ಬುಧವಾರ, ಅಕ್ಟೋಬರ್ 28, 2020
24 °C

ಕರುನಾಡ ಸವಿಯೂಟ- ಆಂಬೊಡೆ

ಕಡಲೆ ಬೇಳೆ ಮತ್ತು ಕೆಲವು ಆಯ್ದ ಪದಾರ್ಥಗಳಿಂದ ಮಾಡಿದ ಕರಿದ ತಿಂಡಿ ನಮ್ಮ ಕರ್ನಾಟಕದ ಆಂಬೊಡೆ ಪ್ರತಿ ಹಬ್ಬದ ಅಡುಗೆಗೆ
ಇನ್ನಷ್ಟು ಮೆರುಗು ನೀಡುವುದು ಎಂಬುವುದು ಒಂದು ಸಾರ್ವತ್ರಿಕ ಸತ್ಯ.
ಕಡಲೆಬೇಳೆ, ಹಸಿ ಮೆಣಸಿನಕಾಯಿ ಮತ್ತು ವಿವಿಧ ಸೊಪ್ಪಿನಿಂದ ಮಾಡಿದ ಈ ರುಚಿಕರವಾದ ವಡೆ ಇಲ್ಲದೆ ಯಾವುದೇ ಹಬ್ಬ
ಪೂರ್ಣಗೊಳ್ಳುವುದಿಲ್ಲ. ತಲೆಮಾರುಗಳನ್ನು ಮೀರಿದ ಮತ್ತು ಇಲ್ಲಿಯವರೆಗೆ ಎಲ್ಲರೂ ಮೆಚ್ಚುವಂತಹ ಖಾದ್ಯ ಇದು.
ನಮ್ಮ ಸೆಲೆಬ್ರಿಟಿ ಶೆಫ್ ಸಿಹಿ ಕಹಿ ಚಂದ್ರು ಅವರು ಆಂಬೊಡೆಯನ್ನು ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿ ಮಾಡುವುದನ್ನು
ನೋಡಿ ಮತ್ತು ಬಾಯಲ್ಲಿ ನೀರೂರಿಸುವ ರಸದೌತಣಕ್ಕೆ ಸಿದ್ಧರಾಗಿ.