ಮಂಗಳವಾರ, ಏಪ್ರಿಲ್ 20, 2021
26 °C

VIDEO: ಕಲಬುರ್ಗಿ: ನೋಡ ಬನ್ನಿ ಜಿಡಗಾ ಜಾತ್ರೆ: ಮುಸ್ಲಿಂ ಸಮಾಜದವರನ್ನೂ ಪೀಠಾಧಿಪತಿ ಮಾಡಿದ್ದ ಮಠ

ಕಲಬುರ್ಗಿ: ಜಿಲ್ಲೆಯ ಆಳಂದಾ ತಾಲೂಕಿನ ಜಿಡಗಾ ಕ್ಷೇತ್ರದ ಮಠಾಧೀಶರಾದ ಷಡಕ್ಷರಿ ಶಿವಯೋಗಿ ಸಿದ್ದರಾಮೇಶ್ವರ 17ನೇ ಪುಣಸ್ಮರಣೆ ಮತ್ತು ಜಾತ್ರಾಮಹೋತ್ಸವದ ಸಂಭ್ರಮ ಮನೆ ಮಾಡಿವೆ. ಪಲ್ಲಕ್ಕಿ ಉತ್ಸವ, ರೊಟ್ಟಿ ಹಬ್ಬ ಮುಂತಾದ ಹಲವು ಕಾರ್ಯಕ್ರಮಗಳು ಕಳೆದ ವಾರದಿಂದ ನಡೆಯುತ್ತಿವೆ. ಕರ್ನಾಟಕದ ಎಲ್ಲ ಜಿಲ್ಲೆಗಳು ಸೇರಿದಂತೆ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ ಜನರು ಇಲ್ಲಿಗೆ ಬರುತ್ತಾರೆ. ಈ ಮಠದಲ್ಲಿ ವಂಶಪಾರಂಪರ್ಯವಾದ ಪೀಠಾಧಿಕಾರವಾಗಲಿ, ಒಂದು ಸಮಾಜಕ್ಕೆ ಒಳಪಟ್ಟ ಪೀಠಾಧಿಕಾರವಾಗಲಿ ಇಲ್ಲಿಲ್ಲ. ಪಂಚಾಳ ಸಮಾಜದ ಪೀಠಾಧಿಪತಿ, ಲಿಂಗಾಯತ ಸಮಾಜದ ಪೀಠಾಧಿಪತಿ ನಂತರ ಮುಸ್ಲಿಂ ಸಮಾಜದ ಯೋಗಿಯನ್ನು ಕರೆ ತಂದು ಪೀಠಾಧಿಪತಿ ಮಾಡಿದಂತಹ ವಿಶಿಷ್ಟವಾದ ಇತಿಹಾಸ ಇಲ್ಲಿದೆ.