ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಿ | ಜಸ್ಟ್‌ ಮ್ಯೂಸಿಕ್‌– 39: ಕರ್ನಾಟಕದ ಗದ್ದರ್‌!

Last Updated 18 ಸೆಪ್ಟೆಂಬರ್ 2021, 2:52 IST
ಅಕ್ಷರ ಗಾತ್ರ

ಹೋರಾಟದ ಹಾಡು, ಕ್ರಾಂತಿಗೀತೆಗಳ ಮೂಲಕ ಚಿರಪರಿಚಿತರಾಗಿರುವ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಅವರು ಕರ್ನಾಟಕದ ಗದ್ದರ್‌ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಜನಪದ ಗೀತೆಗಳ ಜೊತೆಯಲ್ಲೇ ಬೆಳೆದುಬಂದ ಅವರು ಹೋರಾಟ, ಚಳವಳಿಯ ನಂಟು ಬೆಳೆಸಿಕೊಂಡರು. ದಲಿತ ಹೋರಾಟಗಾರರಾದ ಯರನಾಗನಹಳ್ಳಿ ರಾಮಚಂದ್ರ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಪ್ರೇರಣೆಯಿಂದ ಹೋರಾಟದತ್ತ ಹೆಜ್ಜೆ ಇಟ್ಟರು.

ತಮ್ಮ ಎತ್ತರದ ಧ್ವನಿ, ಕಂಚಿನ ಕಂಠದ ಮೂಲಕ ಹೋರಾಟಗಾರರಲ್ಲಿ ಸ್ಫೂರ್ತಿ ತುಂಬಿದರು. ಕೈವಾರ ತಾತಯ್ಯನವರ ತತ್ವಪದಗಳನ್ನು ಹಾಡುವ ಅಪರೂಪದ ಗಾಯಕರೂ ಆಗಿರುವ ಪಿಚ್ಚಳ್ಳಿ ಶ್ರೀನಿವಾಸ ಅವರು ಜನಪದ ಜ್ಞಾನದ ಮೂಲಕ ರಂಗಭೂಮಿಯಲ್ಲೂ ಛಾಪು ಮೂಡಿಸಿದರು. 5 ವರ್ಷ ಮೈಸೂರು ರಂಗಾಯಣದ ಕಲಾವಿದರಾಗಿಯೂ ಕೆಲಸ ಮಾಡಿದರು. ನಂತರ ನಾಟಕ ನಿರ್ದೇಶನ, ಅಭಿನಯ, ಸಂಗೀತ ನಿರ್ದೇಶನದಲ್ಲಿ ದೊಡ್ಡ ಹೆಸರು ಗಳಿಸಿದರು. 5 ಸಿನಿಮಾಕ್ಕೂ ಸಂಗೀತ ನಿರ್ದೇಶನ ಮಾಡಿದರು.

ದೇವನೂರ ಮಹದೇವ ಅವರು ಕತೆಯಾಧಾರಿತ ‘ಅಮಾಸ’ ಚಿತ್ರದ ಗಾಯನಕ್ಕೆ ಉತ್ತಮ ಗಾಯಕ ಪ್ರಶಸ್ತಿ ಪಡೆದರು. ಜನಪದ ಅಕಾಡೆಮಿ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಪಿಚ್ಚಳ್ಳಿ ಶ್ರೀನಿವಾಸ ಅವರು ಸಾವಿರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿದರು, ಮಾಸಾಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು, 45 ಪುಸ್ತಕ ಪ್ರಕಟಿಸಿದರು. ಇಂತಿಪ್ಪ ಪಿಚ್ಚಳ್ಳಿ ಶ್ರೀನಿವಾಸ್‌ ಅವರ ಹಿತಾನುಭವ ಈ ‘ವಾರದ ಜಸ್ಟ್‌’ಮ್ಯೂಸಿಕ್‌ ಸರಣಿಯಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT