ಪೌರಾಣಿಕ ಕಥೆ ಹೇಳುವ ಪಝಲ್
ಮಕ್ಕಳಿಗಾಗಿ ವಿಷ್ಣುವಿನ ದಶಾವತಾರ, ರಾಮಾಯಣ, ಮಹಾಭಾರತ ಪಝಲ್ಸ್, ಚೆಸ್, ಬೋರ್ಡ್‌ಗಳಿವೆ. ಚಿಕ್ಕವಯಸ್ಸಿನ ಮಕ್ಕಳಿಗೆ ಬಾರ್ಬಿ, ಸ್ಪೈಡರ್ ಮ್ಯಾನ್, ಸೂಪರ್‌ಮ್ಯಾನ್ ಗಳಿರುವ ಪಝಲ್ ಬೋರ್ಡ್ ಗೊತ್ತು. ಆದರೆ, ಈ ನೆಲದ ಕಥೆಗಳನ್ನು, ಪೌರಾಣಿಕ ಕಥೆಗಳನ್ನು ಈ ಪಝಲ್ಸ್ ಬೋರ್ಡ್ ಮೂಲಕ ಕಲಿಸಬಹುದು. ಇದರ ಜತೆಗೆ ಬಣ್ಣ ಹಚ್ಚುವ ಶೀಟ್‌ಗಳಿರುತ್ತವೆ. ಹೆಚ್ಚಿನ ಮಾಹಿತಿಗೆ ಕ್ಯುಆರ್ ಕೋಡ್ ಕೂಡ ನೀಡಲಾಗಿದೆ.