ಬುಧವಾರ, ಜೂನ್ 16, 2021
22 °C

Video: ಪಡಿತರಕ್ಕಾಗಿ ನೂರಾರು ಮೀಟರ್‌ ಕ್ಯೂ..

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಶ್ರೀನಗರದಲ್ಲಿ ನಾಗರಿಕರು ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿ ಮುಂದೆ ನೂರಾರು ಮೀಟರ್‌ನಷ್ಟು ದೂರ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಕೋವಿಡ್-‌19 ಸೋಂಕು ಪ್ರಕರಣಗಳ ಏರಿಕೆಯಿಂದಾಗಿ ಸರ್ಕಾರವು ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಿಸಿದೆ.

ಲಾಕ್‌ಡೌನ್‌ ಆದೇಶವು ಮೇ 10ರಿಂದ ಮೇ 24 ರವರೆಗೆ ಜಾರಿಯಲ್ಲಿರಲಿದ್ದು, ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.

ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಆಹಾರ ಇಲಾಖೆಯು ಇದನ್ನು ಗಮನದಲ್ಲಿರಿಸಿ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿದಾರರ ಆರೋಗ್ಯ ಹಿತರಕ್ಷಣೆ ದೃಷ್ಟಿಯಿಂದ ಬಯೋಮೆಟ್ರಿಕ್‌ ಪಡೆಯದೆ ಆಹಾರಧಾನ್ಯ ವಿತರಿಸುವಂತೆ ನ್ಯಾಯ ಬೆಲೆ ಅಂಗಡಿದಾರರಿಗೆ ಸೂಚಿಸಿದೆ.