ಮಂಗಳವಾರ, ಅಕ್ಟೋಬರ್ 27, 2020
28 °C

ಸ್ವರ ಸಾಧಕನ ನೂರೊಂದು ನೆನಪು

ಚೆನ್ನೈ: ಭಾಷೆ ಮತ್ತು ಗಡಿಗಳನ್ನು ಮೀರಿ, ಹಲವು ದಶಕಗಳ ಕಾಲ ಸಂಗೀತ ರಸಿಕರ ಮನ ತಣಿಸಿದ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ (74) ಶುಕ್ರವಾರ ಮಧ್ಯಾಹ್ನ 1.04 ಗಂಟೆಗೆ ಇಲ್ಲಿನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಕೋವಿಡ್‌–19ಗೆ ಒಳಗಾಗಿ ಆಗಸ್ಟ್‌ 5ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು, 52 ದಿನಗಳ ಕಾಲ ಕೋವಿಡ್‌ ವಿರುದ್ಧ ಹೋರಾಡಿದ್ದರು. ಅವರು ಪತ್ನಿ ಸಾವಿತ್ರಿ, ಪುತ್ರ ಎಸ್‌.ಪಿ.ಬಿ. ಚರಣ್‌ ಹಾಗೂ ಪುತ್ರಿ ಪಲ್ಲವಿ ಅವರನ್ನು ಅಗಲಿದ್ದಾರೆ.

ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಪಯಣದ ಒಂದು ಸಣ್ಣ ಪರಿಚಯ ಇಲ್ಲಿದೆ.