ಶನಿವಾರ, ಆಗಸ್ಟ್ 8, 2020
28 °C

ರಾಮನಗರ | ಕೊರೊನಾ ಭೀತಿಯ ನಡುವೆ ಅದ್ದೂರಿಯಾಗಿ ಜನ್ಮದಿನ ಆಚರಿಸಿಕೊಂಡ ಜೆಡಿಎಸ್ ಮುಖಂಡ

ಕೊರೊನಾ ಭೀತಿಯ ನಡುವೆಯೂ ರಾಮನಗರ ತಾಲ್ಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಶೇಷಪ್ಪ ಸೋಮವಾರ ಅದ್ದೂರಿಯಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ.

ನೂರಕ್ಕೂ ಹೆಚ್ಚು ಜನ ಸೇರಿದ್ದು, ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಷ್ಟೇ ಕ್ವಾರಂಟೈನ್ ಅವಧಿ ಮುಗಿಸಿರುವ ಶಾಸಕ ಎ.ಮಂಜುನಾಥ ಸಹ ಭಾಗಿಯಾಗಿದ್ದರು.