ಸೋಮವಾರ, ಜನವರಿ 25, 2021
21 °C

ಜಸ್ಟ್‌ ಮ್ಯೂಸಿಕ್‌–03: ಜಾಸ್ತಿ ಮಾರ್ಕ್ಸ್‌ ತೆಗಿಯೋದು ಬೇಡ!

ಆ ತಂದೆಗೆ ತಮ್ಮಿಬ್ಬರು ಗಂಡುಮಕ್ಕಳು ಹೆಚ್ಚು ಮಾರ್ಕ್ಸ್‌ ತೆಗೆಯುವುದು ಬೇಕಿರಲಿಲ್ಲ. ಆವರೇಜ್‌ 50–60 ತೆಗಿದರೆ ಪರ್ವಾಗಿಲ್ಲ, 70–80 ತೆಗೆದರೆ ವಿಪರೀತ ಭಯ, 90ರ ಮೇಲೆ ತೆಗೆದುಬಿಟ್ಟರೆ ಅವರು ಊಟ ಮಾಡುವುದನ್ನೇ ಬಿಟ್ಟು ಬಡುತ್ತಾರೆ. ಹೆಚ್ಚಿಗೆ ಮಾರ್ಕ್ಸ್‌ ತೆಗೆದು ಸಿಇಟಿ ಬರೆದು, ಎಂಜಿನಿಯರಿಂಗ್‌, ಮೆಡಿಕಲ್‌ ಅಂತ ಹೋಗ್ತಾರೆ ಅನ್ನೋ ಭಯ.

ತಮಾಷೆ ಅನ್ನಿಸುತ್ತದೆ ಅಲ್ಲವೆ? ಆದರೆ ಇದು ತಮಾಷೆಯಲ್ಲ, ಮಹತ್ವಾಕಾಂಕ್ಷೆ. ತನ್ನ ಮಕ್ಕಳು ಸಂಗೀತಗಾರರೇ ಆಗಬೇಕು, ಸಂಗೀತ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಬಾರದು. ಸಂಗೀತವೇ ಅವರ ಬದುಕಿನ ಆಧಾರ ಆಗಬೇಕು ಅನ್ನುವ ಮಹತ್ವಾಕಾಂಕ್ಷೆ.

ಆ ತಂದೆ ಯಾರು ಗೊತ್ತಾ? ವೈಲಿನ್‌ ಕಲಾವಿದ ವಿದ್ವಾನ್ ಮೈಸೂರು ಮಹದೇವಪ್ಪ. ಆ ಇಬ್ಬರು ಮಕ್ಕಳು ವೈಲಿನ್‌ ಬ್ರದರ್ಸ್‌, ಮೈಸೂರು ಸಹೋದರರು ಎಂದೇ ವಿಶ್ವದಾದ್ಯಂತ ಪ್ರಿಸಿದ್ಧಿ. ಅವರೇ ವಿದ್ವಾನ್‌ ಮೈಸೂರು ನಾಗರಾಜ್‌, ವಿದ್ವಾನ್‌ ಮೈಸೂರು ಡಾ.ಮಂಜುನಾಥ್‌.

ಮಹದೇವಪ್ಪ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲಿಲ್ಲ. ಕನ್ನಡ ಮೀಡಿಯಂ, ಸರ್ಕಾರಿ ಶಾಲೆಗೆ ಹಾಕಿದ್ದರು ಅಷ್ಟೇ. ಆಟ ಇಲ್ಲ, ಬರೀ ಸಂಗೀತ ಪಾಠ. ಮುಂದೆ ಏನಾಯ್ತು ಗೊತ್ತಾ?