ಸರ್ಕಾರವು ಕೌಟುಂಬಿಕ ಕಲ್ಯಾಣ ಯೋಜನೆಗಳನ್ನು ರೂಪಿಸಿ, ಅದಕ್ಕಾಗಿ ನಿಧಿಯನ್ನು ನಿಗದಿಪಡಿಸಲು ವಿವಾಹಿತ ದಂಪತಿಗಳ ಅಂಕಿ–ಅಂಶ ಬೇಕಿರುತ್ತದೆ. ಅದು ದೊರೆಯುವುದು ವಿವಾಹಗಳು ನೋಂದಣಿಯಾಗಿದ್ದಾಗ ಮಾತ್ರ. ಬಾಲ್ಯ ವಿವಾಹವನ್ನು ತಡೆಗಟ್ಟಲು ವಿವಾಹ ನೋಂದಣಿ ಒಂದು ಮುಖ್ಯವಾದ ಸಾಧನ. ಇಷ್ಟೆ ಅಲ್ಲದೇ ಹಲವು ಸಂದರ್ಭಗಳಲ್ಲಿ ವಿವಾಹ ನೋಂದಣಿ ಆಪತ್ಬಾಂಧವನಂತೆ ಕೆಲಸ ಮಾಡುತ್ತದೆ.