ಸೀರೆ ನಮ್ಮ ದೇಶದ ಹೆಣ್ಣು ಮಕ್ಕಳ ಸಾಂಪ್ರದಾಯಕ ಉಡುಗೆ. ಬಹುತೇಕ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳು ಇಷ್ಟಪಟ್ಟು ತೊಡುವ ಈ ಸೀರೆ ಅನೇಕ ಬಣ್ಣ, ವಿನ್ಯಾಸದಲ್ಲಿ ಮಾರುಕಟ್ಟೆಯಲ್ಲಿದೆ. ಅದರಲ್ಲೂ ಹೂವಿನ ಪ್ರಿಂಟ್ ಇರುವ ಸೀರೆಗಳನ್ನು ಯುವತಿಯರು ಹೆಚ್ಚಾಗಿ ತೊಡುವುದು ಈಗಿನ ಟ್ರೆಂಡ್.

ಹೂವಿನ ಚಿತ್ತಾರವಿರುವ ಸೀರೆ ಹಳೆಯ ಕಾಲದ್ದಾದರೂ ಈಗ ಹೊಸ ಅಲೆಯನ್ನೇ ಎಬ್ಬಿಸಿದೆ. ಸಿನಿಮಾ ನಟಿಯರು ಪ್ರಚಾರದ ವೇಳೆ ಮತ್ತು ಕಾರ್ಯಕ್ರಮಗಳಲ್ಲಿ ಫ್ಲೋರಲ್ ಪ್ರಿಂಟೆಡ್ ಸೀರೆಗಳನ್ನು ತೊಡುವ ಮೂಲಕ ಸಾಮಾನ್ಯ ಜನರಲ್ಲೂ ಈ ಸೀರೆಗಳ ಬಗ್ಗೆ ಬೇಡಿಕೆ ಉಂಟಾಗಿದೆ. ಕಾಲೇಜು, ಕಚೇರಿಗಳಿಗಲ್ಲದೇ ಸಭೆ -ಸಮಾರಂಭಗಳಿಗೆ ಹೋಗುವ ಹುಡುಗಿಯರು ಹೆಚ್ಚಾಗಿ ಹೂವಿನ ಪ್ರಿಂಟ್ ಇರುವ ಸೀರೆಗಳನ್ನು ತೊಡುವುದು ಫ್ಯಾಷನ್ ಆಗಿದೆ. ಬೇಸಿಗೆಯಲ್ಲಿ ಕೂಡ ಇವು ಸೂಕ್ತ.

ಹೂವಿನ ಚಿತ್ತಾರವನ್ನು ಯಾವ ಬಣ್ಣದ ಸೀರೆಗಳ ಮೇಲೆ ಬೇಕಾದರೂ ಮೂಡಿಸಬಹುದು. ರೇಷ್ಮೆ, ಫ್ಯಾನ್ಸಿ, ಸ್ಯಾಟಿನ್, ಚೈನಾ ಸಿಲ್ಕ್, ಶಿಫಾನ್ ಹೀಗೆ ಎಲ್ಲಾ ರೀತಿಯ ಸೀರೆಗಳ ಮೇಲೆ ನಮಗಿಷ್ಟವಾಗುವಂತಹ ಕಸೂತಿ, ಚಿತ್ರಕಲೆ, ಬ್ಲಾಕ್ ಪ್ರಿಂಟ್ ಮೊದಲಾದ ಬಗೆಯಲ್ಲಿ ಹೂವಿನ ವಿನ್ಯಾಸವನ್ನು ಮೂಡಿಸಬಹುದು.

ಸೀರೆಗೊಪ್ಪುವ ರವಿಕೆ
ಹೂವಿನ ಚಿತ್ತಾರವಿರುವ ಸೀರೆಗಳಿಗೆ ಹೊಂದಾಣಿಕೆಯಾಗುವಂತಹ ಸೂಕ್ತ ರವಿಕೆಯನ್ನು ತೊಡುವುದು ಉತ್ತಮ. ಸೀರೆ ತುಂಬಾ ಹೂವಿನ ಚಿತ್ತಾರವಿದ್ದರೆ ಸೀರೆ ಬಣ್ಣಕ್ಕೆ ಹೋಲುವ ಸರಳ ರವಿಕೆ ಚೆಂದ ಕಾಣಿಸುತ್ತದೆ. ಕೆಲವೇ ಕೆಲವು ಕಡೆಗಳಲ್ಲಿ ಹೂವಿನ ಚಿತ್ತಾರವಿರುವ ಅಥವಾ ಸೀರೆಯ ಸುತ್ತಲೂ ಹೂವಿನ ಚಿತ್ತಾರವಿದ್ದು, ಸೆರಗು ಸರಳವಾಗಿದ್ದರೆ ಸೀರೆಗೆ ಅದೇ ಹೂವಿನ ಪ್ರಿಂಟ್ ಇರುವ ರವಿಕೆ ತೊಟ್ಟರೆ ಸುಂದರವಾಗಿ ಕಾಣಿಸುತ್ತದೆ. ಸೀರೆಯ ಸೆರಗಿಗೆ ನೆರಿಗೆ ಹಾಕದೆ ಇದ್ದರೆ ಹಾಲ್ಟರ್ ನೆಕ್ ರವಿಕೆ, ಆಫ್ ಶೋಲ್ಡರ್ ರವಿಕೆ, ಸ್ಲೀವ್ ಮತ್ತು ಸ್ಲೀವ್‌ಲೆಸ್ ರವಿಕೆ, ಅರ್ಧ ತೋಳಿನ ರವಿಕೆ, ಕೋಲ್ಡ್ ಶೋಲ್ಡರ್, ಬ್ಯಾಕ್‌ಲೆಸ್, ಚೈನೀಸ್ ಕಾಲರ್, ಜಾಕೆಟ್ ಬ್ಲೌಸ್, ಶರ್ಟ್ ಬ್ಲೌಸ್ ವಿನ್ಯಾಸವಿರುವ ರವಿಕೆ ಹಾಗೂ ತೆಳು ಸೀರೆಗೆ ವಿವಿಧ ವಿನ್ಯಾಸವಿರುವ ರವಿಕೆ ತೊಡುವುದರಿಂದ ಉಟ್ಟವರ ಅಂದ ಹೆಚ್ಚುತ್ತದೆ.

ವಿವಿಧ ಸಮಾರಂಭಗಳಿಗೆ ಒಪ್ಪುವ ಸೀರೆ
ಸಾಮಾನ್ಯವಾಗಿ ಹುಡುಗಿಯರು ಹೂವಿನ ಚಿತ್ತಾರವಿರುವ ಸೀರೆಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಕಚೇರಿ ಮತ್ತು ಕಾಲೇಜು ಸಮಾರಂಭಗಳಿಗೆ ಹೂವಿನ ಚಿತ್ತಾರವಿರುವ ಶಿಫಾನ್ ಸೀರೆಗಳು ಸೂಕ್ತ. ತಿಳಿಬಣ್ಣದ ತೆಳು ಸೀರೆಯ ಅಂದವನ್ನು ಹೆಚ್ಚಿಸುವಂತ ಬಿಳಿ ಬಣ್ಣದ ಕ್ಲಚ್, ಬಿಳಿ ಹೈ ಹಿಲ್ಸ್, ಮುತ್ತಿನ ಕಿವಿಯೋಲೆ, ಕೊರಳಿಗೆ ದಪ್ಪ ಮಣಿಹಾರ, ದಪ್ಪ ಬಳೆ, ಉಂಗುರ ಹಾಕಿಕೊಂಡರೆ ಹುಡುಗಿಯರ ಅಂದ ಇಮ್ಮಡಿಗೊಳ್ಳುತ್ತದೆ.

ಸೀರೆ ಆಯ್ಕೆ ಹೀಗಿರಲಿ..

*ಸೀರೆಗಳ ಮೇಲೆ ದೊಡ್ಡದಾಗಿ ಹೂವಿನ ಚಿತ್ತಾರವಿದ್ದರೆ ಸೀರೆಯ ಬಾರ್ಡರ್ ಚಿಕ್ಕದಾಗಿದ್ದರೆ ಚೆಂದ ಎನಿಸುತ್ತದೆ.

* ಹೂವಿನ ಚಿತ್ತಾರವಿರುವ ತೆಳು ಸೀರೆಯ ಸೆರಗಿಗೆ ನೆರಿಗೆ ಮಾಡದೆ ಸಿಂಗಲ್ ಪಿನ್ ಚುಚ್ಚಿದರೆ ಸೂಕ್ತ.

* ಫ್ಲೋರಲ್ ಪ್ರಿಂಟ್ ಇರುವ ಸೀರೆಗಳ ಮೇಲೆ ಸಣ್ಣ ಕಸೂತಿ ಇದ್ದರೆ ಚೆನ್ನಾಗಿ ಕಾಣಿಸುತ್ತದೆ. ಸೀರೆ ಉಡುವವರ ಎತ್ತರ, ಗಾತ್ರವನ್ನು ಆಧರಿಸಿ ಸೀರೆಗಳನ್ನು ಆಯ್ದುಕೊಳ್ಳುವುದಲ್ಲದೆ ಕುಳ್ಳಗಿರುವವರು ಸಣ್ಣ ಪ್ರಿಂಟ್ ಇರುವ ಹಾಗೂ ಎತ್ತರವಿರುವವರು ಗಾಢಬಣ್ಣದ ಪ್ರಿಂಟ್ ಇರುವ ಸೀರೆಯನ್ನು ಆಯ್ದುಕೊಂಡರೆ ಉತ್ತಮ.

* ಸೀರೆಯ ಮೇಲೆ ಹೂವಿನ ಬಣ್ಣ ಗಾಢವಾಗಿದ್ದರೆ, ಕಡಿಮೆ ಮೇಕಪ್ ಮಾಡಿಕೊಳ್ಳುವುದು ಸೂಕ್ತ.

ಸೀರೆಯ ಬಣ್ಣಕ್ಕೆ ಹೊಂದುವಂತ ಹೂವಿನ ಪ್ರಿಂಟ್
ಸಾಮಾನ್ಯವಾಗಿ ಸೀರೆಗಳ ಬಣ್ಣದ ಆಧಾರದ ಮೇಲೆ ಹೂವಿನ ಪ್ರಿಂಟ್ ಹಾಕಿದರೆ ಚೆನ್ನಾಗಿ ಕಾಣಿಸುತ್ತದೆ. ಗಾಢ ಬಣ್ಣದ ಸೀರೆಗೆ ತಿಳಿ ಬಣ್ಣದ ಹೂವಿನ ಪ್ರಿಂಟ್, ತಿಳಿಬಣ್ಣದ ಸೀರೆಯ ಮೇಲೆ ಗಾಢ ಬಣ್ಣದ ಹೂವಿನ ಪ್ರಿಂಟ್ ಚೆನ್ನಾಗಿ ಒಪ್ಪುತ್ತದೆ. ಗಾಢ ಬಣ್ಣದ ಸೀರೆಗೆ ದೊಡ್ಡದಾದ ಬಾರ್ಡರ್ ಹಾಗೆಯೇ ತಿಳಿಬಣ್ಣದ ಸೀರೆಗೆ ಸಣ್ಣದಾದ ಆಕರ್ಷಕ ಬಾರ್ಡರ್ ಒಪ್ಪುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.