ಶುಕ್ರವಾರ, ಆಗಸ್ಟ್ 12, 2022
20 °C

ಮಳೆಯ ಆರ್ಭಟ ದಶಕಗಳ ಬಳಿಕ ತುಂಬಿದ ಕೆರೆಗಳು!

 

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಒಂದೆಡೆ, ನದಿ–ಕೆರೆಗಳು ತುಂಬಿ ಹರಿದು ಕೋಡಿ ಬೀಳುತ್ತಿದ್ದರೆ, ಮತ್ತೊಂದೆಡೆ ಬೆಳೆಗಳು ಮಳೆ ನೀರಿಗೆ ಆಹುತಿಯಾಗುತ್ತಿವೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಐತಿಹಾಸಿಕ ಮಾವತ್ತೂರು ಕೆರೆ 25 ವರ್ಷಗಳ ನಂತರ ಕೋಡಿ ಹರಿದರೆ, ತೀತಾ ಜಲಾಶಯ 20 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿದೆ.