ಗುರುವಾರ , ನವೆಂಬರ್ 26, 2020
19 °C

PV Web Exclusive: ಕೃಷ್ಣನೂ ಇಲ್ಲ, ಜೀರ್ಣೊದ್ಧಾರವೂ ಇಲ್ಲ!

ಎರಡು ದಶಕ ಕಳೆಯುತ್ತ ಬಂದರೂ ವಿಶ್ವ ಪ್ರಸಿದ್ಧ ಹಂಪಿಯ ಹೃದಯ ಭಾಗದಲ್ಲಿರುವ ಕೃಷ್ಣ ದೇವಸ್ಥಾನದ ಜೀರ್ಣೊದ್ಧಾರ ಕೆಲಸ ಪೂರ್ಣಗೊಂಡಿಲ್ಲ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎಎಸ್‌ಐ) 2000ನೇ ಇಸ್ವಿಯಲ್ಲಿ ಈ ದೇವಸ್ಥಾನದ ಜೀರ್ಣೊದ್ಧಾರ ಕೆಲಸ ಕೈಗೆತ್ತಿಕೊಂಡಿತ್ತು. ದೇಗುಲದ ಪ್ರವೇಶ ದ್ವಾರ, ಅದರ ಗೋಪುರ, ಪ್ರಾಂಗಣ ಸೇರಿದಂತೆ ಇಡೀ ದೇವಸ್ಥಾನವನ್ನು ಅದರ ಮೂಲ ಸ್ವರೂಪಕ್ಕೆ ಚ್ಯುತಿಯಾಗದ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಮುಂದಾಗಿತ್ತು. ಅದಕ್ಕಾಗಿ ತಮಿಳುನಾಡಿನ ನುರಿತ ಕಲಾವಿದರಿಗೆ ಕೆಲಸ ಒಪ್ಪಿಸಿತ್ತು.

ದೇವಸ್ಥಾನದ ಗೋಡೆ, ಗೋಪುರಗಳಿಗೆ ಕಬ್ಬಿಣದ ರಾಡುಗಳನ್ನು ಅಳವಡಿಸಲಾಗಿತ್ತು. ಇನ್ನೇನು ಕೆಲಸ ಆರಂಭಗೊಂಡಿತ್ತು ಎಂದು ಅನೇಕ ಜನ ಖುಷಿ ಪಟ್ಟಿದ್ದರು. ಆದರೆ, ಕೆಲಸ ಮಾತ್ರ ಶುರುವಾಗಲೇ ಇಲ್ಲ. ಈಗಲೂ ಕಬ್ಬಿಣದ ರಾಡುಗಳು ಹಾಗೆಯೇ ಉಳಿದುಕೊಂಡಿವೆ.

ಸುದ್ದಿ ಓದಿ: PV Web Exclusive: ಕೃಷ್ಣನೂ ಇಲ್ಲ, ಜೀರ್ಣೊದ್ಧಾರವೂ ಇಲ್ಲ!