ಹಕ್ಕುಗಳಿಗಾಗಿ, ಬದುಕಿಗಾಗಿ ಹೋರಾಟ ಮಾಡುತ್ತಾರೆ. ಆದರೆ, ಆ ಹೋರಾಟವನ್ನು, ಅದರಿಂದ ಸಮಾಜಕ್ಕೆ ಸಿಕ್ಕ ಕೊಡುಗೆಯನ್ನು, ಅವರ ಬದುಕನ್ನು ದಾಖಲಿಸುವುದಿಲ್ಲ. ಇವೆಲ್ಲವನ್ನೂ ದಾಖ ಲಿಸಿ ತಿಳಿಸುವ ಸಲುವಾಗಿ ‘ಗಾರ್ಮೆಂಟ್ ವರ್ಕರ್ಸ್ ಆರ್ಕೈವ್’ ಎಂಬ ವೆಬ್‌ಸೈಟ್ ಆರಂಭಿಸಲಾಗಿದೆ.
ಸ್ವಾತಿ ಶಿವಾನಂದ್, ಉಪನ್ಯಾಸಕಿ, ವೆಬ್‌ಸೈಟ್ ರೂವಾರಿ
ಭಾರತದ ವಸ್ತುಗಳಿಗೆ ಅಮೆರಿಕದಲ್ಲಿ ಟ್ರಂಪ್ ಸುಂಕ ಜಾಸ್ತಿ ಮಾಡಿದರೆ ಇಲ್ಲಿ ಸುಮಾರು ಜನ ಕೆಲಸ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಚಿಂತನೆ ನಡೆಸಲು ಈ ಪ್ರದರ್ಶನ ನಾಂದಿಯಾಯಿತು.
ದು.ಸರಸ್ವತಿ, ಹೋರಾಟಗಾರ್ತಿ
ಬೆಂಗಳೂರನ್ನು ಐ.ಟಿ ಹಬ್ ಎನ್ನಲಾಗುತ್ತದೆ. ಆದರೆ ಗಾರ್ಮೆಂಟ್ಸ್ ಕ್ಷೇತ್ರಕ್ಕೂ ಜಾಗತಿಕ ವ್ಯಾಪ್ತಿ ಇದೆ. ಈ ಕಾರ್ಮಿಕರೂ ಅಷ್ಟೇ ಪ್ರಮಾಣದಲ್ಲಿ ವಿದೇಶಿ ವಿನಿಮಯಕ್ಕೆ ಕಾರಣರಾಗಿದ್ದಾರೆ. ಆದರೂ ಇವರು ಮಾತ್ರ ಅವ್ಯಕ್ತರಾಗಿಯೇ ಉಳಿಯುವುದೇಕೆ ಎನ್ನುವುದರ ಅವಲೋಕನಕ್ಕಾಗಿ ಈ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.