ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯದೊಳು ಇದೇನಿದು..

Published 10 ಫೆಬ್ರುವರಿ 2024, 0:08 IST
Last Updated 10 ಫೆಬ್ರುವರಿ 2024, 0:08 IST
ಅಕ್ಷರ ಗಾತ್ರ

ಮಮತೆ, ವಾತ್ಸಲ್ಯ, ಪ್ರೀತಿ, ಪ್ರೇಮಗಳ ಒರತೆಹುಟ್ಟಿಸುವ ಮಹಿಳೆಯರ ಹೃದಯದಲ್ಲಿ ಅಸೂಯೆ ಸಹ ಮನೆ ಮಾಡಿರುತ್ತದೆ. ಪ್ರೀತಿಯ ಮತ್ತು ಪ್ರೀತಿಪಾತ್ರರ ವಿಷಯ ಬಂದಾಗಲಂತೂ ಈ ಮನೆಯಲ್ಲಿ ಎಲ್ಲಿಲ್ಲದ ಸದ್ದುಗದ್ದಲವೇಳುತ್ತದೆ. 

ಇದು ಪಡೆಯುವ ಹಟ, ಪ್ರೀತಿಸುವ ವ್ಯಕ್ತಿಯ ಸಂಪೂರ್ಣ ಸಮಯ ತನಗೇ ದಕ್ಕಲಿ ಎಂಬ ಛಲ ಇವೆರಡೂ ಅಸೂಯೆಯ ಮೂಲ ಕಾರಣವಾಗಿರುತ್ತದೆ. ಇದನ್ನು ಮೀರಿ ಬೆಳೆಯುವುದು ಸುಲಭ. ಆದರೆ ಆ ಕ್ಷಣದಲ್ಲಿ ಪ್ರೀತಿಯ ಸಂಗಾತಿ ಮತ್ತು ಸಂಗಾತಿಯ ಪ್ರೀತಿ ಇವೆರಡರ ನಡುವೆ ಜೀಕುವ ಮನ ಆ ಕಡೆ ಗಮನಕೊಡದೆ, ವಿನಾಕಾರಣ ಕಿರಿಕಿರಿ, ಜಗಳ ಮಾಡಿಕೊಂಡು ಮನಸು ಕಹಿಯಾಗಿಸಿಕೊಳ್ಳುವುದೇ ಹೆಚ್ಚು. 

ಅಸೂಯೆಯನ್ನು ಮೀರಲು, ಸಂಗಾತಿಯ ಆಯ್ಕೆ ಮತ್ತು ಆದ್ಯತೆಗಳನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಆಯ್ಕೆ ಮತ್ತು ಆದ್ಯತೆಗಳನ್ನೂ ಅದರೊಟ್ಟಿಗೆ ಹೊಂದಿಸಿ ನೋಡಿ, ಕೆಲವೊಮ್ಮೆ ಅಸೂಯೆ ಮೇಲುಗೈ ಸಾಧಿಸಿದಾಗ ಜಗಳಗಳಿಂದ, ಇರುವ ರಸನಿಮಿಷಗಳನ್ನೂ ವಿರಸಕ್ಕೆ ತಳ್ಳುವ ಸಾಧ್ಯತೆಗಳಿರುತ್ತವೆ. ಸಂಗಾತಿಯನ್ನು ಕಳೆದುಕೊಳ್ಳುವ ಸಣ್ಣದೊಂದು ಭೀತಿ, ಎಲ್ಲಿ ನಮ್ಮಿಂದ ವಿಮುಖರಾಗುವರೋ ಎಂಬ ಆತಂಕ, ನಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಅಸುರಕ್ಷಿತ ಭಾವವೂ ಈರ್ಷೆಯ ಮೂಲವಾಗಿರುತ್ತದೆ.

ಅಂಥ ಸಂದರ್ಭಗಳಲ್ಲಿ, ಈರ್ಷೆಯನ್ನು ಕಣ್ಣುಹಿಗ್ಗಲಿಸಿ, ಸುಮ್ಮನೆ ಕೂರಿಸಿ, ನಗುನಗುತ್ತ ಎಲ್ಲವನ್ನೂ ಎದುರಿಸುವಷ್ಟು ಧಾರಾಳವಾಗಿ ಪ್ರೀತಿ ಹಂಚಿ.

ನಿಮ್ಮ ಆತಂಕ, ಅಸುರಕ್ಷಿತ ಭಾವವನ್ನು ಸಂಗಾತಿಯೊಡನೆ ಚರ್ಚಿಸಿ. ಮೊದಲು ಸಿಲ್ಲಿ ಎನಿಸಿದರೂ ನಂತರ ನಿಮ್ಮ ಬಗ್ಗೆ ಆದರವೇ ಬೆಳೆಯುತ್ತದೆ. ಜೊತೆಗೆ ಪ್ರೀತಿಯೂ ಹೆಚ್ಚುತ್ತದೆ. ಇದು ಹೃದಯವನ್ನು ಸುರಕ್ಷಿತವಾಗಿಡುತ್ತದೆ. ಅಲ್ಲಿ ಭೀತಿ, ಆತಂಕ, ಕೋಪ, ರೋಷಗಳು ಮೂಡದಂತೆ ನೋಡಿಕೊಳ್ಳುತ್ತದೆ. ನಮ್ಮ ಪ್ರೀತಿಯನ್ನು ನಾವೇ ಕಳೆದುಕೊಳ್ಳದಂತಿರಲು, ನಮ್ಮ ಹೃದಯದಲ್ಲಿ ವೇದನೆಗೆ ತಾವು ಕೊಡದೇ ಇರಬೇಕೆಂದರೆ ಈರ್ಷೆಯನ್ನು ದೂರವಿಡಿ. ಮುಕ್ತವಾಗಿ ಪ್ರೀತಿ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT