ಪುರುಷರದ್ದೇ ಸಾಮ್ರೋಜ್ಯವೆನಿಸಿಕೊಂಡಿದ್ದ - ಎಂಜಿನಿಯರಿಂಗ್, ರಕ್ಷಣೆ, ವಾಹನ ಚಾಲನೆ, ವಿಮಾನ ಚಾಲನೆ, ಸಮೂಹ ಮಾಧ್ಯಮ, ಛಾಯಾಚಿತ್ರಗ್ರಹಣ, ಸಾಹಸ ಕ್ರೀಡೆಗಳು ಮತ್ತಿತರ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಕಾಲಿಟ್ಟಿದ್ದರೂ ಅವರಿಗೆ ಸುರಕ್ಷಿತ ಕೆಲಸದ ವಾತಾವರಣ ಸಿಗುತ್ತಿಲ್ಲ. ಲಿಂಗಭೇದ ನಮ್ಮ ದೇಶದಲ್ಲಿ ಪ್ರಚಲಿತವಾಗಿದ್ದು ಪ್ರತಿನಿತ್ಯ ಮಹಿಳೆಯರ ಮುಂದೆ ಹಲವಾರು ಹೊಸ ಸವಾಲುಗಳನ್ನು ಮುಂದಿಡುತ್ತಿದೆ.

ಅಸಂಘಟಿತ ವಲಯಗಳಲ್ಲಿ ದುಡಿಯುವ ಮಹಿಳೆಯರು ಕಡಿಮೆ ಸಂಬಳ, ಹೆಚ್ಚು ದುಡಿಮೆ, ದೌರ್ಜನ್ಯ, ಕಿರುಕುಳ, ಚುಡಾಯಿಸುವಿಕೆ, ಅನಾರೋಗ್ಯಕರ ಪರಿಸರದಲ್ಲಿ ದುಡಿತ, ಬಹುಪಾಲು ಪುರುಷರೇ ಆಗಿರುವ ಮೇಲಧಿಕಾರಿಗಳ ದಬ್ಬಾಳಿಕೆ, ಲೈಂಗಿಕ ಕಿರುಕುಳಗಳಂತಹ ಸಮಸ್ಯೆಗಳ ಬಲಿಪಶುಗಳು.

ಸಂಘಟಿತ ವಲಯಗಳಲ್ಲಿ ಉತ್ತಮ ಶಿಕ್ಷಣ ಪಡೆದಿರುವ ಮಹಿಳೆಯರೂ ಇವುಗಳಿಂದ ಮುಕ್ತವಾಗಿಲ್ಲ. ಗತ್ತಿನ ನಡವಳಿಕೆ, ಚುಡಾಯಿಸುವಿಕೆ, ಮಾತಿನಲ್ಲಿ ಕಿರುಕುಳ, ಹೊತ್ತಲ್ಲದ ಹೊತ್ತಿನಲ್ಲಿ ಅನಗತ್ಯ ಕರೆಗಳು, ಸಂದೇಶಗಳ ಮೂಲಕ ಮಾನಸಿಕ ಹಿಂಸೆ, ಮುಜುಗರ ತರುವಂತೆ ದುರುಗುಟ್ಟುವುದು, ಬಲಾತ್ಕಾರ, ಬಡ್ತಿಯ ನಿರಾಕರಣೆ, ಸವಾಲಿನ ಕೆಲಸದ ನಿರಾಕರಣೆ, ಪುರುಷ ಸಹೋದ್ಯೋಗಿಗಳು, ಮೇಲಧಿಕಾರಿಗಳು ಮತ್ತು ಕಿರಿಯರಿಂದ ವ್ಯಂಗ್ಯ ನುಡಿಗಳು, ಅನಾರೋಗ್ಯ, ಗರ್ಭಿಣಿ, ಹೆರಿಗೆ, ಬಾಣಂತನದ ಕಾಲದಲ್ಲಿ ಅನುಕಂಪ ರಹಿತ ನಡವಳಿಕೆ ಮುಂತಾದ ತೊಂದರೆಗಳನ್ನು ಅವರೂ ಕೂಡ ಎದುರಿಸುತ್ತಿದ್ದಾರೆ.

ಅಸಂಘಟಿತ ವಲಯಗಳಲ್ಲಿ, ಮಹಿಳೆಯರಿಗೆ ಉದ್ಯೋಗವು ಆರ್ಥಿಕವಾಗಿ ಅತ್ಯಂತ ಅವಶ್ಯಕವಾದ್ದರಿಂದ ಯಾವುದೇ ಸಂದರ್ಭದಲ್ಲೂ ಅವರು ಅದನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಒರಿಸ್ಸಾದ ಕೆಲವು ಗಣಿಗಳಲ್ಲಂತೂ ಮಹಿಳೆಯರು ರಾತ್ರಿಯಲ್ಲೂ ದುಡಿಯಬೇಕು ಮತ್ತು ಅವರು ಲೈಂಗಿಕ ಹಲ್ಲೆಗೆ ಒಳಗಾಗುತ್ತಾರೆ.

ಎಚ್. ಐ. ವಿ, ಏಡ್ಸ್, ಇನ್ನಿತರ ಲೈಂಗಿಕ ರೋಗಗಳು, ಉಸಿರಾಟದ ತೊಂದರೆಗಳು, ಸಿಲಿಕಾಸಿಸ್, ಕ್ಷಯ, ರಕ್ತದ ಕ್ಯಾನ್ಸರ್, ಸಂಧಿವಾತ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳು ಗಣಿಗಳಲ್ಲಿ ದುಡಿಯುವ ಮಹಿಳೆಯರಲ್ಲಿ ಸಾಮಾನ್ಯವಾಗಿವೆ.

ಸಿದ್ಧ ಉಡುಪು ಕಾರ್ಖಾನೆಗಳ ಕಾರ್ಮಿಕರು, ಕೃಷಿಕೂಲಿ ಕಾರ್ಮಿಕರು, ಮನೆಗೆಲಸ ಮಾಡುವವರು ಹಾಗೂ ಸಣ್ಣ ಕಾರ್ಖಾನೆಗಳ ಮಹಿಳಾ ಕಾರ್ಮಿಕರ ಪರಿಸ್ಥಿತಿಯು ದುಡಿಯುವ ಮಹಿಳೆಯರ ಮತ್ತೊಂದು ನೋವಿನ ಗಾಥೆಯನ್ನು ಸಾರುತ್ತದೆ. ತಮ್ಮ ಜೀವನದ ಯಾವುದಾದರೂ ಒಂದು ಸಂದರ್ಭದಲ್ಲಿ ಶೇಕಡಾ 60ರಷ್ಟು ದುಡಿಯುವ ಮಹಿಳೆಯರು ಲೈಂಗಿಕ ದೌರ್ಜನ್ಯವನ್ನು ಒಂದಲ್ಲ ಒಂದು ಬಾರಿ ಎದುರಿಸಿದ್ದಾರೆ.

ಪತ್ರಿಕೋದ್ಯಮವು ಅತ್ಯಂತ ಗೌರವಾನ್ವಿತ ಮತ್ತು ಉತ್ತಮ ಸಂಬಳವನ್ನು ನೀಡುವ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರದಲ್ಲಿ ಪುರುಷರಷ್ಟೇ ಸಂಖ್ಯೆಯಲ್ಲಿ ಮಹಿಳೆಯರೂ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮಹಿಳೆಯರು ಕಾನೂನು, ರಾಜಕೀಯ, ಕ್ರೀಡೆ, ವಿಜ್ಞಾನ, ವ್ಯವಹಾರ, ಹಣಕಾಸು, ಮುಂತಾದ ಎಲ್ಲ ವಿಷಯಗಳ ಕುರಿತ ಮಾಹಿತಿಯನ್ನು ಬಲ್ಲವರಾಗಿರುತ್ತಾರೆ.

ಇಂಟರ್ನ್ಯಾಷನಲ್ ವಿಮೆನ್ಸ್ ಮೀಡಿಯಾ ಫೌಂಡೇಷನ್ ಎಂಬ ಸಂಸ್ಥೆಯು ಭಾರತದಲ್ಲಿ ಮಹಿಳಾ ಪತ್ರಕರ್ತರ ಸಮೀಕ್ಷೆ ನಡೆಸಿ ನೀಡಿದ ವರದಿಯ ಪ್ರಕಾರ, ಬಡ್ತಿ ನೀಡುವಲ್ಲಿ ಮಹಿಳೆಯರಿಗೆ ತಾರತಮ್ಯವೆಸಗಲಾಗುತ್ತದೆ ಎಂದು ಶೇಕಡ 20.5ರಷ್ಟು ಮಂದಿ ಹೇಳಿಕೊಂಡಿದ್ದಾರೆ. ಶೇಕಡ 8.4 ರಷ್ಟು ಮಹಿಳೆಯರು ಬಡ್ತಿಯಲ್ಲಿನ ತಾರತಮ್ಯದಿಂದಾಗಿ ಮಾಧ್ಯಮ ಸಂಸ್ಥೆಗಳನ್ನು ತಾವು ತೊರೆಯಬೇಕಾಯಿತು ಎಂದಿದ್ದಾರೆ.

ಈ ಮಂಡನಾ ಪತ್ರವು ದುಡಿಯುವ ಸ್ಥಳಗಳಲ್ಲಿ ಮಹಿಳೆಯರು ನಿರ್ದಿಷ್ಟವಾಗಿ ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯಗಳು, ಕೆಲಸದ ಪರಿಸ್ಥಿತಿಯ ಇನ್ನಿತರ ಕೆಲವು ಅಂಶಗಳು, ಸಂಬಂಧಿಸಿದ ಕಾನೂನುಗಳು, ಸರ್ವೋಚ್ಚ ನ್ಯಾಯಾಲಯವು ನೀಡಿದ ಆದೇಶಗಳಿಗೆ ಕಾರಣವಾಗಿರುವ ಕೆಲವು ಮಹತ್ವದ ಪ್ರಕರಣಗಳು ಹಾಗೂ ಕಾನೂನಿನ ಅಸಮರ್ಪಕ ಜಾರಿಗೊಳಿಸುವಿಕೆಯ ಕುರಿತು ಚರ್ಚಿಸುತ್ತದೆ.

ಕೆಲವು ವ್ಯಾಖ್ಯಾನಗಳು
ಮಹಿಳೆಯರ ಮೇಲಿನ ಕ್ರೌರ್ಯ: ಮಹಿಳೆಯರ ಮೇಲಿನ ಕ್ರೌರ್ಯ ಎಂದರೆ ದೈಹಿಕ, ಲೈಂಗಿಕ ಅಥವಾ ಮಾನಸಿಕ ದೌರ್ಜನ್ಯ ಅಥವಾ ಸಾರ್ವಜನಿಕ ಮತ್ತು ವೈಯಕ್ತಿಕ ಜೀವನದಲ್ಲಿ ಸ್ವಾತಂತ್ರ್ಯದ ದಮನ ಅಥವಾ ಬೇಕಾಬಿಟ್ಟಿ ನಿರಾಕರಣೆ - ಇವುಗಳನ್ನು ಉಂಟು ಮಾಡಿದ ಅಥವಾ ಮಾಡಬಹುದಾದ ಯಾವುದೇ ಲಿಂಗಾಧಾರಿತ ಕ್ರೌರ್ಯ ಎಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ವ್ಯಾಖ್ಯಾನಿಸಿದೆ.

ದುಡಿಯುವ ಸ್ಥಳ: ಯಾವುದೇ ಉದ್ಯೋಗಿಯು ಯಾವುದೇ ಅವಶ್ಯಕ ಕೆಲಸವನ್ನಾಗಲೀ ಅಥವಾ ಸೇವೆಯನ್ನಾಗಲಿ ಪ್ರತಿನಿಧಿಸುವ, ಮಾಡುವ,

ಹೆಚ್ಚುತ್ತಿರುವ ಕಿರುಕುಳ
ನಡೆಸುವ ಅಥವಾ ಜಾರಿಗೊಳಿಸುವ ಯಾವುದೇ ಸ್ಥಳ. ಮನೆ ಕೆಲಸದಾಕೆಗೆ ಮನೆಯು ದುಡಿಯುವ ಸ್ಥಳವಾಗಿರುತ್ತದೆ. ಹೊರಗೆ ದುಡಿಯುವವರಿಗೆ ತಮ್ಮ ಕೆಲಸದ ಭೌಗೋಳಿಕ ವ್ಯಾಪ್ತಿಯೇ ಅವರ ದುಡಿಯುವ ಸ್ಥಳವಾಗಿರುತ್ತದೆ.

* ಲೈಂಗಿಕ ದೌರ್ಜನ್ಯ: ಲೈಂಗಿಕ ವ್ಯಂಗ್ಯೋಕ್ತಿಗಳು, ಅಸಂಬದ್ಧ ಲೈಂಗಿಕ ಹಾವಭಾವಗಳು, ಸಂಧಿಸುವ ದಿನಾಂಕವನ್ನು ಸೂಚಿಸುವುದು ಅಥವಾ ಲೈಂಗಿಕ ಸಹಕಾರಗಳನ್ನು ಕೇಳುವುದನ್ನು ಸೂಕ್ಷ್ಮ ರೀತಿಯ ದೌರ್ಜನ್ಯ ಒಳಗೊಂಡಿರುತ್ತದೆ.

ಇನ್ನೂ ನೇರವಾಗಿ ಇದು ಗೇಲಿಮಾಡುವುದು, ಎಳೆಯುವುದು, ಜಿಗುಟುವುದು, ತಬ್ಬಿಕೊಳ್ಳುವುದು, ತಟ್ಟುವುದು, ಉಜ್ಜುವುದು ಮತ್ತು ಮುಟ್ಟುವುದು ಇತ್ಯಾದಿಗಳನ್ನು ಒಳಗೊಂಡಿದೆ.

ಬೆಳಕಿಗೆ ಬಂದ ಕೆಲವು ಪ್ರಕರಣಗಳು
ಘನತೆಯಿಂದ, ಸ್ವತಂತ್ರವಾಗಿ ಜೀವನ ನಡೆಸಲು ಉದ್ಯೋಗ ಪುರುಷರಷ್ಟೇ ಮಹಿಳೆಯರಿಗೂ ಅವಶ್ಯಕ. ಗಂಡಸಿನಷ್ಟೇ ಕುಶಲತೆ, ಸಾಮರ್ಥ್ಯ, ಪ್ರತಿಭೆ, ಬುದ್ಧಿವಂತಿಕೆ ಹಾಗೂ ಕೆಲಸದ ಬಗ್ಗೆ ನಿಷ್ಠೆ ಮಹಿಳೆಯರಿಗೂ ಇದೆ. ಸುರಕ್ಷಿತ, ಮುಕ್ತ ಕೆಲಸದ ವಾತಾವರಣದಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಹಕ್ಕಿದೆ.

ಆದರೆ ಕೆಲಸದ ಸ್ಥಳಗಳಲ್ಲಿ ಹಲವಾರು ಕಿರುಕುಳಗಳನ್ನು ಮಹಿಳೆಯರು ಅನುಭವಿಸುತ್ತಾರೆ. ಅದರಲ್ಲೂ ಅತ್ಯಂತ ಗಂಭೀರವಾದದ್ದೆಂದರೆ ಮೇಲಧಿಕಾರಿಗಳಿಂದ ಲೈಂಗಿಕ ಕಿರುಕುಳ. ಇಂತಹ ಪ್ರಸಂಗಗಳಿಂದ ಕುಟುಂಬ ಜೀವನಕ್ಕೆ ಕುತ್ತು ಬರಬಹುದು.

ಕೆಲಸವನ್ನು ಕಳೆದುಕೊಳ್ಳುವ ಭಯ ಕಾಡುತ್ತದೆ. ಸಮಾಜ ಕೀಳಾಗಿ ಕಾಣಬಹುದೆಂಬ ಆತಂಕದಿಂದ ಮಾನಸಿಕ ಒತ್ತಡಕ್ಕೀಡಾಗುತ್ತಾರೆ. ಈ ಸಂದರ್ಭಗಳಲ್ಲಿ ಅವರು ಕೆಲಸ ಬದಲಾಯಿಸಬೇಕಾಗುತ್ತದೆ. ಕೆಲಸ ಬಿಡಬೇಕಾಗುತ್ತದೆ ಅಥವಾ ಕಿರುಕುಳಗಳನ್ನು ಸಹಿಸಿಕೊಂಡು ಸುಮ್ಮನಿರಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಕೆಲವು ದಿಟ್ಟ ಸ್ತ್ರೀಯರು ನ್ಯಾಯಕ್ಕಾಗಿ ಈ ಎಲ್ಲಾ ಭಯಗಳನ್ನು ಮೀರಿ ಹೋರಾಡಿದ್ದಾರೆ. ಕೆಲವು ಪ್ರಸಿದ್ಧ ಕೇಸುಗಳನ್ನು ಇಲ್ಲಿ ಸೂಚಿಸಲಾಗಿದೆ.

1985ರಲ್ಲಿ ಸೌದಿ ಅರೇಬಿಯನ್ ಏರ್ಲೈನ್ಸ್ನಲ್ಲಿ ಗಗನಸಖಿಯಾಗಿದ್ದ ಶಹನಾಜ್ ಮುದ್ಭಟ್ಕಳ್ ಪ್ರಕರಣವು, ದುಡಿಯುವ ಸ್ಥಳಗಳಲ್ಲಿರುವ ಲೈಂಗಿಕ ದೌರ್ಜನ್ಯವು ಒಂದು ಸಮಸ್ಯೆಯಾಗಿ ದುಡಿಯುವ ಹೆಣ್ಣು ಮಕ್ಕಳ ಸಾಮೂಹಿಕ ಪ್ರಜ್ಞೆಯನ್ನು ಸೆಳೆಯಿತು.

ಜನರ ಗಮನ ಸೆಳೆದ ಇನ್ನಿತರ ಪ್ರಕರಣಗಳೆಂದರೆ 1994 ರಲ್ಲಿ ಹೈದರಾಬಾದ್ ದೂರದರ್ಶನದ ಸಹಾಯಕ ನಿಲಯ ನಿರ್ದೇಶಕರಾಗಿದ್ದ ಶೈಲಜಾ ಸುಮನ್ರವರು, ನಿರ್ದೇಶಕರಾದ ಪಿ.ಎಲ್ ಚಾವ್ಲಾರವರ ವಿರುದ್ಧ ಸಲ್ಲಿಸಿದ ಲೈಂಗಿಕ ಕಿರುಕುಳದ ದೂರು,

ಕೇಂದ್ರ ರೈಲ್ವೆ ಸಚಿವಾಲಯದ ಶೀಘ್ರಲಿಪಿಕಾರರಾದ ನೂತನ್ ಶರ್ಮಾರವರು ಮುಖ್ಯ ನಿರ್ವಹಣಾ ಮ್ಯೋನೇಜರರ ಕಾರ್ಯದರ್ಶಿ ಆರ್.ಪಿ ಶರ್ಮಾರವರು ತಮ್ಮ ಮೇಲೆ ಲೈಂಗಿಕ ಹಲ್ಲೆ ನಡೆಸಿದರೆಂದು ನೀಡಿದ ದೂರಿನಿಂದಾಗಿ ಆಕೆಯನ್ನು ವರ್ಗಾವಣೆ ಮಾಡಿದ ಘಟನೆ,

ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಸಂಗೀತ ಸಂಯೋಜಕರಾದ ಅನು ಮಲ್ಲಿಕ್ ವಿರುದ್ಧ ಅಲಿಷಾ ಚಿನಾಯ್ ದಾಖಲಿಸಿದ ಪ್ರಕರಣ, ಪಂಜಾಬಿನ ಅಂದಿನ ಡಿಜಿಪಿ ಕೆ ಪಿ ಎಸ್ ಗಿಲ್ರವರ ಅಸಭ್ಯ ವರ್ತನೆಯ ವಿರುದ್ಧ ರೂಪೆನ್ ಬಜಾಜ್ ನಡೆಸಿದ ಕಾನೂನು ಸಮರ - ಮುಂತಾದವು.

ವಿಶಾಖ ತೀರ್ಪು
1992ರಲ್ಲಿ ರಾಜಸ್ತಾನ ಸರ್ಕಾರದ ಮಹಿಳಾ ಅಭಿವೃದ್ಧಿ ಯೋಜನೆಯಡಿ ನೇಮಕವಾಗಿದ್ದ ಬನ್ವರಿ ದೇವಿ ಬಾಲ್ಯವಿವಾಹವನ್ನು ತಡೆಗಟ್ಟಲು ಪ್ರಯತ್ನಿಸಿದ ಕಾರಣಕ್ಕಾಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಯಿತು.

ಆಗ `ವಿಶಾಖ~ ಎಂಬ ವೇದಿಕೆಯಡಿ ಮಹಿಳಾ ಸಂಘಟನೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದುಡಿಯುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಮಧ್ಯಪ್ರವೇಶಿಸುವಂತೆ ಕೋರಿದವು. ಆಗ ಸರ್ವೋಚ್ಚ ನ್ಯಾಯಾಲಯವು ವಿಶಾಖ ತೀರ್ಪು ಎಂದು ಪ್ರಸಿದ್ಧವಾಗಿರುವ ತೀರ್ಪಿನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ನೀಡಿತು.

ಲೈಂಗಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಮಸೂದೆ 2010 ಅನ್ನು, ಇತ್ತೀಚೆಗೆ ನವೆಂಬರ್ 4 ರಂದು ಕೇಂದ್ರ ಸಂಪುಟವು ಅನುಮೋದಿಸಿದೆ. ದೈಹಿಕ ಸ್ಪರ್ಶ, ಲೈಂಗಿಕ ಸಹಕಾರಕ್ಕೆ ಒತ್ತಾಯ, ಲೈಂಗಿಕ ಬಣ್ಣವುಳ್ಳ ಮಾತುಗಳು, ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸುವುದು ಇತ್ಯಾದಿಗಳನ್ನು ನಿಷೇಧಿತ ನಡವಳಿಕೆಯೆಂದು ಸರ್ವೋಚ್ಚ ನ್ಯಾಯಾಲಯ ವಿವರಿಸುತ್ತದೆ.

ಕೆಲಸವನ್ನು ಪಡೆಯಲು, ಕೆಲಸವನ್ನು ನಿಭಾಯಿಸಲು ಲೈಂಗಿಕ ಸಹಕಾರವನ್ನು ಷರತ್ತಾಗಿ ಒಡ್ಡಿದರೆ ಅಥವಾ ದುಡಿಯುವ ಸ್ಥಳಗಳಲ್ಲಿ ಅಡ್ಡಿ ಆತಂಕಗಳನ್ನು ಸೃಷ್ಟಿ ಮಾಡುವಂತಿದ್ದರೆ, ಅದು ಮತ್ತಷ್ಟು ಗಂಭೀರವಾಗಿರುತ್ತವೆ.

ಮೇಲ್ದರ್ಜೆಯ ಅಧಿಕಾರಿ, ಸಹೋದ್ಯೋಗಿ, ಕೆಳಗಿನ ನೌಕರರು ಅಥವಾ ಗ್ರಾಹಕರು ಇವರಾರಿಂದಲಾದರೂ ಸರಿಯೆ ಇಂತಹ ನಡವಳಿಕೆ ಪ್ರದರ್ಶಿತವಾಗಬಹುದು.

ಲಿಂಗ ಸಮಾನತೆ: ಸಂವಿಧಾನದಲ್ಲಿರುವ ರಕ್ಷಣೆ
* ಪರಿಚ್ಛೇದ 14 ರಡಿ ಸಮಾನತೆ ಹಾಗೂ ಸಂರಕ್ಷಣೆ

* ಪರಿಚ್ಛೇದ 15 ಜನಾಂಗ, ಲಿಂಗ ಇತ್ಯಾದಿ ಆಧಾರಗಳಲ್ಲಿ ತಾರತಮ್ಯದ ನಿಷೇಧ

* ಪರಿಚ್ಛೇದ 16 ಸಾರ್ವಜನಿಕ ಉದ್ಯೋಗದ ವಿಷಯಗಳಲ್ಲಿ ಸಮಾನ ಅವಕಾಶಗಳು
ಲಿಂಗ ಸಮಾನತೆ: ಸಂವಿಧಾನದ ಮಾರ್ಗದರ್ಶಿ ಸೂತ್ರ

* ಪರಿಚ್ಛೇದ 39(ಎ) ಪುರುಷ ಹಾಗೂ ಮಹಿಳೆಗೆ ಜೀವನಾಂಶವನ್ನು ಹೊಂದಲು ಸಮಾನ ಹಕ್ಕಿದೆ.

* ಪರಿಚ್ಛೇದ 39(ಬಿ) ಪುರುಷ ಹಾಗೂ ಮಹಿಳೆಯರಿಬ್ಬರಿಗೂ ಸಮಾನ ಕೆಲಸ
ಅಸಂಘಟಿತ ಕ್ಷೇತ್ರಗಳಲ್ಲಿ

ಒಂದು ವರದಿಯ ಪ್ರಕಾರ ಭಾರತದಲ್ಲಿ 28,000 ಉಡುಪು ಕಾರ್ಖಾನೆಗಳಿವೆ. ಅವುಗಳಲ್ಲಿ ಶೇಕಡ 70ರಷ್ಟು ರಫ್ತಿಗಾಗಿ ಉತ್ಪಾದನೆ ಮಾಡುತ್ತಿರುವ ಕಾರ್ಖಾನೆಗಳು.

ಬೆಂಗಳೂರಿನಲ್ಲೇ ಸುಮಾರು 3,800 ಕಾರ್ಖಾನೆಗಳಿದ್ದು ಅವುಗಳಲ್ಲಿ 7,75,000 ಕಾರ್ಮಿಕರಿದ್ದಾರೆ. ಕಾರ್ಖಾನೆಗಳ ಮಾಲೀಕತ್ವ ಕೆಲವೇ ಜನರ ಕೈಯಲ್ಲಿದೆ.

1994ರಲ್ಲಿ ಕೇಂದ್ರ ಸರ್ಕಾರವು ಕನಿಷ್ಠ ವೇತನ ಕಾಯಿದೆ ಜಾರಿಗೆ ತಂದಿದ್ದರೂ ಸಣ್ಣ ಸಂಸ್ಥೆಗಳಲ್ಲಿ ಈ ಕಾಯಿದೆ ಇನ್ನೂ ಅನುಷ್ಠಾನವಾಗಿಲ್ಲ. ಇಂತಹ ಸಿದ್ಧ ಉಡುಪು ಕಾರ್ಖಾನೆ ಘಟಕಗಳಲ್ಲಿ, ಶ್ರಮದ ಶೋಷಣೆ ತೀವ್ರವಾಗಿದೆ. ವೇತನ ಅತಿ ಕಡಿಮೆ ಇದೆ, ಕೆಲಸದ ವೇಳೆ ಹೆಚ್ಚಾಗಿದೆ ಮತ್ತು ಕೆಲಸಕ್ಕೆ ಯಾವುದೇ ಭದ್ರತೆ ಇಲ್ಲ.

14 ರಿಂದ 30 ವಯಸ್ಸಿನ ಹೆಂಗಸರನ್ನು ಉಡುಪು ಕಾರ್ಖಾನೆಗಳಲ್ಲಿ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಕನಿಷ್ಠ ವೇತನವನ್ನೂ ನಿಗದಿಪಡಿಸದೆ ಸುಮಾರು 10 ರಿಂದ 12 ಘಂಟೆಗಳ ಕಾಲ ದುಡಿಯುವಂತೆ ಒತ್ತಾಯಿಸಲಾಗುತ್ತದೆ.

ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಲಜ್ಜೆಯ ಸ್ವಭಾವವನ್ನು ರೂಢಿಸಿಕೊಂಡಿರುವ ಹೆಣ್ಣುಮಕ್ಕಳು ಆರ್ಥಿಕ ಕಾರಣಗಳಿಗಾಗಿ ಬಟ್ಟೆ ಕಾರ್ಖಾನೆಗಳಲ್ಲಿ ಕೆಲಸವನ್ನು ತೆಗೆದುಕೊಳ್ಳುತ್ತಾರೆ.

ಒಮ್ಮೆ ಕೆಲಸಕ್ಕೆ ಸೇರಿದ ಮೇಲೆ ಎಲ್ಲಾ ರೀತಿಯ ಲೈಂಗಿಕ ಅತ್ಯಾಚಾರಗಳನ್ನು ಎದುರಿಸಬೇಕಾಗುತ್ತದೆ. ಅವಮಾನ ಮಾಡುವುದು, ಆಶ್ಲೀಲ ಮಾತುಗಳು ಇವೆಲ್ಲಾ ಈ ದುಡಿತದ ಸ್ಥಳಗಳಲ್ಲಿ ಸರ್ವೇಸಾಮಾನ್ಯ.

ಕನಿಷ್ಠ ಸವಲತ್ತುಗಳಾದ ಶೌಚಾಲಯಗಳು, ಶುದ್ಧಗಾಳಿ, ಕುಡಿಯುವ ನೀರು ಸಹ ಇವರಿಗೆ ಸಿಗುವುದಿಲ್ಲ. ಶೌಚಾಲಯವನ್ನು ಉಪಯೋಗಿಸುವುದರ ಬಗ್ಗೆಯೇ ನಿರ್ಬಂಧಗಳಿರುತ್ತವೆ. ಹಲವಾರು ರೋಗ ರುಜಿನಗಳಿಗೆ ಇವರು ತುತ್ತಾಗುತ್ತಾರೆ. ಕೆಲಸದ ವೇಳೆಯಲ್ಲಿ ಅವರಿಗೆ ಕೂರಲೂ ಅನುಮತಿ ಇರುವುದಿಲ್ಲ.

ಊಟದ ವಿರಾಮ ಕೇವಲ 30 ನಿಮಿಷಗಳಷ್ಟು ಮಾತ್ರ ಇರುತ್ತದೆ. ಈ ಎಲ್ಲಾ ದೌರ್ಜನ್ಯಗಳೊಂದಿಗೆ ಮತ್ತೊಂದು ಅವಮಾನವಾಗುವಂತಹ ವಿಷಯವೆಂದರೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಮೇಲ್ವಿಚಾರಕರು ಮೈ ಮುಟ್ಟಿ ತನಿಖೆ ಮಾಡುತ್ತಾರೆ.

ಗಾಳಿಯಾಡಲು ಅವಕಾಶವಿಲ್ಲದಿರುವುದರಿಂದ ಬಟ್ಟೆಗಳ ದೂಳು ಕಾರ್ಮಿಕರ ಶ್ವಾಸಕೋಶ ಸೇರುತ್ತದೆ. ಅನಾರೋಗ್ಯಕರ ಕೆಲಸದ ವಾತಾವರಣದಿಂದಾಗಿ ಗಂಟಲು ಕ್ಯಾನ್ಸರ್, ರಕ್ತಹೀನತೆ, ನಿದ್ದೆ ಬರದಿರುವುದು, ಕಾಲು ಮತ್ತು ಬೆನ್ನುನೋವು, ಗರ್ಭಪಾತದಂತಹ ಘಟನೆಗಳು ಅತಿ ಸಾಮಾನ್ಯವಾಗಿ ಮಹಿಳಾ ಕಾರ್ಮಿಕರಲ್ಲಿ ಕಂಡುಬರುತ್ತದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ ಮಹಿಳೆಯರಿಗೆ ಉದ್ಯೋಗಾವಕಾಶಗಳಿರುವುದು ಅತಿ ಹೆಚ್ಚು ಸಣ್ಣ ಉಡುಪು ಕಾರ್ಖಾನೆಗಳಲ್ಲಿ ಹಾಗೂ ಮಹಿಳೆಯರು ಅತಿ ಹೆಚ್ಚು ಶೋಷಣೆ, ಮಾನಸಿಕ ಒತ್ತಡ ಹಾಗೂ ಲೈಂಗಿಕ ಕಿರುಕುಳ ಅನುಭವಿಸುತ್ತಿರುವುದು ಇಲ್ಲಿಯೇ.

ಅನುಷ್ಠಾನದಲ್ಲಿ ಲೋಪದೋಷ
* ಸರ್ವೋಚ್ಚ ನ್ಯಾಯಾಲಯದ ಸೂಚನೆ ಇದ್ದರೂ ದೂರು ಸಲ್ಲಿಸಲು ಸಮಿತಿಗಳನ್ನು ಸ್ಥಾಪಿಸಿರುವುದು ಕೆಲವೇ ಸಂಸ್ಥೆಗಳಲ್ಲಿ ಮಾತ್ರ.

* ಸ್ಥಾಪನೆಯಾದ ಕೆಲವೇ ಲೈಂಗಿಕ ದೌರ್ಜನ್ಯ ವಿಚಾರಣಾ ಸಮಿತಿಗಳ ಮುಂದೆಯೂ ದಾಖಲಾದ ದೂರುಗಳು ತೀರಾ ಕಡಿಮೆ.

* ಕೆಲಸ ಕಳೆದುಕೊಳ್ಳುವ ಭಯ ಮಹಿಳೆಯರನ್ನು ದೂರು ಸಲ್ಲಿಸುವುದರಿಂದ ದೂರವಿಡುತ್ತದೆ.

* ನ್ಯಾಯ ತೀರ್ಮಾನವಾಗುವುದು ಅತಿ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದಲೂ ಮಹಿಳೆಯರು ದೂರು ಸಲ್ಲಿಸುವುದಿಲ್ಲ.

* ಜೈಲು ಶಿಕ್ಷೆ ಅಥವಾ ದಂಡದಂತಹ ಶಿಕ್ಷೆಯ ಸ್ವರೂಪಗಳು ವಿಶೇಷವಾಗಿ ಅಸಂಘಟಿತ ವಲಯಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದಂತಹ ಅಪರಾಧಕ್ಕೆ ಗೌಣವೆನಿಸಿಬಿಡುತ್ತವೆ.

* ಮಾಲೀಕರು ಮಹಿಳಾ ಕಾರ್ಮಿಕರ ಮೇಲೆ ಕಳ್ಳತನದ ಆರೋಪ ಹೊರಿಸಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸುವುದು ಸಾಮಾನ್ಯವಾದ್ದರಿಂದಲೂ ಮಹಿಳೆಯರು ದೂರು ಸಲ್ಲಿಸುವುದಿಲ್ಲ.

* ನ್ಯಾಯಾಂಗ ಸವಲತ್ತುಗಳ ಬಗ್ಗೆ ಅರಿವಿಲ್ಲದಿರುವ ಕಾರಣ ಹಾಗೂ ಪ್ರಕರಣವನ್ನು ಮುಂದುವರಿಸಿಕೊಂಡು ಹೋಗಲು ಅಸಮರ್ಥರಾಗುವುದರಿಂದ ಮಹಿಳೆಯರು ಅಸಹಾಯಕರಾಗುತ್ತಾರೆ.

* ಮಹಿಳೆಯರು ನ್ಯಾಯಾಲಯದ ಸೂಚನೆಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರೆ, ಅವರನ್ನು ಅವಮಾನಪಡಿಸಿ ಕೆಲಸದಿಂದ ವಜಾಮಾಡಲಾಗುತ್ತದೆ.

* ದೂರು ಸಲ್ಲಿಸಿದ ಮಹಿಳೆಯರು ಕ್ರೂರ ಸಮಾಜವನ್ನು ಎದುರಿಸಬೇಕಾಗುತ್ತದೆ. ತಪ್ಪಿತಸ್ಥನಿಗೆ ಛೀಮಾರಿ ಹಾಕುವ ಬದಲು ಮಹಿಳೆಯರ ಮೇಲೆ ಗೂಬೆ ಕೂರಿಸಲಾಗುವುದೆಂಬ ಭಯದಿಂದಲೂ ಮಹಿಳೆಯರು ದೂರು ಸಲ್ಲಿಸುವುದಿಲ್ಲ.

* ಸರ್ವೋಚ್ಚ ನ್ಯಾಯಾಲಯದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವುದು ಅತ್ಯಾವಶ್ಯಕವಾಗಿದೆ.

ಉಪಸಂಹಾರ: ಲೈಂಗಿಕ ಕಿರುಕುಳ ಮಹಿಳೆಯರ ಮೇಲೆ ನಡೆಯುವ ಹೀನ ಕೃತ್ಯ ಮತ್ತು ಇದಕ್ಕೆ ತೀವ್ರ ಶಿಕ್ಷೆಯಾಗಬೇಕು. ಕಾನೂನುಗಳ ಅನುಷ್ಠಾನಗಳಲ್ಲಿ ಸಾಕಷ್ಟು ಲೋಪದೋಷಗಳಿವೆ. ಪುರುಷಪ್ರಧಾನ ಧೋರಣೆ ಸಮಾಜದಲ್ಲಿ ಪ್ರಬಲವಾಗಿರುವ ತನಕ ಕಿರುಕುಳ ಕೊನೆಯಾಗುವುದಿಲ್ಲ. ಸಮಾಜದಲ್ಲಿ ಪ್ರಜಾತಾಂತ್ರಿಕ ಸಮಾನತೆ ಆಧಾರಿತ ಚಿಂತನಾ ಲಹರಿ ಹರಿಯುವುದು ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.