ಭಾನುವಾರ, ಏಪ್ರಿಲ್ 18, 2021
33 °C

ಮಸ್ಕಿ ಉಪಚುನಾವಣೆ: ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿರುವ ವಿಡಿಯೊ ವೈರಲ್

ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹರ್ವಾಪುರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಜನರನ್ನು ಸರದಿ ನಿಲ್ಲಿಸಿ ₹ 200 ಮುಖಬೆಲೆ ನೋಟು ಹಂಚುತ್ತಿರುವ ವಿಡಿಯೋ ವೈರಲ್‌ ಆಗಿದೆ.

‘ಈಗ ಕೊಡುತ್ತಿರುವುದನ್ನು ತೆಗೆದುಕೊಳ್ಳಿ. ಮತದಾನದ ಮುನ್ನಾದಿನ ಏನು ತಲುಪಿಸಬೇಕೋ ಅದು ಕೂಡಾ ತಲುಪುತ್ತದೆ. ದಯವಿಟ್ಟು ಪ್ರತಾಪಗೌಡರಿಗೆ ಮತ ಕೊಡಿ’ ಎಂದು ಗ್ರಾಮಸ್ಥರಿಗೆ ಮನವಿ ಮಾಡಲಾಗಿದೆ.