ಭಾನುವಾರ, ಏಪ್ರಿಲ್ 18, 2021
24 °C

VIDEO: ಹಳ್ಳಿಕೊಂಡಕ್ಕೆ ಜಿಲ್ಲಾಧಿಕಾರಿ ಭೇಟಿ | ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲ್ಲಿಕೊಂಡ ಗ್ರಾಮದಲ್ಲಿ ಜನರ ಭೇಟಿಗೆ ಬಂದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ವಿವಿಧ ಜಾನಪದ ಕಲಾ ತಂಡಗಳ ಸದಸ್ಯರು ಹಾಗೂ ಶಾಲಾ ಮಕ್ಕಳ ಮೆರವಣಿಗೆಯಲ್ಲಿ ಗ್ರಾಮದ ಹಣಮಂತ ದೇವರ ಗುಡಿಗೆ ಕರೆತಂದರು.ದೇವರ ದರ್ಶನ ಪಡೆದ ಅವರು, ಗ್ರಾಮಸ್ಥರ ಕುಶಲೋಪರಿ ಮಾಡಿದರು