ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟ್ರೀಟ್‌ ಸ್ಟೈಲ್‌ ಫ್ಯಾಷನ್‌ಈಗಿನ ಟ್ರೆಂಡ್‌

Last Updated 30 ಜನವರಿ 2020, 19:30 IST
ಅಕ್ಷರ ಗಾತ್ರ

ಭಾರತದ ಮಧ್ಯಮ ವರ್ಗದವರ ಆದಾಯದ ಮಟ್ಟ ಹೆಚ್ಚಾದಂತೆ ಗ್ರಾಹಕ ವಸ್ತುಗಳನ್ನು ಖರೀದಿಸುವ ಸಾಮರ್ಥ್ಯವೂ ಸಹಜವಾಗಿಯೇ ಜಾಸ್ತಿಯಾಗಿದೆ. ಇದು ಫ್ಯಾಷನ್‌ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಬ್ರ್ಯಾಂಡ್‌, ಲೇಬಲ್‌ ಅನ್ನು ನೋಡಿ ಉಡುಪು ಖರೀದಿಸುವ ಇಂದಿನ ಯುವಕ/ ಯುವತಿಯರು ಟ್ರೆಂಡ್‌ ಬದಲಾದಂತೆ ತಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಅನ್ನು ಕೂಡ ಬದಲಾಯಿಸಿಕೊಳ್ಳುತ್ತಿರುವುದು ವೇದ್ಯ. ಆನ್‌ಲೈನ್‌ ಷಾಪಿಂಗ್‌ನಿಂದಾಗಿ ಈಗ ಖರೀದಿ ಕೂಡ ಸುಲಭ.

ಇತ್ತೀಚಿನ ಟ್ರೆಂಡ್‌ ಸ್ಟ್ರೀಟ್‌ ಸ್ಟೈಲ್‌ ಫ್ಯಾಷನ್‌. ನೋಡಲು ಟ್ರೆಂಡಿ, ಧರಿಸಲು ಸುಲಭ. ಯಾವುದರ ಜೊತೆಯಾದರೂ ಮಿಕ್ಸ್‌ ಅಂಡ್‌ ಮ್ಯಾಚ್‌ ಮಾಡಬಹುದು. ಯಾವ ರೀತಿಯ ಉಡುಪುಗಳನ್ನು ನೀವು ಕಲ್ಪಿಸಿಕೊಳ್ಳುತ್ತೀರೋ ಅಂತಹದ್ದನ್ನು ಪೂರೈಸಲು ಉಡುಪು ವಿನ್ಯಾಸಕರೂ ಸಿದ್ಧರಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವ ಯುವಕ/ ಯುವತಿಯರು ವೇಗವಾಗಿ ಬದಲಾಗುತ್ತಿರುವ ಫ್ಯಾಷನ್‌ ಬಗ್ಗೆ ಅಪ್‌ಡೇಟ್‌ ಆಗುತ್ತಿದ್ದಾರೆ. ಇದು ಪರೋಕ್ಷವಾಗಿ ಸ್ಟ್ರೀಟ್‌ ಸ್ಟೈಲ್‌ ಫ್ಯಾಷನ್‌ ಮೇಲೆ ಪರಿಣಾಮ ಬೀರುತ್ತಿದೆ.

ಅಷ್ಟೊಂದು ಸಾಂಪ್ರದಾಯಕವಲ್ಲದ, ಗಾಢ ರಂಗಿನ, ಎದ್ದು ಕಾಣುವಂತಹ ಈ ಉಡುಪುಗಳನ್ನು ಧರಿಸಿದರೆ ಆರಾಮದಾಯಕ. ಜೊತೆಗೆ ಸೌಂದರ್ಯವೂ ಹೆಚ್ಚುತ್ತದೆ ಎಂಬುದು ಫ್ಯಾಷನ್‌ ವಿನ್ಯಾಸಕರ ಅಂಬೋಣ. ಹುಡುಗಿಯರು ಧರಿಸುವ ಉಡುಪುಗಳನ್ನು ಹೆಚ್ಚು ಮುತುವರ್ಜಿ ವಹಿಸಿ ವಿನ್ಯಾಸ ಮಾಡಲಾಗುತ್ತಿದೆ. ಅಂದರೆ ಉಡುಪಿನ ಕಟ್‌, ಪ್ರಿಂಟ್‌, ಬಣ್ಣದ ವಿಷಯವನ್ನು ತೆಗೆದುಕೊಂಡರೆ ಇದು ಪ್ರತ್ಯೇಕವಾಗಿಯೇ ನಿಲ್ಲುತ್ತದೆ.

ಸ್ಕರ್ಟ್‌, ಬೆಲ್‌ಬಾಟಂ ಪ್ಯಾಂಟ್‌, ಫ್ರಾಕ್‌, ಶರ್ಟ್‌ ಡ್ರೆಸ್‌, ಮ್ಯಾಕ್ಸಿ.. ಮೊದಲಾದವುಗಳಿಗೆ ವಿಶೇಷ ವಿನ್ಯಾಸ ನೀಡಲಾಗಿದೆ. ಇವು ಸ್ವಲ್ಪ ಸಡಿಲವಾಗಿದ್ದು, ಧರಿಸಲು ಆರಾಮದಾಯಕ ಎಂಬುದು ಇವುಗಳ ವೈಶಿಷ್ಟ್ಯ.

ಒಂದೇ ರಂಗಿನ ಟಾಪ್‌ ಮತ್ತು ಬಾಟಂ ಧರಿಸುವುದು ಕೂಡ ಈ ಸ್ಟ್ರೀಟ್‌ ಫ್ಯಾಷನ್‌ನಲ್ಲಿ ಬರುತ್ತದೆ. ಸಡಿಲವಾದ ಪಲಾಝೋ ಮೇಲೆ ಟೀ ಶರ್ಟ್‌ ಹಾಗೂ ಜಾಕೆಟ್‌ ಧರಿಸಬಹುದು. ಪ್ಯಾರಲಲ್‌ ಮೇಲೊಂದು ಸಡಿಲ ಶರ್ಟ್‌ ಹಾಕಿಕೊಳ್ಳಬಹುದು. ಇವು ಕಾಲೇಜು ಹುಡುಗಿಯರಲ್ಲಿ ಮಾತ್ರವಲ್ಲ, ಆಫ್‌ಬೀಟ್‌ ವೃತ್ತಿ ಮಾಡುತ್ತಿರುವ ಯುವತಿಯರಲ್ಲೂ ಕ್ರೇಝ್‌ ಮೂಡಿಸಿದೆ.

(ಪೂರಕ ಮಾಹಿತಿ: ವಸ್ತ್ರ ವಿನ್ಯಾಸಕ ಜತೀನ್‌ ಆರ್ಡೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT