ಶನಿವಾರ, ಅಕ್ಟೋಬರ್ 16, 2021
22 °C

ನೋಡಿ: ಬೆಂಗಳೂರಿನ ಕಮಲಾನಗರದಲ್ಲಿ ಕಟ್ಟಡ ನೆಲಸಮ; ಕಣ್ಣೀರಿಟ್ಟ ನಿವಾಸಿಗಳು

ಬೆಂಗಳೂರಿನ ಕಮಲಾನಗರದಲ್ಲಿ ನೋಡುನೋಡುತ್ತಿದ್ದಂತೆ ಕುಸಿದು ಬಿತ್ತು ಮೂರು ಮಹಡಿಯ ಕಟ್ಟಡ.

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಕಮಲಾನಗರದ ಶಂಕರ್‌ನಾಗ್ ಬಸ್ ನಿಲ್ದಾಣದ ಸನಿಹ ಕುಸಿಯುವ ಹಂತದಲ್ಲಿದ್ದ ಮೂರು ಮಹಡಿಯ ಕಟ್ಟಡವನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ  ನೆಲಸಮಗೊಳಿಸಿದರು. ಅಧಿಕಾರಿಗಳು ಹಿಟಾಚಿಯ ನೆರವಿನಿಂದ ಕಟ್ಟಡ ಕೆಡವಲು ಮುಂದಾದಾಗ ನಿವಾಸಿಗಳು ಕಣ್ಣೀರಿಡುತ್ತಿದ್ದ ದೃಶ್ಯ ಕಂಡುಬಂತು.

ಮನೆಯಲ್ಲಿದ್ದ ಸಾಮಾನು ಸರಂಜಾಮು, ಬಟ್ಟೆ, ಪೀಠೋಪಕರಣಗಳು ಹಾಗೂ ಕಾಗದ ಪತ್ರಗಳನ್ನು ತೆಗೆದುಕೊಳ್ಳಲು ಅವರಿಗೆ ಆಗಲಿಲ್ಲ. ಕಟ್ಟಡದ ತಾರಸಿ ಹಾಗೂ ಕಾರಿಡಾರ್‌ನಲ್ಲಿ ಒಣಗಿಸಿದ್ದ ಬಟ್ಟೆಗಳು ಹಾಗೇ ನೇತಾಡುತ್ತಿದ್ದವು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...