ಶನಿವಾರ, ಅಕ್ಟೋಬರ್ 23, 2021
24 °C

Video: ಮೊಹರಂ; ಮುಸ್ಲಿಮರಿಗೆ ಶೋಕಾಚರಣೆಯಾದರೆ, ಹಿಂದೂಗಳಿಗೆ ಹರಕೆ ತೀರಿಸುವ ಹಬ್ಬ

 

ಐತಿಹಾಸಿಕ ಹಿನ್ನೆಲೆಯ ಮೊಹರಂ ಭಾವೈಕ್ಯದ ಆಚರಣೆಯೂ ಹೌದು. ಮುಸ್ಲಿಮರಿಗೆ ಇದು ಶೋಕಾಚರಣೆಯಾದರೆ, ಹಿಂದೂ ಸೇರಿದಂತೆ ಇತರ ಸಮುದಾಯಗಳ ಜನರಿಗೆ ಇದು ಹರಕೆ ತೀರಿಸುವ ಹಬ್ಬ. ಹರಕೆ ಹೊತ್ತವರು ಹುಲಿ ವೇಷ ಧರಿಸಿ ಪಂಜಾ ಅಥವಾ ಅಲೈ ದೇವರುಗಳಿಗೆ ಹರಕೆ ಸಮರ್ಪಿಸುತ್ತಾರೆ. ಉತ್ತರ ಕರ್ನಾಟಕದ ಹುಬ್ಬಳ್ಳಿಯ ವಿವಿಧೆಡೆ ಇಂತಹ ದೃಶ್ಯಗಳು ಸಾಮಾನ್ಯ.