ಗುರುವಾರ , ಅಕ್ಟೋಬರ್ 22, 2020
21 °C

Video: ಜನ್ಮದಿನ ಸಂಭ್ರಮಕ್ಕೆ ಗಿಡ ನೆಡುವ ಕಾಯಕ

ಹರಿಹರ ತಾಲ್ಲೂಕಿನ ಸತ್ಯನಾರಾಯಣ ಕ್ಯಾಂಪ್‌ನ ಪ್ರಗತಿಪರ ಕೃಷಿಕ ಎನ್.ಎಸ್. ವೆಂಕಟರಾಮಾಂಜನೇಯ ಸ್ವಾಮಿ ತಮ್ಮ ಜನ್ಮದಿನ ಬಂದಾಗಲೆಲ್ಲಾ ಗ್ರಾಮ ಪಂಚಾಯಿತಿ, ಶಾಲೆಗಳು,ಆಸ್ಪತ್ರೆಗಳ ಮುಂಭಾಗ ಗಿಡಗಳನ್ನು ನೆಡುತ್ತಾರೆ. ಬಹುತೇಕ ಮಂದಿಗೆ ಕೇಕ್ ಕತ್ತರಿಸಿ, ಗುಂಡು–ತುಂಡು ಪಾರ್ಟಿ ಮಾಡಿ ಜನ್ಮದಿನ ಆಚರಿಸುವ ಈ ಕಾಲದಲ್ಲಿ ವೆಂಕಟರಾಮಾಂಜನೇಯ ಸ್ವಾಮಿ ಅವರ ಜನ್ಮದಿನ ಬಂತೆಂದರೆ ಪರಿಸರಕ್ಕೆ 50 ಇಲ್ಲವೇ 100 ಗಿಡಗಳನ್ನು ನೆಡುತ್ತಾರೆ. 2019ರಿಂದಲೂ ಈ ಕಾಯಕವನ್ನು ಮಾಡಿಕೊಂಡು ಬಂದಿದ್ದು, ಈವರೆಗೆ 1500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ.

ಇದನ್ನೂ ಓದಿ... PV Web Exclusive | ಜನ್ಮದಿನದ ಸಂಭ್ರಮಕ್ಕೆ ಅರಳಿದ ಪರಿಸರ