ಸೋಮವಾರ, ಜನವರಿ 25, 2021
27 °C

ಸಾರಿಗೆ ಕ್ಷೇತ್ರದ ಆಶಾಕಿರಣ: ಭಾರತೀಯನ ಮೊದಲ ಪ್ರಯಾಣ

2050ರ ಹೊತ್ತಿಗೆ ಕೆಂಪು ಗ್ರಹ ಮಂಗಳನಲ್ಲಿ ಅಪಾರ ಉದ್ಯೋಗ ಸೃಷ್ಟಿಸಿ, ನಿತ್ಯ ಮೂರು ರಾಕೆಟ್‌‌ ಮೂಲಕ ಭೂಮಿ ಹಾಗೂ ಮಂಗಳನ ನಡುವೆ ಜನರನ್ನು ಹೊತ್ತೊಯ್ಯುವ ಯೋಜನೆಯನ್ನು ಸ್ಪೇಸ್‌ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದಾಗ ಹಲವರು ಗಲ್ಲದ ಮೇಲೆ ಬೆರಳಿಟ್ಟಿದ್ದರು. ಆದರೆ ಇದೇ ಇಲಾನ್ ಮಸ್ಕ್, ಕೊಳವೆ ಮಾರ್ಗದಲ್ಲಿ ವಿಮಾನಕ್ಕಿಂತಲೂ ವೇಗವಾಗಿ ತಲುಪುವ ಪರಿಕಲ್ಪನೆಯನ್ನು ಹೇಳಿ ಇನ್ನೂ ಎಂಟು ವರ್ಷಗಳಾಗಿಲ್ಲ. ಅಷ್ಟರಲ್ಲಾಗಲೇ ಅದು ಪ್ರಯಾಣಕ್ಕೆ ಸಿದ್ಧವಾಗಿದೆ. ರೈಲಿನ ಆರಾಮ ಹಾಗೂ ವಿಮಾನದ ವೇಗ ಎರಡರ ಸಮ್ಮಿಶ್ರವಾದ ಹೈಪರ್‌ಲೂಪ್‌ ತಂತ್ರಜ್ಞಾನವನ್ನು ಅಮೆರಿಕದ ವರ್ಜಿನ್ ಕಂಪನಿ ಅಭಿವೃದ್ಧಿಪಡಿಸಿದೆ. ಮೋಜಿನ ನಗರಿ ಲಾಸ್‌ವೆಗಾಸ್‌ನ ಮರಳುಗಾಡಿನಲ್ಲಿ ಸಿದ್ಧಪಡಿಸಿರುವ ಪ್ರಾಯೋಗಿಕ ಪರೀಕ್ಷಾ ಕೇಂದ್ರದಲ್ಲಿ ನ. 9ರಂದು ಈ ರೈಲು ಮಾನವರನ್ನು ಹೊತ್ತು ಮೊದಲ ಬಾರಿಗೆ ಸಂಚರಿಸಿದೆ.

ಓದಲು: