ಹುಬ್ಬಳ್ಳಿ, ಅಮಟೆ ಚಾಳದ ಪುಟ್ಟ ಮನೆಯಲ್ಲಿ ಹುಟ್ಟಿದ ಹುಡುಗನೊಬ್ಬ ವಿಶ್ವಶ್ರೇಷ್ಠ ಸಂಗೀತಗಾರನಾಗಿ ಬೆಳೆದ ಯಶೋಗಾಥೆ ಇದು. ಯಂಗ್ ಮೆಸ್ಟ್ರೋ ಎಂದೇ ಪ್ರಸಿದ್ಧಿ ಪಡೆದಿರುವ ಪಂ.ಜಯತೀರ್ಥ ಮೇವುಂಡಿ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಿರಾಣಾ ಘರಾಣೆಯ ದಿಗ್ಗಜ. ತಮ್ಮ ಮನಹೋಹಕ ಧ್ವನಿಯ ಮೂಲಕ ಜನರ ಮನಸೂರೆಗೊಳ್ಳುವ ಅವರು ಯುವ ಪೀಳಿಗೆಯ ಸ್ಫೂರ್ತಿಯಾಗಿದ್ದಾರೆ.
20ಕ್ಕೂ ಹೆಚ್ಚು ದೇಶಗಳಲ್ಲಿ ನಾದಸುಧೆ ಹರಿಸಿರುವ ಅವರು ಭಾರತ ಕಂಡ ಶ್ರೇಷ್ಠ ಸಂಗೀತಗಾರ ಎನಿಸಿಕೊಂಡಿದ್ದಾರೆ. ಆರಂಭದಲ್ಲಿ ಭಾರತ ರತ್ನ ಪಂ.ಭೀಮಸೇನ ಜೋಶಿ ಅವರ ಧಾಟಿಯಲ್ಲಿ ಹಾಡುತ್ತಿದ್ದ ಅವರು ನಂತರ ತಮ್ಮದೇ ಆದ ವಿಶೇಷ ಶೈಲಿಯ ಮೂಲಕ ವಿಶ್ವದ ಗಮನ ಸೆಳೆದರು. ಗೋವಾ ಆಕಾಶವಾಣಿಯಲ್ಲಿ 12 ವರ್ಷ ಹಾಡಿರುವ ಅವರು ಆಕಾಶವಾಣಿ ಕೇಳುಗರಿಗೂ ಬಲು ಹತ್ತಿರ. ಅವರ ಗಾಯನ ಕೇಳಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಏನಂದರು ಗೊತ್ತಾ? ಈ ವಾರದ ಜಸ್ಟ್ ಮ್ಯೂಸಿಕ್ ಸರಣಿ ನೋಡಿ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.