಯನ್ ಡಯೆಟಿಷಿಯನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.