ಭಾನುವಾರ, ಏಪ್ರಿಲ್ 11, 2021
33 °C

VIDEO: ವಾಟ್ಸ್‌ಆ್ಯಪ್‌ನಿಂದ ‘ಮ್ಯೂಟ್ ವಿಡಿಯೊ‘ ವೈಶಿಷ್ಟ್ಯ | ಬೀಟಾ ಆವೃತ್ತಿ ಬಿಡುಗಡೆ

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಆ್ಯಂಡ್ರ್ಯಾಯ್ಡ್ ಬಳಕೆದಾರರಿಗೆ ಮ್ಯೂಟ್ ವಿಡಿಯೋ ವೈಶಿಷ್ಟ್ಯದ ಬೀಟಾ ಆವೃತ್ತಿ ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರು ತಮ್ಮ ಕಾಂಟ್ಯಾಕ್ಟ್‌ಗಳಿಗೆ ವಿಡಿಯೊ ಕಳುಹಿಸುವ ಮುನ್ನ ಅದರಲ್ಲಿರುವ ಆಡಿಯೊ ಮ್ಯೂಟ್ ಮಾಡುವ ಮಾಡಲು ಅವಕಾಶ ಮಾಡಿಕೊಡುತ್ತದೆ.

ಅಪ್ಲಿಕೇಶನ್ನಿನ ‘ಎಡಿಟ್ ವಿಡಿಯೊ’ವಿಭಾಗದಲ್ಲಿ ಮ್ಯೂಟ್ ವಿಡಿಯೊ ಆಯ್ಕೆ ಲಭ್ಯವಿದೆ. ನೀವು ಯಾರಿಗಾದರೂ ವಿಡಿಯೊ ಕಳುಹಿಸುವಾಗ ಅದರ ಆಡಿಯೊ ಅನಗತ್ಯವೆನಿಸಿದರೆ ಈ ವೈಶಿಷ್ಟ್ಯವನ್ನು ಬಳಸಿ ಮ್ಯೂಟ್ ಮಾಡಬಹುದು. ಸದ್ಯ. ಈ ವೈಶಿಷ್ಟ್ಯ ಪರೀಕ್ಷಾ ಹಂತದಲ್ಲಿದ್ದು, ಯಶಸ್ವಿಯಾದ ಬಳಕ ಎಲ್ಲ ಬಳಕೆದಾರರಿಗೆ ಸಿಗಲಿದೆ. ಈ ಮೂಲಕ ವಾಟ್ಸ್ಆ್ಯಪ್ ಬಳಕೆದಾರರ ಅನುಭವವನ್ನು ಉತ್ತಮಪಡಿಸಲು ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.