ಸೋಮವಾರ, ಜೂಲೈ 13, 2020
23 °C

ಲಾಕ್‌ಡೌನ್ ನಡುವೆ ಬೆಂಗಳೂರಿನ ಖಾಲಿ ರಸ್ತೆಗಳಲ್ಲಿ ಮಳೆಯ ನರ್ತನ

ಭಾನುವಾರ ಬೆಂಗಳೂರಿನಲ್ಲಿ ಹಲವೆಡೆ ಗಾಳಿ ಸಹಿತ ಧಾರಕಾರ ಮಳೆಯಾಗಿದೆ. ರಾಜಾಜಿನಗರ, ಮಲ್ಲೇಶ್ವರ, ಮಹಾಲಕ್ಷ್ಮಿ ಲೇಔಟ್, ಬಸವನಗುಡಿ, ಆರ್.ಟಿ.ನಗರ, ಯಲಹಂಕ, ಪೀಣ್ಯ ವಿಧಾನಸೌಧ, ಶಿವಾನಂದ ವೃತ್ತ ಕತ್ರಿಗುಪ್ಪೆ, ನಂದಿನಿಲೇ ಔಟ್, ನಾಯಂಡಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಆರ್ಭಟ ಜೋರಾಗಿತ್ತು. ಎಲ್ಲೆಡೆಯೂ ಮೋಡ ಕವಿದ ವಾತವರಣವಿತ್ತು. ಮಧ್ಯಾಹ್ನವೇ ರಭಸದಿಂದ ಮಳೆ ಸುರಿಯಲು ಆರಂಭವಾಯಿತು. ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.