ಜೀವನದುದ್ದಕ್ಕೂ ಒಂದೇ ವೃತ್ತಿ ಮಾಡಿರುವ ಹಾಗೂ ಕೆಲಸ ಮಾಡಲು ಇಷ್ಟವಿದ್ದರೂ ಕೆಲವು ಕಟ್ಟುಪಾಡುಗಳಿಂದ ಕೈ ಕಟ್ಟಿ ಕುಳಿತಿರುವ ಯುವತಿಯರು ಹಾಗೂ ಯುವ ತಾಯಂದಿರು ಒಂದು ವೃತ್ತಿ ಬಿಟ್ಟು ಮತ್ತೊಂದು ವೃತ್ತಿ ನಿರ್ವಹಿಸಲು ಸಾಧ್ಯವೆ? ಈ ಕುರಿತು ಚಿಂತಿಸುವವರು ಯಾವ ರೀತಿ ಸಜ್ಜಾಗಬೇಕು?

‘ಮದುವೆಗಿಂತ ಮುಂಚೆ ನಾಲ್ಕೈದು ವರ್ಷ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದೆ. ಪತಿ ಬೇರೆ ಊರಲ್ಲಿದ್ದರಿಂದ ಉದ್ಯೋಗ ಬಿಡಬೇಕಾಯಿತು. ಆಮೇಲೆ ಚಿಕ್ಕ ಮಗು ಎಂದು ಮೂರ್ನಾಲ್ಕು ವರ್ಷ ಮನೆಯಲ್ಲೇ ಉಳಿದೆ. ಮತ್ತೆ ಕೆಲಸಕ್ಕೆ ಯತ್ನಿಸಿದರೆ ತಂತ್ರಜ್ಞಾನವೇ ಬದಲಾಗಿತ್ತು’ ಎನ್ನುವ ದೀಪ್ತಿ ಕಾಖಂಡಕಿ ಮಾತಿನಲ್ಲಿ ಈಗಿನ ಔದ್ಯೋಗಿಕ ಕ್ಷೇತ್ರದಲ್ಲಿ ಪೈಪೋಟಿ ನೀಡಲಾರದ ಅಸಹಾಯಕತೆ ಇತ್ತು. ಮಾಧ್ಯಮ ಸಂಸ್ಥೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿದ್ದ ದೀಪ್ತಿಗೆ ಆ ನಾಲ್ಕು ವರ್ಷಗಳ ಬ್ರೇಕ್ ಎನ್ನುವುದು ಔದ್ಯೋಗಿಕವಾಗಿ, ಆರ್ಥಿಕವಾಗಿ ಮಾತ್ರವಲ್ಲ, ತಂತ್ರಜ್ಞಾನದ ವಿಷಯದಲ್ಲೂ ಭಾರಿ ಹೊಡೆತ ನೀಡಿದ್ದಂತೂ ಹೌದು.

ಸದ್ಯಕ್ಕಂತೂ ಆರ್ಥಿಕ ಹಿಂಜರಿತ ಎಂಬ ಭೂತ ಉದ್ಯಮ ಕ್ಷೇತ್ರವನ್ನು ಕಾಡಿಸಲು ಶುರುವಾಗಿದ್ದು, ಉದ್ಯೋಗಿಗಳಲ್ಲೂ ನಡುಕ ಹುಟ್ಟಿಸುತ್ತಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯಿಂದಾಗಿ ಔದ್ಯೋಗಿಕ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, ಆಟೊಮೇಷನ್ ಪ್ರವೇಶಿಸಿರುವುದರಿಂದ ಭಾರತ ಮತ್ತು ಚೀನಾದಂತಹ ದೇಶಗಳಲ್ಲಿ ಉದ್ಯೋಗಗಳ ಮೇಲೆ ಹೊಡೆತ ಬೀಳಲಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದರಲ್ಲೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೌಶಲಗಳಿಗಂತೂ ಶೆಲ್ಫ್ ಲೈಫ್ ಬಹಳ ಕಡಿಮೆ. ವೃತ್ತಿಪರರು ಹೊಸ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳುತ್ತಾರೋ ಎನ್ನುವುದರ ಮೇಲೆ ಉದ್ಯೋಗ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುವ ಅವಧಿ ನಿಗದಿಯಾಗುತ್ತದೆ.

ಹಿನ್ನಡೆಯ ಕಹಿ

ಹೀಗಿರುವಾಗ ಮದುವೆ, ಮಗು, ಕುಟುಂಬ, ಅನಾರೋಗ್ಯ ಅಥವಾ ಇನ್ನಾವುದೋ ಕಾರಣಗಳಿಂದ ಕೆಲಸದಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಂಡ ಯುವತಿಯರಿಗೆ ಮತ್ತೆ ಉದ್ಯೋಗ ಸೇರಲು ಯತ್ನಿಸಿದಾಗ ಹಿನ್ನಡೆಯ ಕಹಿ ಅನುಭವವಾಗುವುದು ಸಹಜವೇ. ಇದಕ್ಕೆ ಕಾರಣ ಕೌಶಲದ ಕೊರತೆ, ಹೊಸ ತಂತ್ರಜ್ಞಾನದ ಪರಿಚಯವೇ ಇಲ್ಲದಿರುವುದು.

ವೃತ್ತಿ ಜೀವನಕ್ಕೆ ಮರಳಬೇಕೆಂದರೆ ಕೌಶಲವನ್ನು ಸಾಣೆಗೆ ಹಚ್ಚಿ ಹರಿತಗೊಳಿಸಿಕೊಳ್ಳಲೇಬೇಕಾದ ಅವಶ್ಯಕತೆ ಎಂದಿಗಿಂತಲೂ ಹೆಚ್ಚಾಗಿದೆ. ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಗಳ ಜೊತೆ ಸ್ಪರ್ಧೆಗಿಳಿಯಲು ಇದು ಅನಿವಾರ್ಯ ಕೂಡ.

‘ಕೆಲವು ಯುವತಿಯರು ಮದುವೆಯ ನಂತರ ಕೆಲಸ ಬಿಟ್ಟರೆ, ಹಲವರು ಮಗುವಿನ ತಾಯಿಯಾಗುತ್ತಿದ್ದಂತೆ ಕೆಲಸ ಬಿಟ್ಟು ಬಿಡುತ್ತಾರೆ. ಇನ್ನು ಕೆಲವರಿಗೆ ವೃತ್ತಿಗೆ ಮರಳುವ ಆಸೆಯಿದ್ದರೂ ಕೌಶಲಗಳ ಕೊರತೆಯಿಂದ ಹೊಸಬರ ಜೊತೆ ಪೈಪೋಟಿ ನೀಡಲು ಸಾಧ್ಯವಾಗದೆ ನಿರಾಶೆಯಿಂದ ಹಿಂದೆ ಸರಿಯಬೇಕಾಗುತ್ತದೆ’ ಎನ್ನುತ್ತಾರೆ ‘ರಿಸ್ಕಿಲ್ಸ್– ಅಪ್ಡೇಟ್ ಯುವರ್ಸೆಲ್ಫ್’ ಸಂಸ್ಥೆಯ ವಿಶ್ವಾಸ್ ಹಾದಿಮನಿ.

ಒಳಾಂಗಣ ವಿನ್ಯಾಸಗಾರ್ತಿಯಾಗಿ ಕೆಲಸ ಮಾಡಿದ್ದ ನೀನಾ ಚಂದರ್ ಅವರ ಅನುಭವ ಇದಕ್ಕಿಂತ ಭಿನ್ನವೇನಲ್ಲ. ಎರಡು ಬಾರಿ ಗರ್ಭಪಾತದಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಂದಾಗಿ ಎರಡು ವರ್ಷ ಬ್ರೇಕ್ ತೆಗೆದುಕೊಂಡಿದ್ದ ಆಕೆ ವೃತ್ತಿಗೆ ಮರಳಲು ಯತ್ನಿಸಿದಾಗ ಆಗಿದ್ದು ಮರೆಯಲಾಗದ ಅವಮಾನ. ಹೊಸ ಕಚೇರಿಯಲ್ಲಿ ಕೆಲಸ ಶುರು ಮಾಡಿದ ಒಂದು ವಾರದಲ್ಲೇ ತಂತ್ರಜ್ಞಾನದಲ್ಲಿ, ಹೊಸ ಐಡಿಯಾಗಳನ್ನು ಹೇಳುವಲ್ಲಿ ತಾನೆಷ್ಟು ಹಿಂದಿದ್ದೇನೆ ಎಂಬ ಅನುಭವವಾಗಿತ್ತು. ಸಹೋದ್ಯೋಗಿಗಳ ಎದುರು ಅವಮಾನ ಅನುಭವಿಸಿದ್ದಲ್ಲದೇ, ‘ನಿಮಗೆ ರಿಸ್ಕಿಲ್ ಅವಶ್ಯಕತೆಯಿದೆ. ಇದಕ್ಕೆ ಸಂಬಂಧಿಸಿದ ಅಲ್ಪಾವಧಿ ಕೋರ್ಸ್ ಮಾಡಿಕೊಂಡು ಬನ್ನಿ’ ಎಂಬ ಮುಖ್ಯಸ್ಥರ ಉಪದೇಶ ಬೇರೆ.

ಕೌಶಲಕ್ಕೆ ಸಾಣೆ

ಹಾಗಾದರೆ ಮೊಟಕುಗೊಳಿಸಿದ ವೃತ್ತಿಜೀವನದ ಕಡೆ ಮರಳುವುದಕ್ಕೆ ಬೇರೆ ಮಾರ್ಗಗಳು ಇಲ್ಲವೆ? ನೀವು ನಿರ್ವಹಿಸುತ್ತಿದ್ದ ಹಳೆಯ ಕೆಲಸಕ್ಕೆ ಹಿಂದಿರುಗಲು ಕಷ್ಟವೆನಿಸಬಹುದು.

ಆದರೆ ನಿಮಗೆ ಮನಸ್ಸಿದ್ದರೆ ಸಕಲ ತಯಾರಿಯೊಂದಿಗೆ ಮೊದಲು ಕಾರ್ಯಾರಂಭ ಮಾಡಿ.ಕೇವಲ ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್ನಂತಹ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಾತ್ರವಲ್ಲ, ಸಂವಹನದಂತಹ ಸಾಫ್ಟ್ ಕೌಶಲದಲ್ಲೂ ಮಹಿಳೆಯರು ಪಳಗಬೇಕಾಗಿದೆ. ಮ್ಯಾನೇಜ್ಮೆಂಟ್, ಡಿಜಿಟಲ್ ಮಾರುಕಟ್ಟೆ, ಮಾನವ ಸಂಪನ್ಮೂಲ ಮೊದಲಾದವುಗಳಲ್ಲಿ ಆನ್ಲೈನ್ ಕೋರ್ಸ್ ಮಾಡಿಕೊಳ್ಳಬಹುದು.

ಉದ್ಯೋಗಿಗಳು ನಿವೃತ್ತಿಯಾಗುವವರೆಗೂ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅಂದರೆ ಮಾತ್ರ ಉದ್ಯೋಗವನ್ನು ಉಳಿಸಿಕೊಳ್ಳಲು ಸಾಧ್ಯ. ಕೌಶಲವನ್ನು ಕರಗತ ಮಾಡಿಕೊಂಡರೆ ಮಾತ್ರ ಸಾಲದು, ಅದನ್ನು ಉನ್ನತ ದರ್ಜೆಗೇರಿಸಿಕೊಳ್ಳಬೇಕು.

ಆನ್ಲೈನ್ ಕೋರ್ಸ್ಗಳು

2004– 2012ರ ನಡುವೆ ವಿಶ್ವಬ್ಯಾಂಕ್ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಎರಡು ಕೋಟಿ ಮಹಿಳೆಯರು ಉದ್ಯೋಗ ತ್ಯಜಿಸಿದ್ದಾರೆ. ಅವರಲ್ಲಿ ಶೇ 65– 70ರಷ್ಟು ಮಹಿಳೆಯರು ಉದ್ಯೋಗಕ್ಕೆ ಮರಳಿಲ್ಲ. ಕಳೆದ ಮೂರು ವರ್ಷಗಳಲ್ಲಿ ಉದ್ಯೋಗಕ್ಕೆ ಮರಳಿರುವ ಮಹಿಳೆಯರಲ್ಲಿ ತಂತ್ರಜ್ಞಾನ ಕೌಶಲದ ಕೊರತೆ ಕಾಡುತ್ತಿದೆ.

ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ನಿರ್ವಹಣೆ, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಕೋರ್ಸ್ಗಳು ಮಹಿಳೆಯರಿಗೆ ತಮ್ಮ ವೃತ್ತಿಜೀವನವನ್ನು ಪುನರಾರಂಭಿಸಲು ಸಹಾಯ ಮಾಡುತ್ತವೆ. ವೃತ್ತಿಜೀವನದಿಂದ ವಿರಾಮ ತೆಗೆದುಕೊಂಡಿರುವ ಮಹಿಳೆಯರು ಆನ್ಲೈನ್ ಕೋರ್ಸ್ಗಳನ್ನು ಆರಂಭಿಸಬಹುದು. ಡೇಟಾ ಅನಾಲಿಟಿಕ್ಸ್, ಮಷಿನ್ ಲರ್ನಿಂಗ್ ಹೀಗೆ ಅನುಕೂಲಕ್ಕೆ ತಕ್ಕಂತೆ ಮಹಿಳೆಯರು ಕಾರ್ಯ ನಿರ್ವಹಿಸಲು ಮುಂದಾಗುತ್ತಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ.

ವೃತ್ತಿ ಬದಲಾವಣೆಗೆ ಸಿದ್ಧರಾಗಿ

ಹೊಸ ಕೆಲಸ ಆರಂಭಿಸುವಾಗ ಹಿಂಜರಿಕೆ, ಮುಜುಗರ ಇರಬಾರದು. ವೃತ್ತಿ ಜೀವನದಲ್ಲಿ ಒಂದೇ ವೃತ್ತಿ ಹೊಂದಿರಬೇಕು ಎಂಬ ಭ್ರಮೆಯಿಂದ ಹೊರಬನ್ನಿ. ನೀವು ಈ ಹಿಂದೆ ಎಂಜಿನಿಯರ್ ಆಗಿ ಉದ್ಯೋಗ ಮಾಡಿದ್ದೀರಿ ಅಂದ ಮಾತ್ರಕ್ಕೆ ಕಾರ್ಯಕ್ರಮಗಳನ್ನು ನಿರ್ವಹಿಸುವ ಇವೆಂಟ್ ಮ್ಯಾನೇಜರ್ ಆಗಿ ಮಿಂಚಬಾರದು ಎಂಬ ಯಾವುದೇ ನಿಯಮವಿಲ್ಲ ಅಲ್ಲವೇ!

ವೃತ್ತಿ ತಾರತಮ್ಯದ ಗೀಳಿರಬಾರದು ಅಷ್ಟೆ. ಒಂದು ವೃತ್ತಿಯ ಜತೆಗೆ ಮತ್ತೊಂದು ವೃತ್ತಿ ಹೇಗೆ ಎಂಬ ಭಯ, ನಕಾರಾತ್ಮಕ ಭಾವನೆ ಬೇಡ. ವೃತ್ತಿಯೇ ಜೀವನವಲ್ಲ. ಅದು ಬದುಕಿನ ಭಾಗವಷ್ಟೆ. ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಇವು ಸಹಾಯಕಾರಿ. ಒಬ್ಬ ಉದ್ಯಮಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ ಎಂದರೆ ಆತ ಒಂದೇ ಉತ್ಪಾದನೆಯನ್ನು ಅವಲಂಬಿಸಿರುವುದಿಲ್ಲ. ಹಲವಾರು ಉತ್ಪಾದನೆಗಳ ಮೂಲಕ ಯಶಸ್ಸು ಕಂಡಿರುತ್ತಾನೆ ಎಂಬುದು ನೆನಪಿರಲಿ.

ಬ್ಲಾಗ್ ರಚಿಸಿಕೊಳ್ಳಿ

ನಿಮ್ಮ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ನೀಡುವ ಯಾವುದೇ ಕೆಲಸವನ್ನಾದರೂ ಆಯ್ಕೆ ಮಾಡಿಕೊಳ್ಳಿ. ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ಮೊದಲು ನಿಮ್ಮ ಬ್ಲಾಗ್ ಆರಂಭಿಸಬೇಕು. ನಿಮ್ಮೊಳಗೆ ನಿದ್ರಿಸುತ್ತಿರುವ ಪ್ರತಿಭೆಗಳನ್ನು ಹೊರತರಲು ಬ್ಲಾಗ್ ಬೆನ್ನು ತಟ್ಟಿ ಮುಂದೆ ತಳ್ಳುತ್ತದೆ.

ಹಣಕಾಸು ಸಲಹೆ

ಹಣಕಾಸು ನಿರ್ವಹಣೆ ಕುರಿತು ಹೆಚ್ಚು ತಿಳಿವಳಿಕೆ ಅಗತ್ಯ. ಈ ವಿಷಯದಲ್ಲಿ ಹೆಚ್ಚು ಮಹಿಳೆಯರು ಎಡವುತ್ತಿದ್ದಾರೆ. ಹಣಕಾಸು ವಿಚಾರದಲ್ಲಿ ನಿಮ್ಮ ಪತಿಯ ಸಲಹೆ, ಬೆಂಬಲ ಪಡೆದುಕೊಳ್ಳಿ. ಹಣಕಾಸು ಹೂಡಿಕೆಗೂ ನಿಮ್ಮ ಪತಿಯ ಸಲಹೆ ಅವಶ್ಯ. ಬಂಡವಾಳ ಹೂಡಿಕೆ ಬಗ್ಗೆ ಹಣಕಾಸು ತಜ್ಞರ ಸಲಹೆ ಪಡೆಯಿರಿ. ವಹಿವಾಟಿನ ಕುರಿತು ಚರ್ಚಿಸಿ.

ಇದನ್ನೂ ಓದಿ:ಉದ್ಯೋಗ: ಮಹಿಳೆಯರ ಪ್ರಮಾಣ ಇಳಿಕೆ

ಆಸಕ್ತಿಯ ಮೇಲೆ ಆಯ್ಕೆ ಇರಲಿ

ನೀವು ಯಾವುದಾದರೂ ಒಂದು ಕಲೆಯಲ್ಲಿ ಪರಿಣತರಿದ್ದರೆ, ನಿಮಗೆ ಸಿಗುವ ಸಮಯಕ್ಕೆ ಅನುಗುಣವಾಗಿ ಅದರ ತರಬೇತಿ ಕೇಂದ್ರ ಆರಂಭಿಸಬಹುದು. ಪರಿಣತಿ ಇಲ್ಲದಿದ್ದರೆ, ಆಸಕ್ತಿ ಇರುವ ಕೆಲಸದಲ್ಲಿ ಅನುಭವ ಪಡೆದು ಮುಂದೆ ಹೆಜ್ಜೆ ಹಾಕಿ.ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಈಗಾಗಲೇ ಕಡಿಮೆಯಿದೆ. ಅಂದರೆ ಶೇ 50ರಷ್ಟು ಪ್ರತಿಭೆಯನ್ನು ನಾವು ಕಳೆದುಕೊಂಡಿದ್ದೇವೆ. ಹೀಗಾಗಿ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ಕೌಶಲ ತರಬೇತಿಗೆ ಆದ್ಯತೆ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.