ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಸ್ಟ್‌ ಮ್ಯೂಸಿಕ್‌–04 | ರೈತನ ಸಂಗೀತ ಜ್ಞಾನ!

Last Updated 16 ಜನವರಿ 2021, 1:28 IST
ಅಕ್ಷರ ಗಾತ್ರ

ಹಳೆ ಪಾತ್ರ, ಹಳೆ ಕಬ್ಬಿಣ, ಕ್ವಾರ್ಟರ್‌ ಬಾಟಲಿ, ಚೆಂಬು, ತಂಬಿಗೆ ಮುಂತಾದ ವಸ್ತುಗಳಿಗೆ ತಾಳವಾದ್ಯ ರೂಪ ಕೊಟ್ಟವರು. ಮೃದಂಗದಲ್ಲಿ ಹೆಸರುವಾಸಿಯಾದರೂ ಅವರು ಬಹುವಾದ್ಯ ಪಾರಂಗತ, ಅತ್ಯುತ್ತಮ ಗಾಯಕ. ಶಿವು ಅಂತಾನೇ ಎಲ್ಲಾ ಎಲ್ಲೆಡೆ ಫೇಮಸ್‌. ಪ್ರಸ್ತುತ ಸಂಗೀತ, ನೃತ್ಯ ಅಕಾಡೆಮಿ ಅಧ್ಯಕ್ಷರು. ಅವರೇ ,ವಿದ್ವಾನ್‌ ಆನೂರು ಅನಂತಕೃಷ್ಣ ಶರ್ಮಾ. ಮನೆಬಳಕೆಯ ವಸ್ತುಗಳನ್ನಿಟ್ಟುಕೊಂಡು ಶಿವು ಅವರು ವಿನ್ಯಾಸ ಮಾಡಿರುವ ‘ಪಾತ್ರ ನಾದ ವೈಭವ’ ತಾಳವಾದ್ಯ ಕಚೇರಿ ರೋಮಾಂಚನ ಮೂಡಿಸುತ್ತೆ.

15 ವರ್ಷದ ಹಿಂದೆ ನಡೆದ ಒಂದು ಘಟನೆ. ಚನ್ನಪಟ್ಟಣದಲ್ಲಿ, ಒಂದು ಧಾರ್ಮಿಕ ಕಾರ್ಯಕ್ರಮ ಇತ್ತು. ವೀಣೆ, ಕೊಳಲು, ವೈಲಿನ್‌ ವಾದನ ಕಛೇರಿ. ಶಿವು ಅವರು ಮೃದಂಗ ಸಹವಾದ್ಯ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನುಡಿಸುತ್ತಾರೆ. ಸಂಜೆ ಬೆಂಗಳೂರಿನಲ್ಲಿ ಇನ್ನೊಂದು ಕಛೇರಿ ಇದ್ದ ಕಾರಣ ಹೊರಡಲು ತಯಾರಾಗುತ್ತಾ ಇರುತ್ತಾರೆ.

ಆಗ ಒಬ್ಬ ವ್ಯಕ್ತಿ ಬರುತ್ತಾನೆ. ಚಡ್ಡಿ, ಬನಿಯನ್‌ ಹಾಕಿದ್ದಾನೆ. ತುಂಬಿದ ತೋಳು ಬನಿಯನ್‌, ಇಲ್ಲೊಂದು ಜೇಬಿದೆ. ಆತ ಒಬ್ಬ ರೈತ. ಆತ ಬಂದು ಬಬ್ರುವಾಹನ ಚಿತ್ರದ ‘ಆರಾಧಿಸುವೇ ಮದನಾರಿ’ ಗೀತೆ ನುಡಿಸಿ ಅಂತ ಹೇಳ್ತಾನೆ. ಅದಕ್ಕೆ ಶಿವು ಅವರು, ಇಲ್ಲಪ್ಪ, ಧಾರ್ಮಿಕ ಕಾರ್ಯಕ್ರಮದಲ್ಲಿ ಚಿತ್ರಗೀತೆಗಳನ್ನು ನುಡಿಸಬಾರದು ಅಂತಾರೆ. ಮುಂದೇನಾಯ್ತು?

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT