ಸೋಮವಾರ, ಏಪ್ರಿಲ್ 19, 2021
23 °C

VIDEO: ಇನ್ನಷ್ಟು ನಾಯಕರ ಅಕ್ರಮಗಳು ಶೀಘ್ರ ಬಹಿರಂಗ: ದಿನೇಶ್ ಕಲ್ಲಹಳ್ಳಿ ಬಾಂಬ್

ರಾಮನಗರ: ರಮೇಶ್ ಜಾರಕಿಹೊಳಿ‌ ರಾಜೀನಾಮೆ ಪಡೆದ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರನ್ನು ದೂರುದಾರ ದಿನೇಶ್ ಕಲ್ಲಹಳ್ಳಿ ಅಭಿನಂದಿಸಿದ್ದಾರೆ. ಇನ್ನಷ್ಟು ಪ್ರಭಾವಿ ನಾಯಕರು, ಸಚಿವರ ಅಕ್ರಮಗಳ ದಾಖಲೆಗಳು ತಮ್ಮ ಬಳಿ‌ ಇದ್ದು, ಸಕಾಲದಲ್ಲಿ ಅದನ್ನು ಬಹಿರಂಗಪಡಿಸುವುದಾಗಿ ಅವರು ತಿಳಿಸಿದ್ದಾರೆ. ಭದ್ರತೆ: ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ತಮಗೆ ಭದ್ರತೆ ನೀಡುವಂತೆ ದಿನೇಶ್ ರಾಮನಗರ ಎಸ್ಪಿಗೆ ವಾಟ್ಸ್ ಆ್ಯಪ್ ಮೂಲಕ ದೂರು ನೀಡಿದ್ದರು. ದೂರು ಆಧರಿಸಿ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಇರುವ ಅವರ ನಿವಾಸಕ್ಕೆ ಪೊಲೀಸರು ಭದ್ರತೆ‌ ಒದಗಿಸಿದ್ದಾರೆ