ಬೆಂ ಗಳೂರಿನಲ್ಲಿ ಎಡಿಎ ರಂಗಮಂದಿರ ಇರದಿದ್ದರೆ...
ಬಾಲಭವನದಲ್ಲಿ ಮಕ್ಕಳ ರಂಗಮಂದಿರ ಇರದಿದ್ದರೆ...
ರವೀಂದ್ರ ಕಲಾಕ್ಷೇತ್ರ ಈಗ ಇದ್ದಂತೆ ಇರದಿದ್ದರೆ...

ಕೆನರಾ ಬ್ಯಾಂಕಿನಲ್ಲಿ ‘ಕೌಶಲ’ ಯೋಜನೆ ಅಡಿಯಲ್ಲಿ ಸರಳ ಸಾಲ ಮತ್ತು ಕರಕುಶಲ ಕಲೆಗಳಿಗೆ ಪ್ರೋತ್ಸಾಹ ದೊರೆಯದಿದ್ದರೆ...

ಕಾವೇರಿ ಎಂಪೋರಿಯಂಗೆ ಈಗಿರುವ ಮಾನ್ಯತೆ ದೊರೆಯದೇ ಇದ್ದಿದ್ದರೆ...

ಒಂದುವೇಳೆ ಹೀಗೆ ಆಗಿದ್ದರೆ ಬೆಂಗಳೂರಿನ ಸಾಂಸ್ಕೃತಿಕ ಲೋಕವನ್ನು ಊಹಿಸುವುದೇ ಕಷ್ಟವಾಗುತ್ತಿತ್ತು. ವಿಮಲಾ ರಂಗಾಚಾರ್ ಅವರು ಕರಕುಶಲ ಕಲೆ, ಸಂಗೀತ, ನೃತ್ಯ, ರಂಗಭೂಮಿ, ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ.. ಹೀಗೆ ಹಲವಾರು ಆಯಾಮಗಳಲ್ಲಿ ಶ್ರಮಿಸಿದರು.

ಇನ್ನೊಂದು ನಾಲ್ಕುವರ್ಷ ಕಳೆದಿದ್ದರೆ ಶತಾಯುಷಿಯಾಗಿರುತ್ತಿದ್ದ ಸ್ಫುರದ್ರೂಪಿ ವಿಮಲಾ, ಸಂಪ್ರದಾಯಸ್ಥ ಕುಟುಂಬದ ಮಹಿಳೆ. ದೂರದರ್ಶಿತ್ವ ಮತ್ತು ಆಡಳಿತ ಎರಡನ್ನೂ ಅತಿಶಿಸ್ತಿನಿಂದ ನಡೆಸಿಕೊಂಡು ಬಂದರು. ಘನತೆಯಿಂದ ಬದುಕಿದರು. ಮೃದುಮಾತಿನ, ಮೆಲುಧ್ವನಿಯ ಆದರೆ ಗಟ್ಟಿ ನಿಲುವಿನ ಸುಶಿಕ್ಷತ ಮಹಿಳೆ. ಸಿದ್ಧಚೌಕಟ್ಟುಗಳನ್ನು ಮೀರಿ, ಸಕಾರಾತ್ಮಕವಾಗಿ ಬೆಳೆಯುವುದನ್ನು ತೋರಿಸಿಕೊಟ್ಟವರು.

ಕಾವೇರಿ ಎಂಪೋರಿಯಂನ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ನಂತರ ರಾಜ್ಯಪಾಲರಾದ ಧರ್ಮವೀರ ಅವರು ಬಾಲಭವನದ ಜವಾಬ್ದಾರಿ ವಹಿಸಿಕೊಟ್ಟರು.

ಮಕ್ಕಳ ಮನಃಶಾಸ್ತ್ರ ಓದಿದ್ದ ಅವರು ಮಕ್ಕಳ ರಂಗಭೂಮಿಯತ್ತ ಹೆಚ್ಚು ಒಲವು ತೋರಿದರು. ಎಂ.ಎಸ್.ಸತ್ಯು, ಬಿ.ವಿ.ಕಾರಂತ, ಪ್ರೇಮಾ ಕಾರಂತ, ಗಿರೀಶ ಕಾರ್ನಾಡ್ ಮುಂತಾದವರೆಲ್ಲ ಇವರ ಕನಸಿಗೆ ನೀರೆರೆದರು. ಬಲು ಶಿಸ್ತಿನ ವಿಮಲಾ ಅವರು ಕಲೆಗೆ ಯಾವತ್ತೂ ಮೌಲ್ಯ ಕಟ್ಟಲಾಗದು ಎಂದೇ ಹೇಳುತ್ತಿದ್ದರು. ಟಿ.ಪಿ.ಕೈಲಾಸಂ ರಚನೆಯ ‘ಪೋಲಿ ಕಿಟ್ಟಿ’ ನಾಟಕ ಎಂಟು ಪ್ರದರ್ಶನ ಕಂಡಿತ್ತು. ಪ್ರತಿ ಪ್ರದರ್ಶನಕ್ಕೂ ಎಂಟು ಸಾವಿರ ರೂಪಾಯಿ ಸಂಭಾವನೆ ನೀಡಿದ್ದರು. ಕಲೆಯು ಕಲಾವಿದರನ್ನು ಪೋಷಿಸಿದರಷ್ಟೇ ಕಲಾವಿದರೂ ಕಲೆಯನ್ನು ಪೋಷಿಸುತ್ತಾರೆ ಎಂಬುದು ಅವರ ನಂಬಿಕೆ ಆಗಿತ್ತು. ವೃತ್ತಿಪರ ಬಾಂಧವ್ಯವನ್ನು ಬಯಸುತ್ತಿದ್ದ ಅವರು ಅಶಿಸ್ತನ್ನು ಸಹಿಸುತ್ತಿರಲಿಲ್ಲ. ಈ ನಾಟಕದ ಒಂಬತ್ತನೆಯ ಪ್ರದರ್ಶನಕ್ಕೆ ಮುಖ್ಯ ಕಲಾವಿದ ಬರುವುದಿಲ್ಲವೆಂದು ಹೇಳಿದ್ದರಿಂದ ಪ್ರದರ್ಶನ ರದ್ದಾಗಬೇಕಾಯಿತು. ಈ ಬಗ್ಗೆ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ, ಇನ್ಮುಂದೆ ಬಾಲಭವನದ ಹೊಸಿಲು ತುಳಿಯಕೂಡದು ಎಂದು ಕಠಿಣವಾಗಿ ನನಗೆ ಹೇಳಿದ್ದರು. ಹೀಗೆ
ಹೇಳುವಾಗ ಯಾವುದೇ ದರ್ಪ ಇರಲಿಲ್ಲ. ಗೌರವದಿಂದಲೇ ನನ್ನ ತಪ್ಪು ಮನವರಿಕೆಯಾಗುವಂತೆ ಹೇಳಿ ದಂಡಿಸಿದ್ದರು. ಆ ಅವರ ಧ್ವನಿ, ಧಾಟಿ ಇವೆರಡೂ ಶಿಸ್ತನ್ನು ರೂಪಿಸಿತು.

80ರ ದಶಕದಲ್ಲಿ ಕೆನರಾ ಬ್ಯಾಂಕ್ ನಿರ್ದೇಶಕ ಮಂಡಳಿಗೆ ವಿಮಲಾ ಅವರನ್ನು ನೇಮಿಸಲಾಗಿತ್ತು. ಆಡಳಿತದಲ್ಲಿ ಮಹಿಳಾ ದೃಷ್ಟಿಕೋನದ ಮಹತ್ವವನ್ನು ಮನಗಾಣಿಸುವಂತೆ ಕರಕುಶಲಗಾರರಿಗೆ ತರಬೇತಿ ಮತ್ತು ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ಕೈಗೆತ್ತಿಕೊಂಡರು. ಅವರ ಪರಿಕಲ್ಪನೆಯ ‘ಕೌಶಲ್ಯ’ ಯೋಜನೆ ಆರಂಭವಾಗಿದ್ದು ಹೀಗೆ. ಮುಂದೆ ಶಿಲ್ಪಕಲಾ ಗ್ರಾಮ ಸ್ಥಾಪನೆಗೆ ಇದು ಪ್ರೇರಣೆ ಆಯಿತು.

ತಾಯಿ ಅಮ್ಮಣ್ಣಿ ಅಯ್ಯಂಗಾರ್ ಅವರಿಂದ ಬಂದ ಬಳುವಳಿ ಇದು. ಅವರೂ ಆ ಕಾಲಕ್ಕೆ ವಸ್ತ್ರವಿನ್ಯಾಸ ಮಾಡಿ, ರೇಷ್ಮೆ ಸೀರೆಗಳಿಗೆ ಹೊಸಹೊಸ ಚಿತ್ತಾರಗಳ ಅಂಚು, ಒಡಲು ಹೆಣೆಯಲು ಹೇಳಿಕೊಡುತ್ತಿದ್ದರು. ಮಗಳು ವಿಮಲಾ ಕರಕುಶಲ ಕರ್ಮಿಗಳೊಂದಿಗೆ ಸಂಪರ್ಕ ಬೆಳೆಯಲು ಸಾಧ್ಯವಾದುದು ಮನೆಗೆ ಬರುವ ನೇಕಾರರಿಂದ. ಕಲೆ ಉಳಿಯಬೇಕು ಎಂಬುದು ಅವರ ತುಡಿತವಾಗಿತ್ತು.

ಅಂತಃಕರಣದ ಮಹಾಒಡಲು ಅವರದ್ದಾಗಿತ್ತು. ಸಿ.ವಿ. ರಾಮನ್ ಅವರ ಪತ್ನಿ ಲೋಕಸುಂದರಿ ಅವರು ಆರಂಭಿಸಿದ್ದ ಸೇವಾ ಸದನವನ್ನು 1950ರಲ್ಲಿ ವಿಮಲಾ ಅವರ ಸುಪರ್ದಿಗೆ ಒಪ್ಪಿಸಿದರು. ನಿರಾಶ್ರಿತ ಮಹಿಳೆಯರು ಮತ್ತು ಮಕ್ಕಳ ದೇಖುರೇಕಿಗಾಗಿ ಆರಂಭಿಸಿದ್ದ ಈ ಸಂಸ್ಥೆಯನ್ನು ಬೆಂಗಳೂರು ಮತ್ತು ಮಲ್ಲೇಶ್ವರದ ಅಸ್ಮಿತೆಯಾಗಿ ಬೆಳೆಸಲಾಯಿತು.

ವಿಮಲಾ ಅವರು ರಂಗಾಚಾರ್ ಅವರನ್ನು ಮದುವೆಯಾದಾಗ, ಪತಿ ವೈದ್ಯ ಆಗಿರುವುದರಿಂದ ತಾವೂ ನರ್ಸಾಗಿ ಅವರೊಂದಿಗೆ ಸೇವೆ ಸಲ್ಲಿಸಬೇಕು ಎಂದು ಬಯಸಿದ್ದರು. ಆದರೆ ಅವರ ಪತಿ ಸ್ವತಂತ್ರ ವ್ಯಕ್ತಿತ್ವ ರೂಢಿಸಿಕೊಳ್ಳಲು ಸೂಚಿಸಿದ್ದರಿಂದ ಮಕ್ಕಳ ಮನಃಶಾಸ್ತ್ರ ಓದಿದರು. ತಂದೆ ಅವರೊಂದಿಗೆ ನಾಟಕಗಳನ್ನು ನೋಡಲು ಹೋಗುತ್ತಿದ್ದ ಅವರು, ಆಮೇಲೆ ತಮ್ಮ ಪತಿಯೊಂದಿಗೆ ನಾಟಕಗಳಲ್ಲಿ ನಟಿಸಲಾರಂಭಿಸಿದರು. ಆ ಕಾಲದಲ್ಲಿ ಬೆಂಗಳೂರಿನ ಕಾಲೇಜುಗಳಲ್ಲಿ ಮಹಿಳೆಯರ ತಂಡ ನಾಟಕವಾಡುತ್ತಿದ್ದರೆ ಗಂಡು ಪಾತ್ರಗಳನ್ನೂ ಮಹಿಳೆಯರೇ ನಿರ್ವಹಿಸುತ್ತಿದ್ದರು. ಗಂಡು ಮಕ್ಕಳ ತಂಡಗಳಿದ್ದರೆ ಹೆಣ್ಣು ಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದರು. ವಿಮಲಾ ಅವರು ಮಾತ್ರ ಸಂಪ್ರದಾಯಸ್ಥ ಮನಃಸ್ಥಿತಿಯ ಎಂ.ವಿ. ಶಾಸ್ತ್ರಿಗಳಿಗೆ ‘ನಾನು ನಟಿಸುತ್ತಿಲ್ಲವೇ’? ಎಂದು ಪ್ರಶ್ನಿಸಿ ಅವರ ಮನೋಭಾವ ಬದಲಿಸಿದ್ದರು.

ಸಿದ್ಧಚೌಕಟ್ಟನ್ನು ಮೀರಿ ಬೆಳೆಯುವುದು ಅವರಿಗಿಷ್ಟದ ಕೆಲಸವಾಗಿತ್ತು. ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಿದ್ದರೂ ಮುಕ್ತವಾಗಿ ಇರುವುದನ್ನು ಅವರು ಬದುಕಿ ತೋರಿದರು.

ವಿಮಲಾ ರಂಗಾಚಾರ್ ಅವರ ಪರಿಚಿತರ ಬಳಗವೇ ದೊಡ್ಡದಿತ್ತು. ಯಾವಾಗಲೂ ಯಾರಿಂದಲೂ ಯಾವುದನ್ನೂ ಅಪೇಕ್ಷಿಸದೇ ಕೆಲಸ ಮಾಡುತ್ತಿದ್ದ ಅವರ ಸುತ್ತಲೂ ಅಧಿಕಾರಶಾಹಿಗಳ ಮತ್ತು ಸಿರಿವಂತರ ಗುಂಪು ಸದಾ ಸೇರಿರುತ್ತಿತ್ತು. ಎಲ್ಲರನ್ನೂ ಒಂದೇ ದೃಷ್ಟಿಯಿಂದ ಅವರು ಕಾಣುತ್ತಿದ್ದರಿಂದ ಅವರು ಕೈ ಇರಿಸಿದ ಎಲ್ಲ ಕೆಲಸಗಳೂ ಹೂ ಎತ್ತಿದಂತೆ ಸರಾಗವಾಗಿ ಆಗುತ್ತಿದ್ದವು.‘ನೀಡಿರುವ ಜವಾಬ್ದಾರಿಯನ್ನು ಸಂಪೂರ್ಣ ಬದ್ಧತೆ ಮತ್ತು ಸಮರ್ಪಣೆಯಿಂದ ಮಾಡಿ. ಯಾರ ಯಾವ ಟೀಕೆಗಳಿಗೂ ಉತ್ತರಿಸಬೇಕಾಗಿಲ್ಲ. ಯಾರಿಂದಲೂ ಏನೂ ನಿರೀಕ್ಷಿಸಬೇಕಾಗಿಲ್ಲ, ಯಾವ ಅಪೇಕ್ಷೆಗಳನ್ನೂ ಇಟ್ಟುಕೊಳ್ಳಬೇಕಾಗಿಲ್ಲ. ಅವು ತಾವಾಗಿಯೇ ತಮ್ಮ ಉದ್ದೇಶ ಈಡೇರುವಂತೆ ಬೆಳೆಯುತ್ತವೆ ಎಂಬಂತೆ ಅವರು ಬದುಕಿದರು.

ಎಡಿಎ ರಂಗಮಂದಿರ ಆರಂಭವಾಗಿದ್ದೂ ಹೀಗೆಯೇ. ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಕಚೇರಿಗೆ ಮೊದಲು ಸ್ಥಳ ಒದಗಿಸಲು ಮನಸು ಮಾಡಿದ್ದೇ ವಿಮಲಾ ರಂಗಾಚಾರ್. ಎಡಿಎ ರಂಗಮಂದಿರದ ಮೇಲ್ಭಾಗದಲ್ಲಿ ಜಾಗ ನೀಡಿರದೇ ಇದ್ದರೆ ಅದಿಲ್ಲಿಗೆ ಬರುತ್ತಲೇ ಇರಲಿಲ್ಲ. ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ರೂಪು ತಳೆಯಲು ಗಟ್ಟಿಯಾಗಿ ನಿಂತವರಲ್ಲಿ ಇವರೂ ಒಬ್ಬರು.

ಬೆಂಗಳೂರಿನಲ್ಲಿ ನಾಟಕಗಳ ಪ್ರದರ್ಶನಕ್ಕೆ, ನೃತ್ಯಗಳ ಪ್ರದರ್ಶನಕ್ಕೆ ವೇದಿಕೆಗಳಿದ್ದರೆ ಅವು ವಿಮಲಾ ಅವರ ಪರಿಶ್ರಮದಿಂದ ತಲೆ ಎತ್ತಿರುವ ರಂಗಮಂದಿರಗಳಾಗಿವೆ.

ಸಬಲೀಕರಣ, ಸಮಾನತೆ, ಸಮಾನ ಅವಕಾಶಗಳು ಇವೆಲ್ಲ ಪದಗಳ ಪರಿಕಲ್ಪನೆಯಾಗುವ ಕಾಲದಲ್ಲಿ ಕೇವಲ ಬದ್ಧತೆ ಮತ್ತು ಸಿದ್ಧಚೌಕಟ್ಟಿನಿಂದಾಚೆ ಬರುವ ಸಾಹಸ ಮನೋಭಾವವನ್ನು ಕಾರ್ಯರೂಪಕ್ಕಿಳಿಸುವ ಕಾರ್ಯಕ್ಷಮತೆಯಿಂದ ವಿಮಲಾ ರಂಗಾಚಾರ್ ಬದುಕಿದರು. 2025ರ ಫೆ.25ರಂದು ತಮ್ಮ ಬದುಕಿನ ಯಾನ ಮುಗಿಸಿದ ವಿಮಲಾ ಅವರ ಬಗ್ಗೆ ನುಡಿನಮನ ಕಾರ್ಯಕ್ರಮಗಳಾದಾಗ ಎಲ್ಲರೂ ಅವರ ಕೆಲಸಗಳ ಬಗ್ಗೆಯೇ ಮಾತಾಡಿದರು. ಮಾತುಗಳಾಡುತ್ತ ಅವರು ಬದುಕಲಿಲ್ಲ. ಅವರ ಬದುಕೇ ಮಾತುಗಳಾದವು. ಪ್ರೇರಣೆಯ ಮಾತು, ಮನೋಸ್ಥೈರ್ಯದ ಮಾತು, ದೂರದೃಷ್ಟಿಯ ಮಾತು, ಲಲಿತ ಕಲೆಗಳ ಉಪಾಸನೆ ಹಾಗೂ ಪೋಷಣೆಯ ಮಾತು.

ಆ ಜೀವ... ನಮ್ಮ ನಡುವೆ ಇಂಥ ಜೀವನ ನಡೆಸಿ ಹೋಯಿತು.

ನಿರೂಪಣೆ: ರಶ್ಮಿ ಎಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.